Video: ಕಲಿಯುಗದ ಶ್ರವಣ ಕುಮಾರ; ತಾಯಿಯನ್ನು ಹೆಗಲ ಮೇಲೆ ಹೊತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದ ವ್ಯಕ್ತಿ
ತಾಯಿಯ ಪ್ರೀತಿ, ಕಾಳಜಿಗೆ ಹೇಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಹೇಗೋ, ಮಕ್ಕಳು ಕೂಡ ತಮ್ಮ ವಯಸ್ಸಾದ ತಂದೆ ತಾಯಿಯನ್ನು ಕಾಳಜಿಯಿಂದ ನೋಡಿಕೊಳ್ಳುವ ಕೆಲ ದೃಶ್ಯಗಳು ಹೃದಯಕ್ಕೆ ಹತ್ತಿರವಾಗುತ್ತವೆ. ವ್ಯಕ್ತಿಯೋರ್ವ ವಯಸ್ಸಾದ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ದಿರುವ ಹೃದಯ ಸ್ಫರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

ತೆಲಂಗಾಣ, ನವೆಂಬರ್ 05: ವಯಸ್ಸಾದ ತಂದೆ ತಾಯಿಯನ್ನು (Parents) ನೋಡಿಕೊಳ್ಳಲು ಹಿಂದೇಟು ಹಾಕುವ ಮಕ್ಕಳಿರುವ ಕಾಲದಲ್ಲಿ ಈ ವ್ಯಕ್ತಿಯೂ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ವ್ಯಕ್ತಿಯನ್ನು ಕಲಿಯುಗದ ಶ್ರವಣ ಕುಮಾರ ಎಂದರೂ ತಪ್ಪಿಲ್ಲ. ಹೌದು, ವ್ಯಕ್ತಿಯೋರ್ವ ಅನಾರೋಗ್ಯ ಪೀಡಿತ ಹೆತ್ತ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾನೆ. ವ್ಯಕ್ತಿಗೆ ತನ್ನ ತಾಯಿಯ ಮೇಲಿನ ಪ್ರೀತಿ ಎಷ್ಟಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಈ ಘಟನೆಯೂ ತೆಲಂಗಾಣದ ಜಗ್ತಿಯಾಲ್‌ನಲ್ಲಿ (Jagtial of Telangana) ನಡೆದಿದೆ ಎನ್ನಲಾಗಿದೆ.
ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಆಸ್ಪತ್ರೆಯತ್ತ ಸಾಗಿದ ವ್ಯಕ್ತಿ
ನಿಜಾಮಾಬಾದ್‌ನಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಈ ವ್ಯಕ್ತಿಯ ಹೆಸರು ಹೆಸರು ದೀಪಕ್. ತನ್ನ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಜಗ್ತಿಯಾಲ್‌ನಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇದ್ದ ಕಾರಣ, ಬಸ್ಸಿನಲ್ಲಿ ತಾಯಿಯೊಂದಿಗೆ ಜಗ್ತಿಯಾಲ್ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದಾನೆ. ಅಲ್ಲಿಂದ ಆಟೋ ಮಾಡಿಸಿಕೊಂಡು ಆಸ್ಪತ್ರೆಯತ್ತ ಹೋಗಲು ಮುಂದಾಗಿದ್ದಾನೆ. ಈ ವೇಳೆ ಆಟೋ ಚಾಲಕನ ಬಳಿ ಆಸ್ಪತ್ರೆಗೆ ಹೋಗಬೇಕೆಂದಾಗ 50 ರೂ ಆಟೋ ಚಾರ್ಚ್ ಅಗುತ್ತದೆ ಎಂದು ಹೇಳಿದ್ದಾನೆ. ಜೇಬಲ್ಲಿ ದುಡ್ಡಿಲ್ಲದ ಕಾರಣ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಆಸ್ಪತ್ರೆಯತ್ತ ಹೋಗಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:ಅಪ್ಪ ನಾನು ನಿನ್ನ ಜತೆಗಿದ್ದೇನೆ, ಮಾತು ಬಾರದ ತಂದೆಗೆ ಮಾತಾದ ಪುಟ್ಟ ಕಂದ
ಇದೇ ವೇಳೆ ಅದೇ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ಶಾಸಕ ಡಾ. ಸಂಜಯ್ ತಾಯಿಯನ್ನು ತನ್ನ ಹೆಗಲ ಮೇಲೆ ಹೊತ್ತು ಹೋಗುವ ಮಗನನ್ನು ಗಮನಿಸಿದ್ದಾರೆ. ಕೊನೆಗೆ ತಮ್ಮ ಕಾರಿನಲ್ಲಿ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅನಂತರದಲ್ಲಿ ಬಸ್ ನಿಲ್ದಾಣಕ್ಕೆ ತಂದು ಬಿಟ್ಟಿದ್ದಾರೆ. ಏನಾದರೂ ಅಗತ್ಯವಿದ್ದರೆ ಕರೆ ಮಾಡಲು ತಿಳಿಸಿದ್ದಾರೆ. ಸ್ಥಳೀಯರು ಶಾಸಕರ ಔದಾರ್ಯವನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ತಾಯಿಯ ಮೇಲೆ ಮಗನಿರುವ ಪ್ರೀತಿಯೂ ನೆಟ್ಟಿಗರ ಕಣ್ಣು ಒದ್ದೆಯಾಗಿಸಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Wed, 5 November 25




