ಇದು ಆಪಲ್ ಕಂಪನಿಯ ತಾಕತ್ತು: 3 ದಿನ ಮಣ್ಣಿನಲ್ಲಿ ಹೂತುಹೋಗಿದ್ರೂ ಕೆಲಸ ಮಾಡ್ತಿದೆ ಐಫೋನ್ 17 ಪ್ರೊ
ಫಿಲಿಪೈನ್ಸ್‌ನಲ್ಲಿ ಭೀಕರ ಚಂಡಮಾರುತದ ನಡುವೆಯೂ, ಮಣ್ಣಿನಲ್ಲಿ ಹೂತುಹೋಗಿದ್ದ ಐಫೋನ್ 17 ಪ್ರೊ ಮತ್ತೆ ಕೆಲಸ ಮಾಡಿದೆ. ತಮ್ಮ ಐಫೋನ್ ಬದುಕುಳಿದ ಬಗ್ಗೆ ಚಂಡಮಾರುತದಿಂದ ಪಾರಾದ ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ವೈರಲ್ ಆಗಿದ್ದು, ಆಪಲ್‌ನ ಬಾಳಿಕೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಚಂಡಮಾರುತದ ಅನಾಹುತಗಳ ನಡುವೆ ಈ ಐಫೋನ್ ಕೆಲಸ ಮಾಡಿರುವುದು ಪವಾಡ ಎಂದು ಹಲವು ಜನ ಕಮೆಂಟ್ ಮಾಡಿದ್ದಾರೆ.

ಫಿಲಿಪೈನ್ಸ್‌ನಲ್ಲಿ (Philippines) ಭಾರೀ ಚಂಡಮಾರುತ ಉಂಟಾಗಿ ಮೂಕಸೌಕರ್ಯಗಳು ನಾಶವಾಗಿದೆ. ಹಲವು ಜನ ಸಾವನ್ನಪ್ಪಿದ್ದಾರೆ. ಆದರೆ ಇದರ ನಡುವೆ ಚಂಡಮಾರುತಕ್ಕೆ ತಂತ್ರಜ್ಞಾನವೊಂದು ಸೆಡ್ಡು ಹೊಡೆದು ನಿಂತಿದೆ. ಇದೀಗ ಈ ಘಟನೆ ಭಾರೀ ವೈರಲ್ ಆಗಿದೆ. ವಿನಾಶಕಾರಿ ಚಂಡಮಾರುತದಿಂದ ಬದುಕುಳಿದ ವ್ಯಕ್ತಿಯೊಬ್ಬರ ಐಫೋನ್ 17 ಪ್ರೊ (iPhone 17 Pro) ಮಣ್ಣಿನಲ್ಲಿ ಹೂತುಹೋಗಿದ್ದರೂ ಮತ್ತೆ ಅದು ಕೆಲಸ ಮಾಡುತ್ತಿದೆ. ಇದನ್ನು ಅವರು ರೆಡ್ಡಿಟರ್ನಲ್ಲಿ ಹಂಚಿಕೊಂಡಿದ್ದು, ನೆಟ್ಟಗರು ಆಪಲ್ ಕಂಪನಿಯನ್ನು ಶ್ಲಾಘಿಸಿದ್ದಾರೆ. ಭಾರೀ ಚಂಡಮಾರುತದಿಂದ ಫಿಲಿಪೈನ್ಸ್ ತತ್ತರಿಸಿ ಹೋಗಿದೆ. ಮೂಲಸೌಕರ್ಯಗಳು ನಾಶವಾಗಿದ್ದರು, ಈ ಐಫೋನ್ 17 ಪ್ರೊ ವರ್ಕ್ ಮಾಡುತ್ತಿದೆ ಎಂದರೆ ನಂಬಲು ಸಾಧ್ಯವೇ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಚಂಡಮಾರುತದಿಂದ ಬದುಕುಳಿದ ವ್ಯಕ್ತಿ ರೆಡ್ಡಿಟರ್ನಲ್ಲಿ ಈ ಬಗ್ಗೆ ವಿವರಿಸಿದ್ದಾರೆ. ” ಫಿಲಿಪೈನ್ಸ್ ಚಂಡಮಾರುತದಿಂದ ಎಲ್ಲವನ್ನು ಕಳೆದುಕೊಂಡಿದೆ. ಜನರು ತಮ್ಮವರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಸುಂದರ ಜೀವನ ನಡೆಸುತ್ತಿದ್ದ ಅದೆಷ್ಟೋ ಜೀವಗಳು ಮಣ್ಣು ಸೇರಿದೆ. ನಾನು ಕೂಡ ಈ ಚಂಡಮಾರುತದಿಂದ ನನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದೇನೆ. ಚಂಡಮಾರುತದಿಂದ ನನ್ನ ಮನೆಯೊಳಗೆ ನೀರು ಬಂದು ಮುಳುಗಿ ಹೋಗಿದೆ. ಇದರಿಂದ ತಪ್ಪಿಸಿಕೊಳ್ಳಲು ಮನೆಯ ಛಾವಣಿ ಮೇಲೆ ಏರಬೇಕಾದ ಪರಿಸ್ಥಿತಿ ಬಂತು. ಈ ವೇಳೆ ಕಾಲು ಜಾರಿ ಛಾವಣಿಯಿಂದ ನೀರಿಗೆ ಬಿದ್ದೆ, 15 ನಿಮಿಷಗಳ ಕಾಲ ನೀರಿನಲ್ಲಿ ಒದ್ದಾಡಿ, ಹೇಗೋ ಮೇಲೆ ಬಂದೆ, ಆದರೆ ಈ ವೇಳೆ ನನ್ನ ಕೈಯಲ್ಲಿದ್ದ ಐಫೋನ್ 17 ಪ್ರೊ ನೀರಿಗೆ ಬಿದ್ದಿದೆ. ಫೋನ್ ನೀರಿಗೆ ಬಿದ್ದದ್ದು ನನಗೆ ಗೊತ್ತೆ ಆಗಿಲ್ಲ. 3 ದಿನಗಳ ನಂತರ ನನ್ನ ಮನೆ ಬಳಿ ಹೋದೇ ಎಲ್ಲವೂ ನೀರು ಪಾಲಾಗಿತ್ತು. ಆದರೆ ಮನೆಯ ಒಂದು ಮೂಲೆಯಲ್ಲಿ ನನ್ನ ಐಫೋನ್ 17 ಪ್ರೊ ಮಣ್ಣಿನಲ್ಲಿ ಅರ್ಧ ಹೂತುಹೋಗಿತ್ತು. ಅದನ್ನು ಸ್ವಲ್ಪ ಸ್ವಚ್ಛ ಮಾಡಿ, ಚಾರ್ಜ್ಗೆ ಹಾಕಿದೆ, ತಕ್ಷಣ ಅದು ಆನ್ ಆಯಿತು. ಯಾವುದೇ ಗೀರುಗಳಿಲ್ಲ, ಯಾವುದೇ ಸಮಸ್ಯೆಗಳಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಸ್ತೆ ಮಧ್ಯೆ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸಿದ ಯುವಕನಿಗೆ ಪೊರಕೆಯಿಂದ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
I almost drowned and died from a flash food. My whole house was destroyed and everything in it. my phone survived being in mud for 3 days byu/bricksandcanvas iniphone
ಆಪಲ್ ಕಂಪನಿಯನ್ನು ಶ್ಲಾಘಿಸಿದ ನೆಟ್ಟಿಗರು:
ನಿಮ್ಮ ಫೋನ್ ಅದ್ಭುತವಾಗಿದೆ. ಮತ್ತೆ ವರ್ಕ್ ಮಾಡುತ್ತಿದೆ ಎಂದರೆ ಅಚ್ಚರಿ ಪಡುವ ಸಂಗತಿ ಎಂದು ಒಬ್ಬರು ಹೇಳಿದ್ದಾರೆ. ಮೊಬೈಲ್ ಫೋನ್‌ಗಳು ಬಾಳಿಕೆಯ ವಿಷಯದಲ್ಲಿ ಎಷ್ಟು ಮುಂದುವರೆದಿವೆ ಎಂಬುದು ಇದರಲ್ಲಿ ಅರ್ಥವಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇತ್ತಿಚೇಗಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಹೆಚ್ಚು ಬಾಳಿಕೆ ಹಾಗೂ ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಆದರೆ ಐಫೋನ್ 17 ಪ್ರೊ ತುಂಬಾ ಅದ್ಭುತವಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:59 am, Wed, 12 November 25




