Brain Teaser: ಹೋದ ನೆಂಟ ಬಂದ ನೆಂಟ, ಆದ್ರೆ ಬಂದ ದಾರಿ ಗೊತ್ತಿಲ್ಲ, ನಾನ್ಯಾರು ಹೇಳಿ ನೋಡೋಣ
ಟ್ರಿಕ್ಕಿ ಒಗಟಿನ ಪ್ರಶ್ನೆಗಳನ್ನು ಬಿಡಿಸಿದಾಗ ಅದರಿಂದ ಸಿಗುವ ಥ್ರಿಲ್ ಬೇರೇನೇ. ಒಗಟಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ರೆ ನಿಮ್ಮ ಮೆದುಳು ಚುರುಕಾಗುತ್ತೆ. ಹಾಗೂ ನೀವು ಎಷ್ಟು ಬುದ್ಧಿವಂತರು ಎನ್ನುವುದು ತಿಳಿಯುತ್ತದೆ. ಹಾಗಾದ್ರೆ ನೀವು ಹೋದ ನೆಂಟ ಬಂದ ನೆಂಟ, ಆದ್ರೆ ಬಂದ ದಾರಿ ಗೊತ್ತಿಲ್ಲ. ಈ ಒಗಟನ್ನು ಬಿಡಿಸಿ ಜಾಣರು ಎನಿಸಿಕೊಳ್ಳಿ.

ಒಗಟಿನ (puzzle) ಆಟದಲ್ಲಿರುವ ಮಜಾನೇ ಬೇರೆ. ಹೀಗಾಗಿ ಹೆಚ್ಚಿನವರು ಇಂತಹ ಒಗಟಿನ ಪ್ರಶ್ನೆ ಬಿಡಿಸುವತ್ತ ಗಮನ ಕೊಡುತ್ತಾರೆ.ಒಂದಕ್ಕಿಂತ ಒಂದು ಒಗಟಿನ ಪ್ರಶ್ನೆಗಳು ಮೆದುಳಿಗೆ ಕೆಲಸ ನೀಡುತ್ತದೆ. ಕೆಲವೊಂದು ಒಗಟಿಗೆ ಕ್ಷಣಾರ್ಧದಲ್ಲಿ ಉತ್ತರ ಕಂಡುಕೊಂಡರೆ ಇನ್ನು ಕೆಲವು ಟ್ರಿಕ್ಕಿ ಪ್ರಶ್ನೆಯನ್ನು ಬಿಡಿಸಿ ಉತ್ತರ ಹೇಳುವುದು ಕಷ್ಟ. ಇದೀಗ ಬ್ರೈನ್ ಟೀಸರ್ ನಂತಹ (brain teaser) ಟ್ರಿಕ್ಕಿ ಒಗಟಿನ ಪ್ರಶ್ನೆಯೊಂದು ವೈರಲ್ ಆಗಿದೆ. ಈ ಪ್ರಶ್ನೆ ಕೇಳಿದಾಗ ಸುಲಭವಾಗಿ ಕಂಡರೂ ಉತ್ತರ ಕಂಡು ಹಿಡಿಯುವುದು ಅಷ್ಟೇ ಸವಾಲುದಾಯಕ. ಇದೀಗ ಈ ಒಗಟಿನ ಪ್ರಶ್ನೆಗೆ ಉತ್ತರ ಹೇಳಿದ್ರೆ ನೀವು ಬುದ್ಧಿವಂತರು ಎನ್ನುವುದು ಖಚಿತವಾಗುತ್ತದೆ.
Learn kannada ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೆದುಳಿಗೆ ಕೆಲಸ ನೀಡುವ ಒಗಟನ್ನು ಹಂಚಿಕೊಳ್ಳಲಾಗಿದೆ. ಹೋದ ನೆಂಟ ಬಂದ ನೆಂಟ, ಆದ್ರೆ ಬಂದ ದಾರಿ ಗೊತ್ತಿಲ್ಲ, ನಾನ್ಯಾರು ಹೇಳಿ ನೋಡೋಣ. ಇದು ಒಗಟಿನ ಪ್ರಶ್ನೆಯಾಗಿದ್ದು, ನೋಡುವುದಕ್ಕೆ ಸುಲದಾಯಕವಾಗಿ ಕಂಡರೂ ಇದಕ್ಕೆ ಉತ್ತರ ಹುಡುಕಲು ಎಲ್ಲರಿಂದಲೂ ಆಗದು. ಹೀಗಾಗಿ ನೀವು ಸ್ವಲ್ಪ ಸಮಯ ತೆಗೆದುಕೊಂಡರೂ ಸರಿಯೇ, ಸರಿಯಾದ ಉತ್ತರ ಹೇಳಿ ಒಗಟು ಬಿಡಿಸೋದ್ರಲ್ಲಿ ಪಂಟರು ಎನಿಸಿಕೊಳ್ಳಿ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: ಒಗಟು ಬಿಡಿಸೋದ್ರಲ್ಲಿ ನೀವು ಶಾರ್ಪ್ ಇದ್ರೆ ಈ ಪ್ರಶ್ನೆಗೆ ಉತ್ತರ ಹೇಳಿ ನೋಡೋಣ
ಈ ಒಗಟಿನ ಪ್ರಶ್ನೆಗೆ ಉತ್ತರ ಸಿಕ್ಕಿತೇ?
ಒಗಟಿನ ಪ್ರಶ್ನೆಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಮೆದುಳಿಗೆ ಯಾರೋ ಕೈ ಹಾಕಿದ ಅನುಭವವಾಗುತ್ತದೆ. ಹೀಗಾಗುವುದು ಸಹಜ ಕೂಡ. ಆದರೆ ನೀವು ಈ ಕಠಿಣ ಪ್ರಶ್ನೆ ಉತ್ತರ ಕಂಡುಕೊಳ್ಳಲು ಆಗಲಿಲ್ಲ ಎಂದು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಹೋದ ನೆಂಟ ಬಂದ ನೆಂಟ, ಆದ್ರೆ ಬಂದ ದಾರಿ ಗೊತ್ತಿಲ್ಲ ಈ ಒಗಟಿನ ಉತ್ತರ ನೆರಳು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




