Optical Illusion: ಈ ಚಿತ್ರದಲ್ಲಿರುವ ಕಂದು ಬಣ್ಣದ ಚೌಕಗಳನ್ನು ಗುರುತಿಸಬಲ್ಲಿರಾ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆಪ್ಟಿಕಲ್ ಇಲ್ಯೂಷನ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳು ನೋಡುವುದಕ್ಕೆ ಸುಲಭವಾಗಿ ಕಾಣಬಹುದು. ಆದರೆ ಈ ಒಗಟು ಬಿಡಿಸಲು ತಾಳ್ಮೆ ಹಾಗೂ ಜಾಣ್ಮೆ ಎರಡು ಬೇಕು. ಇದೀಗ ಇಂತಹದ್ದೇ ಟ್ರಿಕ್ಕಿಯಾಗಿರುವ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಕಂದು ಬಣ್ಣದ ಚೌಕಗಳು ಎಷ್ಟಿದೆ ಎಂದು ಗುರುತಿಸಬೇಕು. ಈ ಸವಾಲು ಬಿಡಿಸಲು ನಿಮಗಿರುವ ಕಾಲಾವಕಾಶ ಐದು ಸೆಕೆಂಡುಗಳು ಮಾತ್ರ. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

ಆಪ್ಟಿಕಲ್ ಇಲ್ಯೂಷನ್ (Optical Illusion) ನಮ್ಮ ಕಣ್ಣು ಹಾಗೂ ಮೆದುಳಿಗೆ ಕೆಲಸ ನೀಡುವ ಈ ಒಗಟುಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಹೀಗಾಗಿ ಹೆಚ್ಚಿನವರು ಈ ಒಗಟುಗಳನ್ನು ಬಿಡಿಸುವತ್ತ ಹೆಚ್ಚು ಗಮನ ವಹಿಸುತ್ತಾರೆ. ನೀವು ಇಂತಹ ಒಗಟನ್ನು ವೇಗವಾಗಿ ಪರಿಹರಿಸಿದಷ್ಟೂ ನಿಮ್ಮ ಮೆದುಳು ಚುರುಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಬುದ್ಧಿ ಖರ್ಚು ಮಾಡಬೇಕಾಗುವುದು ಅಗತ್ಯ. ನಿಮ್ಮ ಬುದ್ಧಿವಂತಿಕೆ ಹಾಗೂ ತೀಕ್ಷ್ಣತೆಯನ್ನು ಪರೀಕ್ಷಿಸುವ ಒಗಟು ಇಲ್ಲಿದೆ. ಪರಿಪೂರ್ಣ ಬಾಕ್ಸ್‌ನಲ್ಲಿ ಕಂದು ಬಣ್ಣದ ಚೌಕಗಳು ಎಷ್ಟಿದೆ ಎಂದು ಹೇಳಲು ನಿಮಗಿರುವುದು ಕೇವಲ ಐದು ಸೆಕೆಂಡುಗಳು ಮಾತ್ರ. ಕೆಲವರು ಕ್ಷಣಾರ್ಧದಲ್ಲಿ ಉತ್ತರ ಕಂಡು ಕೊಂಡರೆ, ಇನ್ನು ಕೆಲವರು ಒಗಟು ಬಿಡಿಸುವಲ್ಲಿ ವಿಫಲವಾಗುತ್ತಾರೆ. ಆದರೆ ನೀವು ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.
ಈ ಚಿತ್ರದಲ್ಲಿ ಏನಿದೆ?
ಆಪ್ಟಿಕಲ್ ಭ್ರಮೆ ಐಕ್ಯೂ ಪರೀಕ್ಷೆಯು ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸುವಂತಿದೆ ಈ ಚಿತ್ರ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಬಾಕ್ಸ್‌ನ್ನು ನೀವು ಕಾಣಬಹುದು. ಇದರಲ್ಲಿ ನೀಲಿ ಹಾಗೂ ಕಂದು ಬಣ್ಣದ ಚೌಕಗಳನ್ನು ಜೋಡಿಸಲಾಗಿದ್ದು, ಕಂದು ಬಣ್ಣದ ಚೌಕಗಳನ್ನು ನೀವು ಗುರುತಿಸಬೇಕು. ಉತ್ತರ ಹುಡುಕಲು ಕೇವಲ ಐದು ಸೆಕೆಂಡುಗಳು ಮಾತ್ರ ಇರುವುದು. ಹೀಗಾಗಿ ನಿರ್ದಿಷ್ಟ ಸಮಯದೊಳಗೆ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿ.
ಇದನ್ನೂ ಓದಿ:ನಿಮ್ಮ ದೃಷ್ಟಿಗೊಂದು ಸವಾಲು; 11 ಸೆಕೆಂಡುಗಳಲ್ಲಿ ಜಿಂಕೆ ಎಲ್ಲಿದೆ ಹೇಳಿ ನೋಡೋಣ!
ಕಂದು ಬಣ್ಣದ ಚೌಕಗಳನ್ನು ಗುರುತಿಸಲು ಸಾಧ್ಯವಾಯಿತೇ?
ಇಲ್ಯೂಷನ್ ಚಿತ್ರಗಳು ಸಹವಾಗಿ ಭ್ರಮೆಯಲ್ಲಿ ಸಿಲುಕಿಸುತ್ತದೆ. ಇದಕ್ಕೆ ಈ ಚಿತ್ರ ಕೂಡ ಹೊರತಾಗಿಲ್ಲ. ನೀವು ಎಷ್ಟೇ ಹುಡುಕಿದರೂ ಐದು ಸೆಕೆಂಡಿನಲ್ಲಿ ಕಂದು ಬಣ್ಣದ ಚೌಕಗಳನ್ನು ಗುರುತಿಸಲು ಸಾಧ್ಯವಾಗಿಲ್ಲವೇ. ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ 13 ಕಂದು ಬಣ್ಣದ ಚೌಕಗಳು ಕಾಣಿಸಿದ್ದೀರಬಹುದು. ಆದರೆ ಈ ಒಂದು ಚೌಕವೇ ಅಲ್ಲ, ಇದು ಪರಿಪೂರ್ಣ ಚೌಕಗಳ ನಡುವೆ ವೇಷ ಧರಿಸಿರುವ ಆಯತ ಆಗಿದೆ. ಹೀಗಾಗಿ ಈ ಚಿತ್ರದಲ್ಲಿರುವ ಕಂದು ಬಣ್ಣದ ಚೌಕ 12. ಮತ್ತೊಮ್ಮೆ ಕಂದು ಬಣ್ಣದ ಚೌಕವನ್ನು ಲೆಕ್ಕ ಹಾಕಿ ನಿಮ್ಮ ಉತ್ತರ ಸರಿ ಇದೆಯೇ ಎಂದು ನೋಡಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




