Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಎರಡನೇ ವ್ಯಕ್ತಿಯನ್ನು ಕಂಡುಹಿಡಿಯಬಲ್ಲಿರಾ
ಆಪ್ಟಿಕಲ್ ಇಲ್ಯೂಷನ್ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿ ಇರುವ ಖುಷಿಯೇ ಬೇರೆ. ಈ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಗೆ ಸವಾಲೊಡ್ದುತ್ತವೆ. ಭ್ರಮೆಗೆ ಒಳಪಡಿಸುವ ಈ ಚಿತ್ರಗಳನ್ನು ಬಿಡಿಸುವುದು ಸ್ವಲ್ಪ ಕಷ್ಟದ ಕೆಲಸ. ಇದೀಗ ಇಲ್ಲೊಂದು ಟ್ರಿಕ್ಕಿ ಒಗಟಿನ ಚಿತ್ರ ವೈರಲ್ ಆಗಿದೆ. ಇದರಲ್ಲಿ ಮರೆ ಮಾಡಲಾಗಿರುವ ಎರಡನೇ ವ್ಯಕ್ತಿಯನ್ನು ನೀವು ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ರೆ ಭ್ರಮೆಯನ್ನುಂಟು ಮಾಡುವ ಈ ಚಿತ್ರದತ್ತ ಗಮನ ಹರಿಸಿ.

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (optical illusion) ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಚಿತ್ರಗಳು ನೋಡುವುದಕ್ಕೆ ಸುಲಭವಾಗಿ ಕಂಡರೂ ಅದನ್ನು ಬಿಡಿಸುವುದು ಸ್ವಲ್ಪ ಕಷ್ಟಕರ. ಕೆಲವರು ಕ್ಷಣಾರ್ಧದಲ್ಲಿ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳುತ್ತಾರೆ. ಇನ್ನು ಕೆಲವರು ಎಷ್ಟೇ ಸಮಯ ತೆಗೆದುಕೊಂಡರೂ ಇಂತಹ ಒಗಟುಗಳನ್ನು ಬಿಡಿಸಲು ಸಾಧ್ಯವಾಗದೇ ಅರ್ಧಕ್ಕೆ ಕೈಚೆಲ್ಲಿ ಕುಳಿತು ಬಿಡುತ್ತಾರೆ. ಆದರೆ ನಿಯಮಿತವಾಗಿ ಒಗಟು ಬಿಡಿಸುವುದು ನಿಮ್ಮ ಮೆದುಳನ್ನು ಚುರುಕಾಗಿಸುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರ ವೈರಲ್ ಆಗಿದೆ. ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಎರಡನೇ ವ್ಯಕ್ತಿ ಯನ್ನು ಹದಿನೈದು ಸೆಕೆಂಡುಗಳೊಳಗೆ ಪತ್ತೆ ಹಚ್ಚಿ.
ಈ ಚಿತ್ರ ಏನು ಹೇಳುತ್ತದೆ?
ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ವೈರಲ್ ಆಗಿರುವ ಈ ಚಿತ್ರವು ನಿಮ್ಮ ಮೆದುಳಿಗೆ ಕೆಲಸ ನೀಡುತ್ತದೆ. ಈ ಚಿತ್ರದಲ್ಲಿ, ಒಬ್ಬ ವ್ಯಕ್ತಿ ಜೈಲಿನ ಗೋಡೆಯಿಂದ ಹೊರಗೆ ನೋಡುತ್ತಿದ್ದಾನೆ. ಹೊರಗಡೆ ಒಂದು ಮರ ಮತ್ತು ಪಕ್ಷಿ ಗೋಚರಿಸುತ್ತಿದ್ದು, ಮೇಜಿನ ಮೇಲೆ ಮಣ್ಣಿನ ಮಡಕೆ ಹಾಗೂ ಲೋಟ ಇರುವುದನ್ನು ನೀವು ನೋಡಬಹುದು. ಆದರೆ ಇದೇ ಕೋಣೆಯಲ್ಲಿ ಎರಡನೇ ವ್ಯಕ್ತಿಯೂ ಇದ್ದಾನೆ. ಈ ಫೋಟೋದಲ್ಲಿರುವ ಸವಾಲು ಎರಡನೇ ವ್ಯಕ್ತಿ ಎಲ್ಲಿದ್ದಾನೆ ಎಂದು ಕಂಡು ಹಿಡಿಯುವುದು. ನೀವು 15 ಸೆಕೆಂಡುಗಳ ಒಳಗೆ ಎರಡನೇ ವ್ಯಕ್ತಿಯ ಮುಖವನ್ನು ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನೀವು ಹ್ಯಾಟ್ಸ್ ಆಫ್ ಹೇಳುತ್ತೇವೆ. ಈ ಟ್ರಿಕ್ಕಿ ಒಗಟು ಬಿಡಿಸುವತ್ತ ಗಮನ ಕೊಡಿ.
ಇದನ್ನೂ ಓದಿ: ಈ ಚಿತ್ರದಲ್ಲಿರುವ ಕಂದು ಬಣ್ಣದ ಚೌಕಗಳನ್ನು ಗುರುತಿಸಬಲ್ಲಿರಾ
ಎರಡನೇ ವ್ಯಕ್ತಿ ನಿಮ್ಮ ಕಣ್ಣಿಗೆ ಕಾಣಿಸಿದನೇ?

ಈ ಆಪ್ಟಿಕಲ್ ಇಲ್ಯೂಷನ್ ಒಗಟಿನ ಆಟವನ್ನು ಬಿಡಿಸಲು ನಿಮಗೆ ಕೊಟ್ಟಿರುವ ಸಮಯವಕಾಶ ಹದಿನೈದು ಸೆಕೆಂಡುಗಳು ಮಾತ್ರ. ನಿರ್ದಿಷ್ಟ ಸಮಯದೊಳಗೆ ಒಗಟು ಬಿಡಿಸಲು ಸಾಧ್ಯವಾಯಿತು ಎಂದಾದರೆ ನಿಮಗೆ ಅಭಿನಂದನೆಗಳು. ಆದರೆ ಈ ಫೋಟೋದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಎರಡನೇ ವ್ಯಕ್ತಿಯನ್ನು ಹುಡುಕಲು ನಿಮಗೆ ಸುಳಿವನ್ನು ನೀಡುತ್ತೇವೆ. ನಿಮ್ಮ ಮೊಬೈಲ್ ಉಲ್ಟಾ ಮಾಡಿ ಈ ಚಿತ್ರದತ್ತ ಗಮನ ಹರಿಸಿ, ನಿಮ್ಮ ಕಣ್ಣಿಗೆ ಎರಡನೇ ವ್ಯಕ್ತಿ ಖಂಡಿತ ಕಾಣಿಸುತ್ತಾನೆ. ಒಂದು ವೇಳೆ ವ್ಯಕ್ತಿಯನ್ನು ಹುಡುಕಲು ಸಾಧ್ಯವಾಗಿಲ್ಲವೆಂದಾದರೆ ಈ ಮೇಲಿನ ಚಿತ್ರ ನೋಡಿ. ಇಲ್ಲಿ ಎರಡನೇ ವ್ಯಕ್ತಿ ಎಲ್ಲಿದ್ದಾನೆ ಎಂದು ನಾವು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




