ಯಾದಗಿರಿ: ದಾರಿಯಲ್ಲಿ ಸಿಕ್ಕ 1.45 ಲಕ್ಷ ರೂ. ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ಸುರಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ದಯಾನಂದ ಅವರು ದಾರಿಯಲ್ಲಿ ಸಿಕ್ಕಿದ್ದ ಹಣವನ್ನು ರೈತ ಗಾದಪ್ಪ ಅವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹತ್ತಿ ಬೆಳೆ ಮಾರಿ ಮನೆಗೆ ಹೋಗುವಾಗ ರೈತ ಗೌಡಪ್ಪ ಪಾಟೀಲ್ ರಸ್ತೆಯಲ್ಲಿ 1 ಲಕ್ಷದ 47 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು.
ಯಾದಗಿರಿ, ನವೆಂಬರ್ 13: ದಾರಿಯಲ್ಲಿ ಸಿಕ್ಕ ಹಣವನ್ನು ವಾರಸುದಾರರಿಗೆ ಮರಳಿಸಿ ಪೊಲೀಸ್ ಕಾನ್ಸ್ಟೇಬಲ್ ಪ್ರಾಮಾಣಿಕತೆ ಮೆರೆದ ಪ್ರಸಂಗ ಯಾದಗಿರಿ ಜಿಲ್ಲೆಯ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹತ್ತಿ ಬೆಳೆ ಮಾರಿ ಮನೆಗೆ ಹೋಗುವಾಗ ರೈತ ಗೌಡಪ್ಪ ಪಾಟೀಲ್ ರಸ್ತೆಯಲ್ಲಿ 1 ಲಕ್ಷದ 47 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು. ಅದೇ ದಾರಿಯಲ್ಲಿ ಆಗಮಿಸಿದ ಸುರಪುರ ಪೋಲಿಸ್ ಠಾಣೆಯ ಕಾನ್ಸ್ಟೇಬಲ್ ದಯಾನಂದ ಜಮಾದರ್ ಅವರಿಗೆ ಆ ಹಣ ಸಿಕ್ಕಿದ್ದು, ಠಾಣೆ ಪಿಐ ಉಮೇಶ್ ನಾಯಕ ನೇತೃತ್ವದಲ್ಲಿ ರೈತ ಗೌಡಪ್ಪಗೆ ಹಣ ವಾಪಸ್ ಮಾಡಿದ್ದಾರೆ. ಸುರಪುರ ಪೋಲಿಸರ ಕಾರ್ಯಕ್ಕೆ ರೈತ ಗೌಡಪ್ಪ ಮತ್ತು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 13, 2025 10:30 AM
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
