AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋದ ಇಯರ್‌ಫೋನ್​​​ನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ!

ಬೆಂಗಳೂರಿನ ರಾಪಿಡೋ ಆಟೋ ಚಾಲಕರೊಬ್ಬರು ಪ್ರಯಾಣಿಕರ ಕಳೆದುಹೋದ ಇಯರ್‌ಫೋನ್ ಅನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಈ ಘಟನೆ ಚಾಲಕರ ಬಗ್ಗೆ ಸಕಾರಾತ್ಮಕ ಭಾವನೆಯನ್ನು ಮೂಡಿಸಿದೆ. ಅವರ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ. ಆಟೋ ಚಾಲಕರ ಬಗ್ಗೆ ಸಾಮಾನ್ಯವಾಗಿ ನೆಗೆಟಿವ್ ಸುದ್ದಿಗಳು ವೈರಲ್ ಆಗುವ ಈ ಸಂದರ್ಭದಲ್ಲಿ, ಈ ಒಳ್ಳೆಯತನ ಸಮಾಜದಲ್ಲಿ ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋದ ಇಯರ್‌ಫೋನ್​​​ನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ!
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Oct 27, 2025 | 12:37 PM

Share

ಬೆಂಗಳೂರು,ಅ.27: ಬೆಂಗಳೂರಿನ ಆಟೋ ಚಾಲಕರ (Bengaluru Auto Driver) ಬಗ್ಗೆ ಪ್ರತಿದಿನ ನೆಗೆಟಿವ್​​ ಆಗಿಯೇ ಪೋಸ್ಟ್​ಗಳು ವೈರಲ್​​ ಆಗುತ್ತ ಇರುತ್ತದೆ. ಅಪರೂಪಕ್ಕೆ ಒಮ್ಮೆ ಅವರು ಮಾಡುವ ಒಳ್ಳೆಯ ಕೆಲಸಗಳು ವೈರಲ್ ಆಗುತ್ತೆ. ಆದ್ರೆ ಅದು ಹೆಚ್ಚು ಹೈಲೆಟ್​​ ಆಗುವುದಿಲ್ಲ. ಇದೀಗ ಇಲ್ಲೊಂದು ಅಂತಹದೇ ಪೋಸ್ಟ್​​​ ವೈರಲ್​​ ಆಗಿದೆ. ಈ ಪೋಸ್ಟ್ ಚಾಲಕರ ಪ್ರಾಮಾಣಿಕತೆಗೆ ಹಿಡಿದ ಕೈಕನ್ನಡಿ. ರಾಪಿಡೊ ಆಟೋ ಚಾಲಕ ಮಹಿಳಾ ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋದ ಇಯರ್‌ಫೋನ್​​ನ್ನು ಹಿಂದಿರುಗಿಸಿದ್ದಾರೆ. ಈ ಘಟನೆ ಮೂಲಕ ಜೀವನದಲ್ಲಿ ದಯೆ ಇನ್ನೂ ಅಸ್ತಿತ್ವದಲ್ಲಿ ಎಂದು ಈ ಪೋಸ್ಟ್​​ ನೆನೆಪಿಸಿದೆ.

ಸಂಭಾವಿ ಎಂಬುವವರು ತಮಗೆ ಆಗಿರುವ ಅನುಭವದ ಬಗ್ಗೆ ಈ ಪೋಸ್ಟ್​​​​​ನಲ್ಲಿ ಹೇಳಿಕೊಂಡಿದ್ದಾರೆ. “ಈ ಘಟನೆ ಶುಕ್ರವಾರ (ಅ.24) ದಂದು ನಡೆದಿದ್ದು, ಸಂಜೆ ಇಂದಿರಾನಗರದಿಂದ ರಾಪಿಡೊ ಆಟೋ ಬುಕ್​ ಮಾಡಿ, ನನ್ನ ಸಹೋದರನ ಜತೆಗೆ ಡಿನ್ನರ್​​​ ಮಾಡಲು 2 ಕಿ.ಲೋ ಮೀಟರ್​​​​ ಪ್ರಯಾಣ ಬೆಳೆಸಿದೆ. ಆಟೋದಿಂದ ಇಳಿದು ಹೋದ ಒಂದು ತಾಸಿನ ನಂತರ ರಾಪಿಡೊ ಆಟೋ ಚಾಲಕ ನನಗೆ ಗೂಗಲ್ ಪೇನಲ್ಲಿ ಮೆಸೇಜ್​ ಮಾಡಿದ್ದಾರೆ. ಅಯ್ಯೋ.. ಯಾಕಪ್ಪ ಮೆಸೇಜ್​ ಮಾಡಿದ್ರು, ಎಕ್ಸ್ಟ್ರಾ ಚಾರ್ಜ್ ಕೇಳ್ತಾರ ಅಂದುಕೊಂಡೆ, ಗೂಗಲ್​​​ ಪೇಯಲ್ಲಿ ಸಂದೇಶ ನೋಡಿದಾಗ, ಮೇಡಂ ನಿಮ್ಮ ಇಯರ್‌ಫೋನ್ನು ಆಟೋದಲ್ಲಿ ಬಿಟ್ಟು ಹೋಗಿದ್ದೀರಾ, ನಾನು ಅದನ್ನು ಸುರಕ್ಷಿತವಾಗಿ ಇಟ್ಟಿರುತ್ತೇನೆ, ಯಾವಾಗ ಸಿಗುತ್ತೀರಾ ಹೇಳಿ, ದೀಪಾವಳಿ ಮುಗಿದು ಸೋಮವಾರ ಸಿಗಬಹುದಾ ಎಂದು ಕೇಳಿದ್ದಾರೆ, ಆದರೆ ನನಗೆ ಅದನ್ನು ಅವರಿಗೆ ಮಾರಾಟ ಮಾಡಲು ಅಥವಾ ಫ್ರೀಯಾಗಿ ನೀಡಲು ಇಷ್ಟವಿರಲಿಲ್ಲ” ಎಂದು ಈ ಪೋಸ್ಟ್​​​ನಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಚಾಟ್‌ಜಿಪಿಟಿ ಸಹಾಯದಿಂದ ಪೇಪಾಲ್​​ನಲ್ಲಿ ಕೆಲಸ ಗಿಟ್ಟಿಸಿಕೊಂಡ ಬೆಂಗಳೂರಿನ ಅಮರ್ ಸೌರಭ್ 

ಇದೊಂದು ಸಣ್ಣ ವಿಷಯವಾಗಿದ್ರು, ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚಲೇಬೇಕು ಹಾಗೂ ಇಂತಹವರಿಂದ ಮಾತ್ರ ಈ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದ್ದಾರೆ. ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ, ವ್ಯಾಪಕ ಕಮೆಂಟ್​​ಗಳು ಬಂದಿದೆ. ಇದು ಅವಾಸ್ತವಿಕವೆನಿಸುತ್ತದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ, ಇನ್ನೊಬ್ಬ ಬಳಕೆದಾರ, ಇಂತಹ ಜನರು ಇನ್ನೂ ಇರುವುದನ್ನು ನೋಡಲು ಸಂತೋಷವಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ವಿಚಾರವನ್ನು ಹಂಚಿಕೊಂಡಿದಕ್ಕೆ, ರಾಪಿಡೊ ಕೂಡ ಪ್ರತಿಕ್ರಿಯಿಸಿತು, ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಸಂಭಾವಿ ಅವರಿಗೆ ಧನ್ಯವಾದಗಳನ್ನು ತಿಳಿಸಿದೆ ಮತ್ತು ಆಟೋ ಚಾಲಕ ಜಹ್ರುಲ್ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿತು.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ​​​​​

Published On - 12:33 pm, Mon, 27 October 25