Optical Illusion: ನಿಮ್ಮ ದೃಷ್ಟಿಗೊಂದು ಸವಾಲು; 11 ಸೆಕೆಂಡುಗಳಲ್ಲಿ ಜಿಂಕೆ ಎಲ್ಲಿದೆ ಹೇಳಿ ನೋಡೋಣ!
ಒಗಟಿನ ಚಿತ್ರ ಬಿಡಿಸುವುದು ಸುಲಭವೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಈ ಚಿತ್ರಗಳು ಮೆದುಳಿಗೆ ಕೆಲಸ ನೀಡುತ್ತವೆ. ಇದೀಗ ಅಂತಹದ್ದೇ ಒಗಟಿನ ಚಿತ್ರ ವೈರಲ್ ಆಗಿದ್ದು, ದಟ್ಟವಾದ ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು ಹನ್ನೊಂದು ಸೆಕೆಂಡುಗಳೊಳಗೆ ಕಂಡು ಹಿಡಿಯಬೇಕು. ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯನಾ ಎಂದು ಒಮ್ಮೆ ಪರೀಕ್ಷಿಸಿ ನೋಡಿ.

ಒಗಟುಗಳನ್ನು ಸಹಜವಾಗಿ ಎಲ್ಲರ ಗಮನ ಸೆಳೆಯುತ್ತದೆ. ಒಗಟುಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಸುಲಭದ ಕೆಲಸ. ಇನ್ನು ಕೆಲವರಿಗೆ ಎಷ್ಟೇ ಸಮಯ ತೆಗೆದುಕೊಂಡರೂ, ಕಠಿಣ ಸವಾಲಿನ ಒಗಟನ್ನು ಬಿಡಿಸಲು ಸಾಧ್ಯವಾಗಲ್ಲ. ಅದರ ಜೊತೆಗೆ ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳನ್ನು ಬಿಡಿಸುವಾಗ ನಮ್ಮನ್ನು ಭ್ರಮೆಯಲ್ಲಿ ಸಿಲುಕಿಸುವುದೇ ಹೆಚ್ಚು. ಇದೀಗ ಇಂತಹದ್ದೇ ಟ್ರಿಕ್ಕಿ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ದಟ್ಟವಾದ ಕಾಡನ್ನು ಕಾಣಬಹುದು. ಇಲ್ಲಿ ಜಾಣತನದಿಂದ ಜಿಂಕೆಯನ್ನು ಮರೆ ಮಾಡಲಾಗಿದೆ. ಈ ಒಗಟು ಬಿಡಿಸಲು ಕೊಟ್ಟಿರುವ ಸಮಯ ಮಿತಿಯೊಳಗೆ ಜಿಂಕೆಯನ್ನು ಪತ್ತೆ ಹಚ್ಚಲು ಸಾಧ್ಯವಾದರೆ ನೀವು ತುಂಬಾನೇ ಶಾರ್ಪ್ ಇದ್ದೀರಾ ಎಂದರ್ಥ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ ಗಮನಿಸಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ದಟ್ಟವಾದ ಕಾಡನ್ನು ನೋಡುತ್ತಿದ್ದೀರಿ. ಇಲ್ಲಿ ದಟ್ಟವಾದ ಮರಗಳು, ನೆರಳುಗಳ ನಡುವೆ ಜಿಂಕೆಯನ್ನು ಮರೆ ಮಾಡಲಾಗಿದೆ. ಆದರೆ ಈ ಜಿಂಕೆಯ ಆಕಾರವು ತೊಗಟೆ ಮತ್ತು ಕೊಂಬೆಗಳೊಂದಿಗೆ ಬೆರೆತು ಹೋಗಿದೆ. ಆದರೆ ನೀವು ನಿಮ್ಮ ದೃಷ್ಟಿಯನ್ನು ಅಗಲಿಸಿ ಜಾಣತನದಿಂದ ಮರೆ ಮಾಡಲಾಗಿರುವ ಜಿಂಕೆಯನ್ನು 11 ಸೆಕೆಂಡುಗಳಲ್ಲಿ ಹುಡುಕುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಿ ಈ ಕಾಡಿನೊಳಗೆ ಅಡಗಿ ಕುಳಿತಿರುವ ಜಿಂಕೆಯನ್ನು ಕಂಡು ಹಿಡಿಯಲು ಪ್ರಯತ್ನಿಸಿ.
ಈ ಸವಾಲು ಸ್ವೀಕರಿಸಲು ಸಿದ್ಧವಿದ್ದೀರಾ?
ದಟ್ಟ ಕಾಡಿನ ದೃಶ್ಯದಲ್ಲಿ ಮರೆಮಾಡಲಾಗಿರುವ ಜಿಂಕೆಯನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ. ಈ ಒಗಟು ಸರಳವಾಗಿ ಕಂಡರೂ ಈ ಚಿತ್ರದಲ್ಲಿ ಜಿಂಕೆಯ ಬಣ್ಣ ಸ್ಪಷ್ಟವಾಗಿಲ್ಲದಿರಬಹುದು. ಈ ಪ್ರಾಣಿಯ ದೇಹದ ಬಾಹ್ಯರೇಖೆಯು ಅದನ್ನು ಬೇರೆಡೆಗೆ ಸೆಳೆಯಬಹುದು. ನೇರವಾದ ಮರದ ರೇಖೆಗಳಿಂದ ಎದ್ದು ಕಾಣುವ ವಕ್ರಾಕೃತಿಗಳ ಕಡೆ ಗಮನ ಕೊಡಿ, ಈ ಸವಾಲು ಸ್ವೀಕರಿಸಿ ಒಗಟು ಬಿಡಿಸಿ.
ಇದನ್ನೂ ಓದಿ:ಜಸ್ಟ್ 15 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಪೇರಳೆ ಹಣ್ಣನ್ನು ಗುರುತಿಸಿ
ಜಿಂಕೆ ನಿಮ್ಮ ಕಣ್ಣಿಗೆ ಕಾಣಿಸಿತೇ?
ಕಾಡಿನ ದೃಶ್ಯವನ್ನು ಗಮನಿಸುತ್ತಾ ಅತಿಯಾಗಿ ಯೋಚಿಸಬೇಡಿ. ನೀವು ಹೆಚ್ಚು ಒತ್ತಡಕ್ಕೆ ಒಳಗಾದಷ್ಟೂ ಒಗಟು ಬಿಡಿಸುವುದು ಕಠಿಣವಾಗುತ್ತದೆ. ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ ಮತ್ತು ಚಿತ್ರವು ನಿಮ್ಮೊಂದಿಗೆ ಮಾತನಾಡಲು ಬಿಡಿ. ನೀವು ಸಮಯಕ್ಕೆ ಸರಿಯಾಗಿ ಜಿಂಕೆಯನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದರೆ, ಅಭಿನಂದನೆಗಳು. ಒಂದು ವೇಳೆ ಒಗಟು ಬಿಡಿಸಲು ಸಾಧ್ಯವಾಗಿಲ್ಲದಿದ್ದರೆ ಚಿಂತಿಸಬೇಡಿ, ಆಪ್ಟಿಕಲ್ ಇಲ್ಯೂಷನ್ ಚಿತ್ರ ಬಿಡಿಸಿ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲವೆಂದಾದರೆ ನೀವು ಬುದ್ಧಿವಂತರಲ್ಲ ಎಂದರ್ಥವಲ್ಲ. ಈ ಕೆಳಗಿನ ಚಿತ್ರದಲ್ಲಿ ಜಿಂಕೆ ಎಲ್ಲಿದೆ ಎಂದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:27 pm, Wed, 12 November 25




