Brain Teaser: ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಹುಡುಕಿ ಜಾಣರೆನಿಸಿಕೊಳ್ಳಿ
ಬ್ರೈನ್ ಟೀಸರ್‌ಗೆ ಸಂಬಂಧಿಸಿದ ಒಗಟಿನ ಚಿತ್ರಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲವರು ಟ್ರಿಕ್ಕಿಯಾಗಿರುವ ಗಣಿತದ ಲೆಕ್ಕಗಳನ್ನು ಬಿಡಿಸಲು ಇಷ್ಟಪಡುತ್ತಾರೆ. ಇದೀಗ ಇಂತಹ ನಿಮ್ಮ ಮೆದುಳಿಗೆ ಕೆಲಸ ನೀಡುವ ಗಣಿತ ಪಝಲ್‌ನಲ್ಲಿ ಮಿಸ್ ಆಗಿರುವ ಸಂಖ್ಯೆಯನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ನೀವು ಈ ನಂಬರ್ ಯಾವುದೆಂದು ಹೇಳಿ ಬುದ್ಧಿವಂತರು ಎನಿಸಿಕೊಳ್ಳಿ.

ಗಣಿತದ (maths) ಲೆಕ್ಕಗಳು ಕಬ್ಬಿಣದ ಕಡಲೆ. ಹೀಗಾಗಿ ಯಾರು ಕೂಡ ಇಂತಹ ಕಠಿಣ ಲೆಕ್ಕಗಳನ್ನು ಬಿಡಿಸುವತ್ತ ಗಮನ ಹರಿಸುವುದಿಲ್ಲ. ಗಣಿತದ ಲೆಕ್ಕಗಳನ್ನು ಬಿಡಿಸುವಾಗ ನಿಮ್ಮ ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ನೀವು ಬುದ್ಧಿ ಖರ್ಚು ಮಾಡಿದ್ರು ಈ ಬ್ರೈನ್ ಟೀಸರ್ (brain teaser) ಅಥವಾ ಪಝಲ್‌ಗೆ ಉತ್ತರ ಹುಡುಕುವುದು ಕಷ್ಟವಾಗುತ್ತದೆ. ಆದರೆ ಇದೀಗ ವೈರಲ್ ಆಗಿರುವ ಬ್ರೈನ್ ಟೀಸರ್ ಒಗಟಿನ ಚಿತ್ರದಲ್ಲಿ ಒಂದಿಷ್ಟು ಸಂಖ್ಯೆಗಳಿವೆ. ಇಲ್ಲಿ ಮಿಸ್ ಆಗಿರುವ ನಂಬರ್ ಅನ್ನು ಕಂಡು ಹಿಡಿಯಬೇಕು. ಈ ಗಣಿತದ ಟ್ರಿಕ್ಕಿ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ.
ಈ ಟ್ರಿಕ್ಕಿ ಒಗಟಿನಲ್ಲಿ ಏನಿದೆ?
ಮೊದಲ ಸಾಲಿನಲ್ಲಿ 4, 8, 24 ಸಂಖ್ಯೆಗಳಿವೆ. ಎರಡನೇ ಸಾಲಿನಲ್ಲಿ 3, 6, 18 ಸಂಖ್ಯೆಗಳಿವೆ. ಮೂರನೇ ಸಾಲಿನಲ್ಲಿ 5, 10 ಸಂಖ್ಯೆಗಳಿದ್ದು ಇಲ್ಲಿ ಮಿಸ್ ಆಗಿರುವ ಸಂಖ್ಯೆಯನ್ನು ನೀವು ಪತ್ತೆ ಹಚ್ಚಬೇಕು. ಈ ಮೊದಲ ಹಾಗೂ ಎರಡನೇ ಸಾಲಿನಲ್ಲಿರುವ ಸಂಖ್ಯೆಗಳು 3 ಹಾಗೂ 4 ಮಗ್ಗಿಯಲ್ಲಿ ಬರುವ ಸಂಖ್ಯೆಗಳಾಗಿವೆ. ಹಾಗಾದ್ರೆ ಇಲ್ಲಿ ಮಿಸ್ ಆಗಿರುವ ಇನ್ನೊಂದು ಸಂಖ್ಯೆ ಯಾವುದೆಂದು ನೀವು ಕಂಡುಹಿಡಿದು ಜಾಣರು ಎನಿಸಿಕೊಳ್ಳಿ.
ಇದನ್ನೂ ಓದಿ:ಹೋದ ನೆಂಟ ಬಂದ ನೆಂಟ, ಆದ್ರೆ ಬಂದ ದಾರಿ ಗೊತ್ತಿಲ್ಲ, ನಾನ್ಯಾರು ಹೇಳಿ ನೋಡೋಣ
ಮಿಸ್ ಆಗಿರುವ ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯವಾಯಿತೇ?
ಎಷ್ಟೇ ತಲೆ ಓಡಿಸಿದ್ರೂ ಇಲ್ಲಿ ಮಿಸ್ ಆಗಿರುವ ಸಂಖ್ಯೆ ಯಾವುದೆಂದು ಕಂಡು ಹಿಡಿಯಲು ಸಾಧ್ಯವಾಗಿಲ್ಲವೇ. ಹೆಚ್ಚು ಚಿಂತಿಸಬೇಡಿ, ಉತ್ತರ ನಾವು ನಿಮಗೆ ಹೇಳುತ್ತೇವೆ. ಮೊದಲ ಸಂಖ್ಯೆಯನ್ನು ಸತತವಾಗಿ ಎರಡರಿಂದ ಗುಣಿಸಿದಾಗ ನಿಮಗೆ ಎರಡನೇ ಸಂಖ್ಯೆ ಸಿಗುತ್ತದೆ. ಈಗ ಎರಡನೇ ಸಂಖ್ಯೆಯನ್ನು ಮೂರರಿಂದ ಗುಣಿಸಿದಾಗ ನಿಮಗೆ ಮಿಸ್ ಆಗಿರುವ ಸಂಖ್ಯೆಯೂ ದೊರೆಯುತ್ತದೆ. ಇಲ್ಲಿ ಮಿಸ್ ಆಗಿರುವ ಸಂಖ್ಯೆ 30. ಹೌದು, 5 *2 = 10 * 3 ಹೀಗೆ ಗುಣಿಸಿದಾಗ ಉತ್ತರ 30 ಬರುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Mon, 17 November 25




