Video: ಪಂಜರದಲ್ಲಿ ಬಂಧಿಸಿದ್ದ ಪಕ್ಷಿಗಳನ್ನು ಸ್ವತಂತ್ರವಾಗಿ ಹಾರಲು ಬಿಟ್ಟು ಖುಷಿ ಪಟ್ಟ ವ್ಯಕ್ತಿ
ಮನುಷ್ಯನು ಸ್ವಾರ್ಥಿ. ಹೀಗಾಗಿ ತನ್ನ ಸ್ವಾರ್ಥಕ್ಕಾಗಿ ಪ್ರಾಣಿ ಪಕ್ಷಿಗಳನ್ನು ಪಂಜರದಲ್ಲಿ ಕೂಡಿ ಹಾಕುತ್ತಾನೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಪಂಜರದಲ್ಲಿದ್ದ ಪಕ್ಷಿಯನ್ನು ಖರೀದಿಸಿ, ಅವುಗಳನ್ನು ಸ್ವತಂತ್ರವಾಗಿ ಹಾರಲು ಬಿಟ್ಟು ಅದರಲ್ಲೇ ಖುಷಿ ಕಂಡಿದ್ದಾನೆ. ಈ ವ್ಯಕ್ತಿಯ ಒಳ್ಳೆತನವನ್ನು ನೆಟ್ಟಿಗರು ಮೆಚ್ಚಿ ಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ .

ಮನುಷ್ಯರೇ (human) ಇರಲಿ ಪ್ರಾಣಿಗಳೇ ಇರಲಿ, ಎಲ್ಲಾ ಜೀವಿಗಳಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಆದರೆ ತಿಳುವಳಿಕೆಯಿರುವ ಮನುಷ್ಯನೇ ತನ್ನ ಸ್ವಾರ್ಥಕ್ಕಾಗಿ ಸ್ವಚ್ಛಂದವಾಗಿ ಹಾರಾಡುವ ಪಕ್ಷಿಗಳನ್ನು (birds) ಬಂಧಿಸಿ ಅದರಲ್ಲಿ ತನ್ನ ಖುಷಿ ಕಾಣುತ್ತಾನೆ. ಇದಕ್ಕೆ ತದ್ವಿರುದ್ಧ ಎನ್ನುವಂತಿದೆ ಈ ದೃಶ್ಯ. ಪಂಜರದಲ್ಲಿದ್ದ ಪಕ್ಷಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಂಡ ಯುವಕನು ಅವುಗಳನ್ನು ದುಡ್ಡು ಕೊಟ್ಟು ಖರೀದಿಸಿದ್ದಾನೆ. ಆ ಬಳಿಕ ಸ್ವಚ್ಛಂದವಾಗಿ ಹಾರಲು ಬಿಟ್ಟಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.
ಪಂಜರದಲ್ಲಿದ್ದ ಪಕ್ಷಿಗಳನ್ನು ಕಂಡು ಈ ವ್ಯಕ್ತಿ ಮಾಡಿದ್ದೇನು ನೋಡಿ
ಮಂಜುನಾಥ್ ಲೋಕಾಪುರ್ (Manjuanath lokapur) ಹೆಸರಿನ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಕುಳಿತು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪಂಜರದಲ್ಲಿದ್ದ ಪಕ್ಷಿಗಳನ್ನು ಮಾರಾಟ ಮಾಡುವುದನ್ನು ನೋಡಬಹುದು. ಇದೇ ಮಾರ್ಗವಾಗಿ ನಡೆದುಹೋಗುತ್ತಿದ್ದ ಯುವಕನು ಇದನ್ನು ಗಮನಿಸಿದ್ದಾನೆ. ಹಿಂದೆ ಮುಂದೇ ನೋಡದೆ ಒಂದು ಪಂಜರದಲ್ಲಿದ್ದ ಎಲ್ಲಾ ಹಕ್ಕಿಗಳನ್ನು ಖರೀದಿಸಿದ್ದು, ಎಲ್ಲಾ ಪಕ್ಷಿಗಳನ್ನು ಮುಗಿಲೆತ್ತರಕ್ಕೆ ಹಾರಲು ಬಿಟ್ಟಿದ್ದಾನೆ. ಪಕ್ಷಿಗಳನ್ನು ಬಂಧನಮುಕ್ತಗೊಳಿಸಿದ ಸಂತೋಷವು ಆತನ ಮುಖದಲ್ಲಿ ಎದ್ದು ಕಾಣುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: ಸೂರಿಲ್ಲದ ತಾಯಿ ಮಗುವಿಗೆ ಕೈಲಾದ ಸಹಾಯ ಮಾಡಿದ ಯುವಕ
ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ದಯವಿಟ್ಟು ಈ ತರಹ ಪಕ್ಷಿಗಳನ್ನು ಯಾರು ಬಂಧಿಸಬೇಡಿ. ಯಾಕೆಂದರೆ ಮನುಷ್ಯರೇ ಒಂದು ಜಾಗದಲ್ಲಿ ಗಂಟೆ ಹೊತ್ತು ಕೂರೋಕೆ ಆಗಲ್ಲ ಎಂದಿದ್ದಾರೆ. ಇನ್ನೊಬ್ಬರು, ಲವ್ ಬರ್ಡ್ಸ್ ಗಳು ಹೊರಗಡೆ ಬದುಕೊಲ್ಲ. ಒಂದು ವೇಳೆ ಪಾರಿವಾಳ ಪಂಜರದಲ್ಲಿದ್ದರೆ ಅವುಗಳನ್ನು ಬಿಡಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಪಕ್ಷಿಗಳಿಗೆ ಸ್ವತಂತ್ರವಾಗಿ ಬದುಕುವ ಕಲೆ ಗೊತ್ತಿಲ್ಲ. ಪಾಪ ಆ ಪಕ್ಷಿಗಳನ್ನು ಕೆಲವೇ ಗಂಟೆಗಳಲ್ಲಿ ಕಾಗೆ ಅಥವಾ ಹದ್ದು ಹಿಡಿದು ಸಾಯಿಸಿ ತಿಂದು ಬಿಡುತ್ತೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




