Video: ಮೂರು ಹೊತ್ತಿನ ಊಟಕ್ಕಾಗಿ ದೊಂಬರಾಟ, ಹಗ್ಗದ ಮೇಲೆ ಬಾಲಕಿಯ ಸರ್ಕಸ್ ನೋಡಿ
ಮೂರು ಹೊತ್ತಿನ ಕೂಳಿಗಾಗಿ ಒಬ್ಬೊಬ್ಬರು ಒಂದು ರೀತಿ ಕಾಯಕದಲ್ಲಿ ತೊಡಗುತ್ತಾರೆ. ಆದರೆ ಈ ದೃಶ್ಯದಲ್ಲಿ ಪುಟ್ಟ ಹುಡುಗಿಯೊಬ್ಬಳು ಹಗ್ಗದ ಮೇಲೆ ನಡೆದಾಡುತ್ತಾ ಸರ್ಕಸ್ ಮಾಡುತ್ತಿದ್ದು ಇದುವೇ ಈಕೆಯ ಕುಟುಂಬಕ್ಕೆ ಆಧಾರವಾಗಿದೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

ಬದುಕು (life) ನಿತ್ಯ ನಿರಂತರ ಹೋರಾಟ. ಕೆಲವರು ಕಷ್ಟಪಟ್ಟು ದುಡಿದು ಹೊಟ್ಟೆ ತುಂಬಿಸಿಕೊಳ್ತಾರೆ. ಇನ್ನು ಕೆಲವರು ಕಲೆಯನ್ನೇ ಬದುಕಿಗಾಗಿ ಅವಲಂಬಿಸಿಕೊಳ್ಳುತ್ತಾರೆ. ಹೌದು, ನೋಡೋರಿಗೆ ಮನೋರಂಜನೆ ನೀಡುವ ಮೂಲಕ ಅದನ್ನೇ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಕಾಯಕವನ್ನಾಗಿ ಮಾಡಿಕೊಳ್ತಾರೆ. ಓದುವ ವಯಸ್ಸಿನಲ್ಲಿ ಈ ಪುಟ್ಟ ಹುಡುಗಿಯೂ ಹಗ್ಗದಲ್ಲೇ ನಡೆದಾಡುತ್ತಾ ಮನೋರಂಜನೆ ನೀಡುತ್ತಿದ್ದಾಳೆ. ನೋಡೋರಿಗೆ ಇದು ದೊಂಬರಾಟ, ಆದರೆ ಈ ಬಾಲಕಿಯ ಕುಟುಂಬಕ್ಕೆ ಇದುವೇ ಆಧಾರವಾಗಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.
Kumar ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೂ ಹಗ್ಗದ ಮೇಲೆ ಟಯರ್ ಇಟ್ಟುಕೊಂಡು ನಡೆದಾಡುತ್ತಾ ನೋಡೋರೋರಿಗೆ ಮನೋರಂಜನೆ ನೀಡುತ್ತಿದ್ದಾಳೆ. ತಲೆಯ ಮೇಲೆ ಸಣ್ಣ ಮಡಕೆ ಹಾಗೂ ಕೈಯಲ್ಲಿ ಕೋಲು ಹಿಡಿದು ಬ್ಯಾಲೆನ್ಸ್ ಮಾಡುತ್ತಿರುವುದನ್ನು ನೋಡಬಹದು. ಇತ್ತ ಕುಟುಂಬವು ಈಕೆಯ ಕಲೆಗೆ ಬೆಂಬಲ ನೀಡುತ್ತಾ ಸಾಥ್ ನೀಡುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಓದುವ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ; ಹಣ್ಣು ವ್ಯಾಪಾರ ಮಾಡಿ ತಾಯಿಗೆ ನೆರವಾಗುವ ಪುಟ್ಟ ಬಾಲಕ
ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹೊಟ್ಟೆ ಪಾಡು ಏನು ಮಾಡೋಕೆ ಆಗಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಲೆ ಇರುತ್ತೆ ಎಂದಿದ್ದಾರೆ. ಇನ್ನೊಬ್ಬರು, ಸೂಪರ್ ಎಂದರೆ, ಮತ್ತೊಬ್ಬರು, ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Sun, 16 November 25
