Video: ಸೂರಿಲ್ಲದ ತಾಯಿ ಮಗುವಿಗೆ ಕೈಲಾದ ಸಹಾಯ ಮಾಡಿದ ಯುವಕ
ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ತಮ್ಮ ಬಗ್ಗೆ ಯೋಚಿಸುವವರೇ ಹೆಚ್ಚು. ಯಾರಿಗೂ ಕೂಡ ಇನ್ನೊಬ್ಬರ ಬಗ್ಗೆ ಯೋಚಿಸಲು ಸಮಯವೇ ಇಲ್ಲ. ಆದರೆ ಇದೆಲ್ಲದರ ನಡುವೆ ನಿಷ್ಕಲ್ಮಶ ಮನಸ್ಸುಳ್ಳ ಹಾಗೂ ಸಮಯ ಮಾಡುವ ವ್ಯಕ್ತಿಗಳನ್ನು ಕಂಡಾಗ ಖುಷಿಯೆನಿಸುತ್ತದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ವಿಡಿಯೋ. ಸೂರು ಇಲ್ಲದೇ ಬೀದಿ ಬದಿಯಲ್ಲೇ ಜೀವನ ನಡೆಸುತ್ತಿರುವ ತಾಯಿ ಮಗುವಿಗೆ ಸಹಾಯ ಮಾಡಿ ಯುವಕನೊಬ್ಬ ನೆಟ್ಟಿಗರ ಮನಸ್ಸು ಗೆದ್ದಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬದುಕಿನಲ್ಲಿ (life) ಒಬ್ಬರದ್ದು ಒಂದೊಂದು ರೀತಿಯ ಹೋರಾಟ. ಕೆಲವರು ತಮ್ಮ ಮುರೊತ್ತಿನ ತುತ್ತು ಹಾಗೂ ಸೂರಿಗಾಗಿ ಹೋರಾಟ ನಡೆಸುತ್ತಾರೆ. ಆದರೆ ಮನೆಯಿಲ್ಲದೇ ರಸ್ತೆಯಲ್ಲೇ ಮಲಗುವ ಕೆಲವು ವ್ಯಕ್ತಿಗಳನ್ನು ಕಂಡಾಗ ನಿಜಕ್ಕೂ ಕರುಳು ಚುರ್ ಎನ್ನುತ್ತೆ. ಅವರಗಿಂತ ನಮ್ಮ ಜೀವನವೇ ಎಷ್ಟೋ ಲೇಸು ಎಂದೆನಿಸುತ್ತದೆ. ಇದೀಗ ಬೀದಿ ಬದಿಯಲ್ಲೇ ಪುಟಾಣಿಯ ಕಂದಮ್ಮನೊಂದಿಗೆ ಮಲಗಿರುವ ಮಹಿಳೆಗೆ ತನ್ನ ಕೈಲಾದ ಸಹಾಯ ಮಾಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.
ಈ ತಾಯಿ ಮಗುವಿನದ್ದು ರಸ್ತೆಯಲ್ಲೇ ಬದುಕು: ಮುಂದೇನಾಯ್ತು ನೋಡಿ
ಮಂಜುನಾಥ್ ಲೋಕಾಪುರ್ (manjunath_lokapur) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯ ಸ್ಪರ್ಶಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಪುಟ್ಟ ಕಂದಮ್ಮನ ಜತೆಗೆ ಬೀದಿ ಬದಿಯಲ್ಲಿ ಮಲಗಿರುವುದನ್ನು ಕಾಣಬಹುದು. ಇದನ್ನು ಗಮನಿಸಿದ ಯುವಕನೊಬ್ಬ ಹಾಸಿಗೆ, ಸೊಳ್ಳೆ ಪರದೆ ಹಾಗೂ ಆಹಾರವನ್ನು ಆಕೆಗೆ ಕೊಟ್ಟಿದ್ದಾನೆ. ತಾನೇ ಸೊಳ್ಳೆ ಪರದೆಯನ್ನು ಹಾಕಿ, ಹಾಸಿಗೆ ಹಾಸಿ ತಾಯಿ ಮಗುವನ್ನು ಮಲಗುವಂತೆ ಕೇಳಿದ್ದಾನೆ. ತಾಯಿ ಮಗುವಿನೊಂದಿಗೆ ಸಿಹಿ ತಿಂಡಿ ತಿಂದು ಪ್ರೀತಿ ಹಂಚಿದ್ದಾನೆ. ಅಪರಿಚಿತ ವ್ಯಕ್ತಿಯ ಸಹಾಯದಿಂದ ಖುಷಿಗೊಂಡ ಮಹಿಳೆಯೂ ಆತನಿಗೆ ಕೃತಜ್ಞತೆ ಸಲ್ಲಿಸಿ ಖುಷಿಯಿಂದಲೇ ಕಳುಹಿಸಿಕೊಟ್ಟಿರುವುನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ನೋಡೋರಿಗೆ ಮನೋರಂಜನೆ; ಇದು ಸೈಕಲ್ ಸರ್ಕಸ್ ನಂಬಿಕೊಂಡ ಕುಟುಂಬದ ಹೋರಾಟದ ಬದುಕು
ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದರ ದೇವರು ನಿನಗೆ ಒಳ್ಳೆಯದು ಮಾಡಲಿ, ಅಣ್ಣ ತುಂಬಾ ಖುಷಿ ಆಯ್ತು ಎಂದಿದ್ದಾರೆ. ಇನ್ನೊಬ್ಬರು, ಬಡವರಿಗೆ ಸಹಾಯ ಮಾಡಲು ದೇವರು ಇನ್ನು ಹೆಚ್ಚು ಶಕ್ತಿ ಕೊಡಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ದೇವರು ಮನುಷ್ಯನ ರೂಪದಲ್ಲಿ ಬಂದು ಆ ತಾಯಿ ಮಗುವಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




