ಬೆಂಗಳೂರು: ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ! ವಿಡಿಯೋ ವೈರಲ್
ವ್ಯಕ್ತಿಯೊಬ್ಬ ಫ್ಲೈಓವರ್ ಪಿಲ್ಲರ್ ಏರಿ ಅದರ ಎಡೆಯಲ್ಲಿ ಮಲಗಿರುವ ವಿಡಿಯೋ ಒಂದು ಬೆಂಗಳೂರಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಾಲಹಳ್ಳಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಇದೀಗ ಬೆಂಗಳೂರು ಪೊಲೀಸರು ತನಿಖೆಗೆ ಆದೇಶಿಸಿದ್ದು, ನಿಖರವಾಗಿ ಅಲ್ಲಿ ಏನಾಯಿತು ಎಂಬುದು ತಿಳಿದುಬರಲಿದೆ.
ಬೆಂಗಳೂರು, ನವೆಂಬರ್ 13: ಬೆಂಗಳೂರಿನ ಜಾಲಹಳ್ಳಿ ಪ್ರದೇಶದಲ್ಲಿ ಪೀಣ್ಯ ಫ್ಲೈಓವರ್ನ ಪಿಲ್ಲರ್ನ ಎಡೆಯಲ್ಲಿ ವ್ಯಕ್ತಿಯೊಬ್ಬ ಆರಾಮವಾಗಿ ಮಲಗಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಕರ್ನಾಟಕ ಪೋರ್ಟ್ಫೋಲಿಯೋ ಎಕ್ಸ್ ತಾಣ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಜಾಲಹಳ್ಳಿ ಕ್ರಾಸ್‌ನಿಂದ ಆಘಾತಕಾರಿ ಘಟನೆ ವರದಿಯಾಗಿದೆ. ಅಲ್ಲಿ ಒಬ್ಬ ವ್ಯಕ್ತಿ ಫ್ಲೈಓವರ್ ಪಿಲ್ಲರ್ನ ಟೊಳ್ಳಾದ ಭಾಗದಲ್ಲಿ ಮಲಗಿರುವುದು ಕಂಡುಬಂದಿದೆ. ಈ ವಿಲಕ್ಷಣ ದೃಶ್ಯವು ತಕ್ಷಣವೇ ದೊಡ್ಡ ಜನಸಮೂಹವನ್ನು ಸೆಳೆಯಿತು. ಜನರು ಸುತ್ತಲೂ ಜಮಾಯಿಸಿದರು ಮತ್ತು ಆ ವ್ಯಕ್ತ ಅಂತಹ ಕಿರಿದಾದ ಮತ್ತು ಅಪಾಯಕಾರಿ ಸ್ಥಳದೊಳಗೆ ಹೇಗೆ ಪ್ರವೇಶಿಸಿದ ಎಂಬ ಬಗ್ಗೆ ಚರ್ಚಿಸಿದರು ಎಂದು ಕರ್ನಾಟಕ ಪೋರ್ಟ್ಫೋಲಿಯೋ ಎಕ್ಸ್ ತಾಣದಲ್ಲಿ ಬರೆಯಲಾಗಿದೆ.
ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಪೀಣ್ಯ ಠಾಣೆಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ. ತನಿಖೆಯ ನಂತರ ವಿಚಾರ ಏನೆಂಬುದು ಗೊತ್ತಾಗಲಿದೆ.

