AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brain Teaser: ನೀವು ಜಾಣರೇ, ಈ ಒಗಟಿನ ಪ್ರಶ್ನೆ ಬಿಡಿಸಿ ಉತ್ತರ ಹೇಳಿ ನೋಡೋಣ

ಒಗಟಿನ ಪ್ರಶ್ನೆಯನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಕೆಲವು ಪ್ರಶ್ನೆಗಳು ಟ್ರಿಕ್ಕಿಯಾಗಿದ್ದು ಉತ್ತರ ಕಂಡುಕೊಳ್ಳಲು ಕಷ್ಟವಾಗುತ್ತದೆ. ಕೆಲವರು ಕ್ಷಣಾರ್ಧದಲ್ಲಿಯೇ ಉತ್ತರ ಕಂಡುಕೊಳ್ಳುತ್ತಾರೆ. ಈ ಪ್ರಶ್ನೆಯಲ್ಲಿ ಹೇಳಿರುವಂತೆ ಎಷ್ಟು ಜನರಿದ್ದಾರೆ ಎಂದು ನೀವು ಕಂಡುಹಿಡಿಯಬೇಕು. ಇದೀಗ ನೀವು ನಿಜಕ್ಕೂ ಜಾಣರು ಅಂತಾದ್ರೆ ಈ ಪ್ರಶ್ನೆಗೆ ಉತ್ತರ ಹೇಳಲು ಪ್ರಯತ್ನಿಸಿ.

Brain Teaser: ನೀವು ಜಾಣರೇ, ಈ ಒಗಟಿನ ಪ್ರಶ್ನೆ ಬಿಡಿಸಿ ಉತ್ತರ ಹೇಳಿ ನೋಡೋಣ
ಬ್ರೈನ್ ಟೀಸರ್Image Credit source: Pinterest
ಸಾಯಿನಂದಾ
|

Updated on:Nov 21, 2025 | 3:43 PM

Share

ಒಗಟುಗಳೇ (Puzzles) ಹಾಗೆ, ನೋಡಲು ಸುಲಭದಾಯಕವಾಗಿ ಕಂಡರೂ ಉತ್ತರ ಬಿಡಿಸುವುದು ಅಷ್ಟು ಸುಲಭವಲ್ಲ. ಒಂದಕ್ಕಿಂತ ಒಂದು ಕಷ್ಟಕರವಾದ ಒಗಟುಗಳು ಮೆದುಳಿಗೆ ಕಸರತ್ತು ನೀಡುತ್ತದೆ. ಆದರೆ ಇಂತಹ ಒಗಟಿಗೆ ಉತ್ತರ ಹೇಳೋದು ಎಲ್ಲರಿಗೂ ಸುಲಭವಲ್ಲ. ಕೆಲವರು ನೀರು ಕುಡಿದಷ್ಟೇ ಸುಲಭವಾಗಿ ಉತ್ತರ ಹೇಳುತ್ತಾರೆ. ಆದರೆ ಇದೀಗ ಇಂತಹದ್ದೇ ಟ್ರಿಕ್ಕಿ ಬ್ರೈನ್ ಟೀಸರ್ (Brain teaser) ಇಲ್ಲಿದೆ. ಈ ಕುಟುಂಬದಲ್ಲಿ ಎಷ್ಟು ಜನರಿದ್ದಾರೆ ಎನ್ನುವುದೇ ಪ್ರಶ್ನೆಯಾಗಿದೆ. ನೀವು ಈ ಪ್ರಶ್ನೆಯನ್ನು ಸರಿಯಾಗಿ ಓದಿ ಸರಿಯಾದ ಉತ್ತರ ಹೇಳಿ.

ಒಗಟಿನ ಪ್ರಶ್ನೆ ಹೀಗಿದೆ

Brain Teaser Photo

Mathematics ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಟ್ರಿಕ್ಕಿ ಒಗಟನ್ನು ಹಂಚಿಕೊಳ್ಳಲಾಗಿದೆ. 7 ಜನ ಪುರುಷರಿಗೆ 7 ಜನ ಮಡದಿಯರಿದ್ದಾರೆ. ಪ್ರತಿ ಪುರುಷ ಹಾಗೂ ಪ್ರತಿ ಮಹಿಳೆಗೂ 7 ಜನ ಮಕ್ಕಳಿದ್ದಾರೆ. ಹಾಗಾದರೆ ಒಟ್ಟು ಎಷ್ಟು ಜನರಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಇದಕ್ಕೆ ನೀವು ನಿರ್ದಿಷ್ಟ ಉತ್ತರವನ್ನು ಹೇಳುವುದೇ ನಿಮ್ಮ ಮುಂದಿನ ಸವಾಲು.

ಇದನ್ನೂ ಓದಿ:ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಹುಡುಕಿ ಜಾಣರೆನಿಸಿಕೊಳ್ಳಿ

ಒಗಟು ಬಿಡಿಸಲು ಸಾಧ್ಯವಾಯಿತೇ?

ಎಷ್ಟೇ ತಲೆ ಕೆಡಿಸಿಕೊಂಡರೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲವೇ. ಹೆಚ್ಚು ಚಿಂತಿಸಬೇಡಿ, ಈ ಮೇಲಿನ ಪ್ರಶ್ನೆಯನ್ನು ಚೆನ್ನಾಗಿ ಅರ್ಥೈಸಿಕೊಳ್ಳಿ. ನೀವು ಈ ಪ್ರಶ್ನೆಯನ್ನು ಯಾವ ರೀತಿ ಅರ್ಥ ಮಾಡಿಕೊಂಡಿದ್ದೀರಿ ಎಂಬುದರ ಆಧಾರದ ಮೇಲೆ ಈ ಕೆಳಗಿನ ಎರಡು ಉತ್ತರಗಳು ಬಂದಿವೆ. ಪ್ರತಿಯೊಬ್ಬ ಪುರುಷನಿಗೆ ಒಂದು ಹೆಂಡತಿ ಇದ್ದಂತೆ ನೀವು ಅದನ್ನು ಅರ್ಥೈಸಿದರೆ, ಸರಿಯಾದ ಉತ್ತರ 63 ಜನರು. ಆದಾಗ್ಯೂ, ನೀವು ಅದನ್ನು ಪ್ರತಿ ಪುರುಷನಿಗೆ 7 ಹೆಂಡತಿಯರು ಎಂದು ಅರ್ಥೈಸಿದರೆ, ಒಟ್ಟು ಜನರು 399 ಯಾಗುತ್ತದೆ. ಈ ಉತ್ತರವು ಕೂಡ ನಿಮ್ಮ ತಲೆಗೆ ಹುಳ ಬಿಟ್ಟಿದೆಯೇ. ಹಾಗಾದ್ರೆ ಸರಿಯಾದ ಉತ್ತರ ಯಾವುದೆಂದು ನೀವು ಹೇಳಿ ನೋಡೋಣ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Fri, 21 November 25