Video: ಗ್ಲಾಸ್‌ನಲ್ಲಿದ್ದ ನೀರು ಚೆಲ್ಲದೇ ಕಿತ್ತಳೆ ಹಣ್ಣು ಹೊರತೆಗೆದ ಬಾಲಕಿ, ಈಕೆ ಬಳಸಿದ ಟ್ರಿಕ್ಸ್ ನೋಡಿ
ಈಗಿನ ಕಾಲದ ಮಕ್ಕಳು ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆನೇ. ಏನೇ ಕೇಳಿದ್ರೂ ಪಟ ಪಟನೇ ಉತ್ತರ ಹೇಳ್ತಾರೆ. ಅಷ್ಟೇ ಶಾರ್ಪ್ ಆಗಿರ್ತಾರೆ ಎನ್ನುವುದಕ್ಕೆ ಸಾಕ್ಷಿ ಎಂಬಂತಿದೆ ಈ ವಿಡಿಯೋ. ಪುಟ್ಟ ಹುಡುಗಿಯೊಬ್ಬಳು ನೀರು ತುಂಬಿದ ಗಾಜಿನ ಲೋಟದಲ್ಲಿದ್ದ ಕಿತ್ತಳೆ ಹಣ್ಣನ್ನು ಬುದ್ಧಿ ಉಪಯೋಗಿಸಿ ಹೊರ ತೆಗೆದಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

ಓದಿ ಮಾರ್ಕ್ (Mark) ಪಡೆದ್ರೆ ಸಾಲಲ್ಲ, ಕೆಲವೊಮ್ಮೆ ಬುದ್ಧಿವಂತಿಕೆ, ಸಣ್ಣ ಪುಟ್ಟ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ ಕಲೆಯೂ ತಿಳಿದಿರಲೇಬೇಕು. ಕೆಲವೊಮ್ಮೆ ದೊಡ್ಡವರಿಗಿಂತ ಮಕ್ಕಳೇ ಕೆಲವು ಸಮಸ್ಯೆಗಳಿಗೆ ಸುಲಭವಾಗಿ ಪರಿಹರಿಸ್ತಾರೆ. ಇಲ್ಲೊಬ್ಬ ಪುಟ್ಟ ಹುಡುಗಿಯೂ (Girl) ಬುದ್ಧಿ ಉಪಯೋಗಿಸಿ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿದ್ದಾಳೆ. ಹೌದು, ನೀರು ತುಂಬಿದ ಗ್ಲಾಸ್‌ನಲ್ಲಿದ್ದ ಸಿಪ್ಪೆ ಸುಲಿದ ಕಿತ್ತಳೆ ಹಣ್ಣನ್ನು ಒಂದನಿ ನೀರು ಚೆಲ್ಲದೇನೇ ಅತ್ಯಂತ ಸುಲಭವಾಗಿ ಹೊರಗೆ ತೆಗೆದಿದ್ದಾಳೆ. ಅದೇಗೆ ಸಾಧ್ಯ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು, ಈ ಸ್ಟೋರಿ ಓದಿ.
Enezator ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇಲ್ಲಿ ನೀರು ತುಂಬಿದ ಗಾಜಿನ ಲೋಟದಲ್ಲಿ ಸಿಪ್ಪೆ ತೆಗೆದ ಕಿತ್ತಳೆ ಹಣ್ಣಿದೆ. ಇಲ್ಲಿರುವ ಸವಾಲು ಒಂದು ಹನಿ ನೀರು ಕೆಳಗೆ ಚೆಲ್ಲದೇನೇ ಈ ಕಿತ್ತಳೆ ಹಣ್ಣನ್ನು ಹೊರಗೆ ತೆಗೆಯಬೇಕು. ಮೆದುಳಿಗೆ ಕೆಲಸ ನೀಡುವ ಈ ಟಾಸ್ಕ್‌ನ್ನು ಶಾಲೆಯಲ್ಲಿ ಮಾಡಲಾಗಿದೆ. ಒಬ್ಬರ ಹಿಂದೆ ಒಬ್ಬರಂತೆ ಮಕ್ಕಳು ಬಂದು ಈ ಕಿತ್ತಳೆ ಹಣ್ಣನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾಲ್ಕೈದು ಮಕ್ಕಳು ಪ್ರಯತ್ನ ಪಟ್ರು ನೀರು ಬೀಳಿಸದೇ ಕಿತ್ತಳೆ ಹಣ್ಣು ತೆಗೆಯಲು ಆಗಲಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
600 IQ
— Enezator (@Enezator) October 25, 2025
ಆದರೆ ಒಬ್ಬ ಹುಡುಗಿಯೂ ಲೋಟದಲ್ಲಿದ್ದ ಕಿತ್ತಳೆ ಹಣ್ಣನ್ನು ಹೊರಗೆ ತೆಗೆದಿದ್ದಾಳೆ. ಈ ಪುಟ್ಟ ಹುಡುಗಿ ನೀರು ಚೆಲ್ಲದಂತೆ ಈ ಹಣ್ಣನ್ನು ತೆಗೆಯಲು ಒಂದು ಬೆರಳನ್ನು ಲೋಟದ ಒಳಗೆ ಹಾಕಿ ಹಾಕಿ ನೀರನ್ನು ತಿರುಗಿಸುವುದನ್ನು ನೋಡಬಹುದು. ಈ ವೇಳೆಯಲ್ಲಿ ಬೆರಳು ಆಡಿಸ್ತಿದ್ದಂತೆ ಈ ಹಣ್ಣು ನಿಧಾನವಾಗಿ ಮೇಲೆ ಬಂದಿದೆ, ನೀರು ಚೆಲ್ಲಲಿಲ್ಲ. ಈ ಹುಡುಗಿಯ ಪ್ಲ್ಯಾನ್ ವರ್ಕ್ ಆಗಿರುವುದನ್ನು ನೋಡಬಹುದು.
ಇದನ್ನೂ ಓದಿ:ರಾತ್ರಿ ನಿದ್ದೆಗೆಟ್ಟು ಪ್ರಾಜೆಕ್ಟ್ ವರ್ಕ್ ಮಾಡುವ ಮಕ್ಕಳು; ಇದು ಇಂದಿನ ಶಿಕ್ಷಣ ವ್ಯವಸ್ಥೆ ಎಂದ ವ್ಯಕ್ತಿ
ಅಕ್ಟೋಬರ್ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 11. 2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನನಗೆ ಇಂತಹ ಸ್ಮಾರ್ಟ್ ಆಟಗಳು ಇಷ್ಟ ಎಂದಿದ್ದಾರೆ. ಇನ್ನೊಬ್ಬರು, ಗ್ಲಾಸ್ ಗೆ ಕೈ ಹಾಕಿ ಕಿತ್ತಳೆ ಹಣ್ಣು ತೆಗೆಯುವ ಬದಲು ಗ್ಲಾಸ್ ನಲ್ಲಿರುವ ನೀರು ಕುಡಿದಿದ್ರೆ ಆಗಿತ್ತು ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ಹುಡುಗಿಗೆ ಹೊಳೆಯ ಐಡಿಯಾ ನಮಗೂ ಹೊಳೆಯಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








