AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್

ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್

ಝಾಹಿರ್ ಯೂಸುಫ್
|

Updated on: Nov 13, 2025 | 8:54 AM

Share

Brisbane Heat Women vs Perth Scorchers Women: ಬೆತ್ ಮೂನಿಯ ಈ ಭರ್ಜರಿ ಶತಕದ ನೆರವಿನೊಂದಿಗೆ ಪರ್ತ್​ ಸ್ಕಾಚರ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಬ್ರಿಸ್ಬೇನ್ ಹೀಟ್ ತಂಡವು 19.1 ಓವರ್​ಗಳಲ್ಲಿ 149 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪರ್ತ್​ ಸ್ಕಾಚರ್ಸ್ ತಂಡವು 23 ರನ್​ಗಳ ಜಯ ಸಾಧಿಸಿದೆ.

ಬ್ರಿಸ್ಬೇನ್​ನಲ್ಲಿ ನಡೆದ ವುಮೆನ್ಸ್ ಬಿಗ್ ಬ್ಯಾಷ್ ಲೀಗ್​ನ 6ನೇ ಪಂದ್ಯದಲ್ಲಿ ಪರ್ತ್​ ಸ್ಕಾಚರ್ಸ್​ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬ್ರಿಸ್ಬೇನ್ ಹೀಟ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪರ್ತ್​ ಸ್ಕಾಚರ್ಸ್ ತಂಡಕ್ಕೆ ಬೆತ್ ಮೂನಿ ಭರ್ಜರಿ ಆರಂಭ ಒದಗಿಸಿದ್ದರು.

ಆರಂಭದಲ್ಲಿ ತುಸು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಬೆತ್ ಮೂನಿ ಆ ಬಳಿಕ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಬೆತ್ ಬ್ಯಾಟ್​​ನಿಂದ 3 ಭರ್ಜರಿ ಸಿಕ್ಸ್ ಹಾಗೂ 13 ಫೋರ್​ಗಳು ಮೂಡಿಬಂದವು. ಈ ಮೂಲಕ ಕೇವಲ 73 ಎಸೆತಗಳಲ್ಲಿ 105 ರನ್ ಬಾರಿಸಿದರು.

ಬೆತ್ ಮೂನಿಯ ಈ ಭರ್ಜರಿ ಶತಕದ ನೆರವಿನೊಂದಿಗೆ ಪರ್ತ್​ ಸ್ಕಾಚರ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಬ್ರಿಸ್ಬೇನ್ ಹೀಟ್ ತಂಡವು 19.1 ಓವರ್​ಗಳಲ್ಲಿ 149 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪರ್ತ್​ ಸ್ಕಾಚರ್ಸ್ ತಂಡವು 23 ರನ್​ಗಳ ಜಯ ಸಾಧಿಸಿದೆ.