AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ಸಿಗುತ್ತೆ ಜಿರಳೆ ಕಾಫಿ; ರುಚಿ, ಬೆಲೆ ಎಷ್ಟು ಗೊತ್ತಾ?

ಚೀನಾದ ವಸ್ತುಸಂಗ್ರಹಾಲಯವೊಂದರಲ್ಲಿ ಜಿರಳೆಗಳಿಂದ ತಯಾರಿಸಿದ ವಿಚಿತ್ರ ಕಾಫಿಯ ಪ್ರಯೋಗ ವೈರಲ್ ಆಗಿದೆ. ಕಾಫಿ ಪುಡಿಯನ್ನು ಜಿರಳೆಗಳ ಮೇಲೆ ಸಿಂಪಡಿಸಿ ಒಣಗಿಸಿ, ನಂತರ ಅವುಗಳ ಪುಡಿಯನ್ನು ಕಾಫಿಗೆ ಬೆರೆಸಿ ನೀಡಲಾಗುತ್ತದೆ. ಇದು ಸುಟ್ಟ ಮತ್ತು ಹುಳಿ ರುಚಿ ನೀಡುತ್ತದೆ ಎಂದು ಸಂದರ್ಶಕರು ಹೇಳಿದ್ದಾರೆ. ಸಾಂಪ್ರದಾಯಿಕ ಚೀನೀ ಔಷಧದ ಪ್ರಕಾರ, ಇದು ರಕ್ತ ಪರಿಚಲನೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಇಲ್ಲಿ ಸಿಗುತ್ತೆ ಜಿರಳೆ ಕಾಫಿ; ರುಚಿ, ಬೆಲೆ ಎಷ್ಟು ಗೊತ್ತಾ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Nov 21, 2025 | 6:26 PM

Share

ಕಾಫಿ ಕುಡಿಯುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಕಾಫಿಯಲ್ಲಿ ಬೇರೆ ಬೇರೆ ವಿಧಗಳು ಇವೆ. ಆದರೆ ನೀವು ಜಿರಳೆ ಕಾಫಿ (cockroach coffee )ಕುಡಿದಿರಲು ಸಾಧ್ಯವೇ ಇಲ್ಲ. ಇಂತಹ ಪ್ರಯೋಗವನ್ನು ಚೀನಾ ಮಾಡಿದೆ. ಬೀಜಿಂಗ್‌ನಲ್ಲಿರುವ ವಸ್ತುಸಂಗ್ರಹಾಲಯವೊಂದರಲ್ಲಿ ವಿಚಿತ್ರ ಪ್ರಯೋಗವನ್ನು ಮಾಡಿದ್ದಾರೆ. ಕಾಫಿ ಪುಡಿಯನ್ನು ಜಿರಳೆ ಮೇಲೆ ಸಿಂಪಡಿಸಿ, ನಂತರ ಅದನ್ನು ಒಣಗಿಸಿ, ಒಣಗಿದ ನಂತರ ಜಿರಳೆಯ ಹಳದಿ ಭಾಗವನ್ನು ಪುಡಿ ಮಾಡಿ, ಕಾಫಿಗೆ ಬೆರೆಸಿ ಕುಡಿಯುತ್ತಾರೆ. ದಿ ಕವರ್ ಪ್ರಕಾರ, ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಸಂದರ್ಶಕರು ಈ ಕಾಫಿಯನ್ನು ಸೇವಿಸಿದ್ದಾರೆ. ಅವರು ಇದು ಸುಟ್ಟ ಮತ್ತು ಸ್ವಲ್ಪ ಹುಳಿ ರುಚಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ , ಒಂದು ಕಪ್ ಕಾಕ್ರೋಚ್ ಕಾಫಿಯ ಬೆಲೆ 45 ಯುವಾನ್ (532.87 ರೂ.) ಆಗಿದ್ದು, ಕಾಫಿಗಳನ್ನು ಈ ವಸ್ತುಸಂಗ್ರಹಾಲಯದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಆದರೆ ಈ ವಸ್ತುಸಂಗ್ರಹಾಲಯದ ಹೆಸರನ್ನು ಎಲ್ಲೂ ಬಹಿರಂಗಪಡಿಸಿಲ್ಲ. 2025ರ ಜೂನ್​​ನಲ್ಲಿ ಈ ಪ್ರಯೋಗವನ್ನು ಮಾಡಿ ಮಾರಾಟ ಮಾಡಲಾಯಿತು. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಒಬ್ಬ ನೆಟ್ಟಿಗ ಕೀಟಗಳಿಂದ ಮಾಡಿದ ಆಹಾರವನ್ನು ಅಥವಾ ಪಾನೀಯವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 1 ರೂ. ನೋಟು ಕೊಟ್ಟರೆ ಅರ್ಧ ಕೆಜಿ ಚಿಕನ್!

ಈ ವಸ್ತುಸಂಗ್ರಹಾಲಯವು ಇಂತಹದೇ ಬೇರೆ ಬೇರೆ ಪಾನೀಯಗಳ ಪ್ರಯೋಗವನ್ನು ಮಾಡಿದೆ. ಹೂಜಿ ಸಸ್ಯ (Pitcher Plant)ದಿಂದ ಪಾನೀಯವೊಂದನ್ನು ಕೂಡ ತಯಾರಿಸಿದ್ದಾರೆ. ಇದಕ್ಕೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಸಾಂಪ್ರದಾಯಿಕ ಚೀನೀ ಔಷಧ (TCM) ಗಿಡಮೂಲಿಕೆ ಅಂಗಡಿಯಿಂದ ಖರೀದಿಸಲಾಗುತ್ತದೆ. TCM ಪ್ರಕಾರ, ಜಿರಳೆ ಪುಡಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ, ಜತೆಗೆ ಪ್ರೋಟೀನ್ ಬೇಕಾದರೆ ಇದನ್ನು ಊಟದಲ್ಲಿ ಬಳಸಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇರುವೆ ಪಾನೀಯವನ್ನು ಕೂಡ ಮಾಡುತ್ತಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ