AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯ ಹುಟ್ಟುಹಬ್ಬಕ್ಕೆ ವಿಶ್​​ ಮಾಡದ ಫ್ಯಾಮಿಲಿ ಸದಸ್ಯರಿಗೆ ವಾಟ್ಸಪ್ ಗ್ರೂಪ್​​​ನಲ್ಲಿ ಈ ವ್ಯಕ್ತಿ ಹೇಳಿದ್ದೇನು ಗೊತ್ತಾ?

ಫ್ಯಾಮಿಲಿ ವಾಟ್ಸಾಪ್ ಗ್ರೂಪ್‌ನಲ್ಲಿ ಯಾರೂ ತನ್ನ ಹೆಂಡತಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದಿದ್ದಾಗ, ಪತಿ ಹಾಸ್ಯಮಯವಾಗಿ ಕುಟುಂಬ ಸದಸ್ಯರನ್ನು ಪ್ರಶ್ನಿಸಿದ್ದಾರೆ. ಅವರ ಮಗ ಈ ಪೋಸ್ಟ್ ಅನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಇದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು ಬಂದಿದೆ. ಈ ಬಗ್ಗೆ ಇಲ್ಲಿದೆ ನೋಡಿ ಸ್ಟೋರಿ

ಪತ್ನಿಯ ಹುಟ್ಟುಹಬ್ಬಕ್ಕೆ ವಿಶ್​​ ಮಾಡದ ಫ್ಯಾಮಿಲಿ ಸದಸ್ಯರಿಗೆ ವಾಟ್ಸಪ್ ಗ್ರೂಪ್​​​ನಲ್ಲಿ ಈ ವ್ಯಕ್ತಿ ಹೇಳಿದ್ದೇನು ಗೊತ್ತಾ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Nov 12, 2025 | 2:00 PM

Share

ರೆಡ್ಡಿಟ್​​​ನಲ್ಲಿ ತುಂಬಾ ಕ್ಯೂಟ್​​ ಆಗಿರುವ ಪೋಸ್ಟ್​​ವೊಂದು ವೈರಲ್​​ ಆಗಿದೆ. ತನ್ನ ಹೆಂಡತಿಯ ಹುಟ್ಟು ಹಬ್ಬಕ್ಕೆ ಫ್ಯಾಮಿಲಿ ವಾಟ್ಸಪ್ ಗ್ರೂಪ್​​​ನಲ್ಲಿ (Family WhatsApp group) ಯಾರೂ ವಿಶ್​​ ಮಾಡಿಲ್ಲ ಎಂದು ಗ್ರೂಪ್​​​ನಲ್ಲಿ ಕುಟುಂಬ ಸದಸ್ಯರಿಗೆ ಹಾಕಿರುವ ಸಂದೇಶ ಸೋಶಿಯಲ್​​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ. ಬಗ್ಗೆ ಅವರ ಮಗ ರೆಡ್ಡಿಟ್​​​ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ಗೆ ತಂದೆ ಸಂದೇಶ ನನ್ನ ಇಡೀ ಕುಟುಂಬವನ್ನು ಲೋಲ್ ಎಂದು ಕರೆದರು ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಪೋಸ್ಟ್​​ಗೆ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

ಪೋಸ್ಟ್​​​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ನಮ್ಮ ಫ್ಯಾಮಿಲಿ ವಾಟ್ಸಪ್ ಗ್ರೂಪ್​​​ನಲ್ಲಿ ನನ್ನ ತಂದೆ, ತಾಯಿ, ಚಿಕ್ಕಮ್ಮ, ಚಿಕ್ಕಪ್ಪ, ದೊಡ್ಡಮ್ಮ ದೊಡ್ಡಪ್ಪ, ಅತ್ತೆಮಾವ, ಅವರ ಮಕ್ಕಳು , ನನ್ನ ಹೆಂಡತಿ, ಮಕ್ಕಳು ಎಲ್ಲರೂ ಕೂಡ ಇದ್ದಾರೆ. ಗ್ರೂಪ್​​ನಲ್ಲಿ ನನ್ನ ತಾಯಿಯ ಹುಟ್ಟು ಹಬ್ಬಕ್ಕೆ ಯಾರೊಬ್ಬರು ಕೂಡ ಶುಭಾಶಯ ತಿಳಿಸಿಲ್ಲ. ಅವರೆಲ್ಲ ಗ್ರೂಪ್​​ನಲ್ಲಿ ಆಕ್ಟಿವ್​​ ಆಗಿರುವುದು ಕಡಿಮೆ, ಹಾಗಾಗಿ ಗ್ರೂಪ್​​​ನಲ್ಲಿ ತುಂಬಾ ಮೌನ ಆವರಿಸಿತು. ವೇಳೆ ನನ್ನ ಅಮ್ಮ ಗ್ರೂಪ್​​​ನಲ್ಲಿ ಹೀಗೆ ಸುಮ್ಮನೆ ಒಂದು ಮೆಸೇಜ್​​ ಹಾಕಿದ್ರು, ಅಲ್ಲಿಂದ ಸ್ವಲ್ಪ ಚರ್ಚೆಗಳು ನಡೆಯಿತು. ಸ್ವಲ್ಪ ಹೊತ್ತಿನ ನಂತರ ಅಪ್ಪ ಇದರಲ್ಲಿ ಮಧ್ಯಪ್ರವೇಶ ಮಾಡಿದ್ರು, ನನ್ನ ಹೆಂಡತಿಯ ಹುಟ್ಟುಹಬ್ಬದಂದು ತುಂಬಾ ಪ್ರೀತಿಯನ್ನು ಸುರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಎಂದು ಅಪ್ಪ ವ್ಯಂಗ್ಯವಾಗಿ ಹೇಳಿದ್ರು, ಎಲ್ಲರೂ ಕೂಡ ಮೆಸೇಜ್ಗೆ ​​​​ನಗುವಿನ ಎಮೋಜಿ ಕಳಿಸಿದ್ರು, ಗ್ರೂಪ್​​​ನಲ್ಲಿ ಕುಟುಂಬದ ಇತರರ ಸದಸ್ಯರ ಹುಟ್ಟುಹಬ್ಬದಂದು ಶುಭಾಶಯಗಳು ಬರುತ್ತದೆ. ಆದರೆ ನನ್ನ ತಾಯಿಗೆ ಯಾರೂ ಶುಭಾಶಯ ತಿಳಿಸಿಲ್ಲ. ಗ್ರೂಪ್​​​ನಲ್ಲಿ ಅಪ್ಪನ ಮೆಸೇಜ್​​ ಬರುತ್ತಿದ್ದಂತೆ ಹುಟ್ಟು ಹಬ್ಬದ ಸುರಿಮಳೆ ಶುರುವಾಯಿತುಎಂದು ಹೇಳಿದ್ದಾರೆ.

ಇದನ್ನೂ ಓದಿ: ಇದು ಆಪಲ್‌ ಕಂಪನಿಯ ತಾಕತ್ತು: 3 ದಿನ ಮಣ್ಣಿನಲ್ಲಿ ಹೂತುಹೋಗಿದ್ರೂ ಕೆಲಸ ಮಾಡ್ತಿದೆ ಐಫೋನ್ 17 ಪ್ರೊ

ವೈರಲ್​​​ ಪೋಸ್ಟ್​​ ಇಲ್ಲಿದೆ ನೋಡಿ: 

My father literally called my whole family out lol byu/constantdownfall_ inTeenIndia

ಸೂಪರ್​​​​​​​​ ಸರ್ನೀವು ಎಂದ ನೆಟ್ಟಿಗರು:

ನನ್ನ ಫ್ಯಾಮಿಲಿ ಗ್ರೂಪ್​​​​ನಲ್ಲಿ ಎಲ್ಲವೂ ಸರಳವಾಗಿದೆ. ಯಾರೂ ಯಾವುದೇ ಹುಟ್ಟುಹಬ್ಬವನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ನಿಮ್ಮ ತಂದೆ ತುಂಬಾ ಪೂಕಿ (ಕ್ಯೂಟ್​​) ಎಂದು ತಮಾಷೆಯಾಗಿ ಹೇಳಿದ್ದಾರೆ. ಪುರುಷರು ತಮ್ಮ ಹೆಂಡತಿಯ ಪರವಾಗಿ ನಿಲ್ಲುವ ಧೈರ್ಯವಿಲ್ಲದಿದ್ದರೆ ಮದುವೆಯಾಗಬಾರದು ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ. ನಿಮ್ಮ ಅಮ್ಮನ ಪರವಾಗಿ ನಿಂತಿದ್ದಕ್ಕಾಗಿ ನಿಮ್ಮ ತಂದೆಗೆ ಕೃತಜ್ಞತೆ ಹೇಳಿದೆ ಎಂದು ಮತ್ತೊಬ್ಬರು ಕಮೆಂಟ್​​​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:54 pm, Wed, 12 November 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ