AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕ ಮರೆತುಹೋದ ಹಣದ ಬ್ಯಾಗ್​​​ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ

ಬೆಂಗಳೂರಿನ ಆಟೋ ಚಾಲಕರೊಬ್ಬರು ಪ್ರಯಾಣಿಕರ ಕಳೆದುಹೋದ ಹಣದ ಚೀಲವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ಗಳಿಸಿದ್ದಾರೆ. ಈ ಘಟನೆ ವೈರಲ್ ಆಗಿದ್ದು, ಚಾಲಕನ ಪ್ರಾಮಾಣಿಕತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. 'ಎಲ್ಲಾ ಆಟೋ ಚಾಲಕರು ಕೆಟ್ಟವರು ಅಲ್ಲ' ಎಂದು ಚಾಲಕ ಹೇಳಿದ್ದು, ಈ ಸಕಾರಾತ್ಮಕ ಘಟನೆ ಇಡೀ ಆಟೋ ಚಾಲಕ ವರ್ಗಕ್ಕೆ ಮಾದರಿಯಾಗಿದೆ.

ಪ್ರಯಾಣಿಕ ಮರೆತುಹೋದ ಹಣದ ಬ್ಯಾಗ್​​​ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Nov 17, 2025 | 11:58 AM

Share

ಬೆಂಗಳೂರಿನ ಆಟೋ ಚಾಲಕರೊಬ್ಬರು (Bangalore Auto Driver) ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ. ಇದೀಗ ಈ ಬಗ್ಗೆ ಪೋಸ್ಟ್​ವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದ್ದು, ಈ ಚಾಲಕ ಪ್ರಮಾಣಿಕತೆಗೆ ಮಾದರಿ ಎಂದು ನೆಟ್ಟಿಗರು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್​​​ನಲ್ಲಿ ವೈರಲ್​ ಆಗಿರುವ ಪೋಸ್ಟ್​​​ನಲ್ಲಿ, ಪ್ರಯಾಣಿಕರೊಬ್ಬರು ಆಟೋದಲ್ಲಿ ಹಣ ತುಂಬಿದ್ದ ಬ್ಯಾಗ್​​ನ್ನು ಮರೆತು ಬಿಟ್ಟು ಹೋಗಿದ್ದಾರೆ. ಆ ಬ್ಯಾಗ್​​ನ್ನು ಪ್ರಾಮಾಣಿಕವಾಗಿ ಆಟೋ ಚಾಲಕ ಪ್ರಯಾಣಿಕರಿಗೆ ಹಿಂತಿರುಗಿಸಿದ್ದಾರೆ. ಆಟೋ ಚಾಲಕನ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ವಿಡಿಯೋದಲ್ಲಿ ಆಟೋ ಚಾಲಕರೊಬ್ಬರು ಪ್ರಯಾಣಿಕರಿಗೆ ಹಣ ಬ್ಯಾಗ್​​ನ್ನು ಹಿಂತಿರುಗಿಸುವುದನ್ನು ನೋಡಬಹುದು. ಜತೆಗೆ ಚಾಲಕನ ಪ್ರಾಮಾಣಿಕತೆಗೆ ಪ್ರಯಾಣಿಕರು ಅವರನ್ನು ಕೊಂಡಾಡಿದ್ದಾರೆ. ಚಾಲಕ ಈ ಬಗ್ಗೆ ಮಾತನಾಡಿದ್ದು, “ಅವರ ಹಣವನ್ನು ಪ್ರಾಮಾಣಿಕವಾಗಿ ವಾಪಸ್ ನೀಡಿದ್ದಾನೆ. ಎಲ್ಲ ಆಟೋ ಚಾಲಕರು ಕೆಟ್ಟವರಾಗಿರುವುದಿಲ್ಲ” ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ನಮ್ಮ ಬೆಂಗಳೂರು ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿನ ಮಹಿಳೆಯೊಬ್ಬರು ಇಯರ್‌ಫೋನ್‌ ಆಟೋದಲ್ಲಿ ಬಿಟ್ಟು ಹೋದಾಗ, ಅದನ್ನು ಪ್ರಾಮಾಣಿಕವಾಗಿ ವಾಪಸ್​​​ ನೀಡಿದ್ರು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿತ್ತು.

ಇದನ್ನೂ ಓದಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋದ ಇಯರ್‌ಫೋನ್​​​ನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ!

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹೇಳಿದ್ದೇನು?

ಬೆಂಗಳೂರಿನಲ್ಲಿ ಒಳ್ಳೆಯ ಮನಸ್ಸಿನ ಆಟೋ ಚಾಲಕರು ಕೂಡ ಇದ್ದಾರೆ. ಇದೊಂದು ಪ್ರಮಾಣಿಕತೆಗೆ ಮಾದರಿ ಎಂದು ಹೇಳಿದ್ದಾರೆ. ಹಣ ಶಾಶ್ವತ ಅಲ್ಲ, ಪ್ರಮಾಣಿಕತೆ ಶಾಶ್ವತ ಎಂಬುದು ಆ ಆಟೋ ಚಾಲಕನಿಗೆ ಅರ್ಥವಾಗಿರಬೇಕು ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಇಂತಹ ಜನರು ಇನ್ನೂ ಇರುವುದನ್ನು ನೋಡಲು ಸಂತೋಷವಾಗಿದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ