Brain Teaser: ಒಗಟು ಬಿಡಿಸೋದ್ರಲ್ಲಿ ನೀವು ಶಾರ್ಪ್ ಇದ್ರೆ ಈ ಪ್ರಶ್ನೆಗೆ ಉತ್ತರ ಹೇಳಿ ನೋಡೋಣ
ಒಗಟು ಬಿಡಿಸುವ ಆಸಕ್ತಿ ನಿಮಗಿದ್ದರೆ ನಿಮಗೊಂದು ಸವಾಲು ಇದೆ. ಸರಳವಾಗಿ ಕಾಣುತ್ತಿರುವ ಈ ಒಗಟಿನ ಪ್ರಶ್ನೆ ಬಿಡಿಸಿ ಉತ್ತರ ಹೇಳಲು ಪ್ರಯತ್ನಿಸಿ. ನೀವು ಒಗಟು ಬಿಡಿಸುವುದರಲ್ಲಿ ಪಂಟರಾಗಿದ್ರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋದು ಕಷ್ಟವೇನು ಆಗಲ್ಲ. ಹಾಗಾದರೆ ನೀವು ಕಠಿಣ ಒಗಟಿನ ಪ್ರಶ್ನೆಯತ್ತ ಗಮನ ಹರಿಸಿ.

ಕೆಲವರು ಸಮಯ ಸಿಕ್ಕಾಗಲೆಲ್ಲಾ ಈ ಒಗಟಿನ ಪ್ರಶ್ನೆಗಳನ್ನು ಬಿಡಿಸುತ್ತಾರೆ. ಇದು ಟೈಮ್ ಪಾಸ್ ಮಾಡುವುದರಲ್ಲೇ ನಿಮ್ಮ ಬುದ್ಧಿ ಶಕ್ತಿ ಹಾಗೂ ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪಝಲ್, ಬ್ರೈನ್ ಟೀಸರ್ (brain teaser) ಸೇರಿದಂತೆ ಒಗಟಿನ ಚಿತ್ರಗಳು ಹಾಗೂ ಪ್ರಶ್ನೆಗಳು ವೈರಲ್ ಆಗುತ್ತಿರುತ್ತವೆ. ನೀವು ಒಗಟಿಗೆ ಉತ್ತರ ಕಂಡು ಹಿಡಿಯುವುದರಲ್ಲಿ ಎಕ್ಸ್ಪರ್ಟ್ಸ್ ಅಂತಾದ್ರೆ ಕೆಂಪು ಕುದುರೆಯ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ, ಈ ಸರಳ ಒಗಟಿನ ಪ್ರಶ್ನೆ ಬಿಡಿಸಿ ಜಾಣರು ಎನಿಸಿಕೊಳ್ಳಿ.
ಒಗಟಿನ ಪ್ರಶ್ನೆ ಹೀಗಿದೆ?
ಕೆಲವರಿಗೆ ಟ್ರಿಕ್ಕಿ ಒಗಟಿನ ಪ್ರಶ್ನೆಗಳನ್ನು ಬಿಡಿಸುವುದೆಂದರೆ ಭಾರೀ ಇಷ್ಟ. ಹೀಗಾಗಿ ಇಂತಹ ಆಟಗಳನ್ನು ಆಡಲು ಇಷ್ಟ ಪಡುತ್ತಾರೆ. ಆದರೆ ಇದೀಗ learn_kannada3bysinch ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಒಗಟಿನ ಪ್ರಶ್ನೆಯನ್ನು ಹಂಚಿಕೊಳ್ಳಲಾಗಿದೆ. ಮೆದುಳಿಗೆ ಕೆಲಸ ನೀಡುವ ಟ್ರಿಕ್ಕಿ ಒಗಟಿನ ಪ್ರಶ್ನೆ ಹೀಗಿದೆ. ಕೆಂಪು ಕುದುರೆಯ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ, ನಾನು ಯಾರು?. ಈ ಒಗಟನ್ನು ಬಿಡಿಸಲು ನೀವು ರೆಡಿ ಇದ್ದೀರಾ. ಹೆಚ್ಚು ಒತ್ತಡ ತೆಗೆದುಕೊಳ್ಳದೇ ಒಗಟು ಬಿಡಿಸಿ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಿಕೊಳ್ಳಿ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಸಂಬಂಧಗಳ ನಡುವಿನ ರಹಸ್ಯ ಬಿಡಿಸಲು ಇಲ್ಲಿದೆ ಪ್ರಶ್ನೆ; ಈ ಒಗಟು ಬಿಡಿಸಿದ್ರೆ ನೀವು ಬುದ್ಧಿವಂತರು
ಒಗಟಿಗೆ ಉತ್ತರ ಕಂಡು ಹಿಡಿಯಲು ಸಾಧ್ಯವಾಯಿತೇ?
ಎಷ್ಟೇ ತಲೆ ಕೆಡಿಸಿಕೊಂಡರು ಕೆಲವು ಒಗಟಿನ ಪ್ರಶ್ನೆಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಮೆದುಳಿಗೆ ಕೈ ಹಾಕಿದಂತೆ ಆಗುತ್ತದೆ. ಕೊನೆಗೆ ಉತ್ತರ ಸಿಗದೇ ಸೋತೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಒಗಟನ್ನು ಬಿಡಿಸಲು ಸಾಧ್ಯವಾಗಿಲ್ಲ ಎಂದಾದರೆ ನೀವು ಬುದ್ಧಿವಂತರು ಎಂದರ್ಥವಲ್ಲ. ಈ ಟ್ರಿಕ್ಕಿ ಪ್ರಶ್ನೆಗೆ ಕೆಲವರು ತೊಟ್ಟಿಲು ಎಂದರೆ, ಇನ್ನು ಕೆಲವರು ಬಸ್ ಎಂದಿದ್ದಾರೆ. ಆದರೆ ಕೆಂಪು ಕುದುರೆಯ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ ಈ ಪ್ರಶ್ನೆಗೆ ಉತ್ತರ ರೊಟ್ಟಿ ಅಥವಾ ದೋಸೆಯಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




