AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇದು ಯಕ್ಷಗಾನ ಗೊಂಬೆಯಾಟ; ಸೂತ್ರದಲ್ಲೇ ಕಥೆ ಹೇಳುವ ಪರಿ ರೋಚಕ

ನೀವು ಯಕ್ಷಗಾನ ಪ್ರಸಂಗಗಳನ್ನು ನೋಡಿಯೇ ಇರುತ್ತೀರಿ. ಆದರೆ ಯಕ್ಷಗಾನ ಬೊಂಬೆಯಾಟ ನೋಡಿರುವುದು ಕಡಿಮೆಯೇ. ಯಕ್ಷಗಾನದ ಕಥೆಗಳನ್ನು ಬೊಂಬೆಗಳ ಮೂಲಕ ಪ್ರದರ್ಶಿಸುವ ಕ್ಲಿಪಿಂಗ್ಸ್‌ವೊಂದು ವೈರಲ್ ಆಗಿದೆ. ಚೂಡಾಮಣಿ ಹಾಗೂ ಲಂಕದಹನ ಪ್ರಸಂಗವನ್ನು ಗೊಂಬೆಯಾಟದ ಮೂಲಕ ಪ್ರದರ್ಶಿಸಲಾಗಿದೆ. ಅಳಿವಿನಂಚಿನಲ್ಲಿರುವ ಈ ಕಲಾಪ್ರಕಾರವನ್ನು ಉಳಿಸಿ ಎಂದು ಬಳಕೆದಾರರು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ

Video: ಇದು ಯಕ್ಷಗಾನ ಗೊಂಬೆಯಾಟ; ಸೂತ್ರದಲ್ಲೇ ಕಥೆ ಹೇಳುವ ಪರಿ ರೋಚಕ
ಯಕ್ಷಗಾನ ಗೊಂಬೆಯಾಟImage Credit source: Instagram
ಸಾಯಿನಂದಾ
|

Updated on:Nov 11, 2025 | 4:52 PM

Share

ಕರಾವಳಿ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನದ (Yakshagana) ಬಗ್ಗೆ ನಿಮಗೆ ತಿಳಿದಿರಬಹುದು. ಈ ಕಲೆಯ ಪೂರ್ವರೂಪವೇ ಈ ಯಕ್ಷಗಾನ ಬೊಂಬೆಯಾಟ. ಇದು ಕರ್ನಾಟಕದ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಒಂದು ಸಂಪ್ರದಾಯದ ಕಲಾ ಪ್ರಕಾರವಾಗಿದ್ದು, ಬೊಂಬೆಗಳ ಮೂಲಕ ಯಕ್ಷಗಾನದ ಕಥೆಗಳನ್ನು ಹೇಳಲಾಗುತ್ತದೆ. ಇದೀಗ ನೀರ್ಜಿವ ಗೊಂಬೆಗಳಿಗೆ ಕಥೆಯ ಪಾತ್ರದ ಮೂಲಕ ಜೀವ ಕಳೆ ತುಂಬುವ ಈ ವಿಡಿಯೋ ಸದ್ಯ ವೈರಲ್ ಆಗಿದೆ. ಚೂಡಾಮಣಿ ಹಾಗೂ ಲಂಕದಹನ ಪ್ರಸಂಗವನ್ನು ಗೊಂಬೆಯಾಟದ ಮೂಲಕ ಪ್ರದರ್ಶಿಸಲಾಗುತ್ತಿದ್ದು, ಈ ಕಲಾ ಪ್ರಕಾರಕ್ಕೆ ನೆಟ್ಟಿಗರು ಕಳೆದೇ ಹೋಗಿದ್ದಾರೆ.

ವೇದಿಕೆಯ ಮೇಲೆ ಯಕ್ಷಗೊಂಬೆಗಳ ಮೋಡಿ ಹೇಗಿದೆ ನೋಡಿ

cool_dude_dhyan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಯಕ್ಷಗಾನ ಗೊಂಬೆಯಾಟದ ಪ್ರದರ್ಶನವನ್ನು ನೋಡಬಹುದು. ಪುಟ್ಟ ಗೂಡಿನಂತೆ ಇರುವ ವೇದಿಕೆಯ ಮೇಲೆ ಚೆಂಡೆ, ಮೆದ್ದಳೆ ಹಾಗೂ ಭಾಗವತಿಕೆಯೊಂದಿಗೆ ಯಕ್ಷ ಬೊಂಬೆಗಳು ಪ್ರಸಂಗವನ್ನು ಪ್ರಸ್ತುತ ಪಡಿಸುತ್ತಿವೆ. ಸೂತ್ರದಾರನ ಅಣತಿಯಂತೆ ಕಥೆಯನ್ನು ಅಭಿನಯಿಸುತ್ತ ಚೂಡಾಮಣಿ ಹಾಗೂ ಲಂಕದಹನ ಪ್ರಸಂಗದ ಕಥೆಯನ್ನು ಹೇಳುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ನೋಡೋರಿಗೆ ಮನೋರಂಜನೆ; ಇದು ಸೈಕಲ್ ಸರ್ಕಸ್ ನಂಬಿಕೊಂಡ ಕುಟುಂಬದ ಹೋರಾಟದ ಬದುಕು

ಈ ವಿಡಿಯೋ ನಲವತ್ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈವಾಗ ಈ ಕಲೆ ಮಾಯವಾಗಿದೆ. ಇದು ತುಂಬಾ ಬೇಸರದ ಸಂಗತಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಹೀಗೆ ಕಾಲ ಮಿತಿ ಯಕ್ಷಗಾನಕ್ಕೆ ಪ್ರಾಮುಖ್ಯತೆ ಕೊಟ್ಟರೆ ಯಕ್ಷಗಾನ ಕಲೆನೂ ಉಳಿಯುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನಾವು ಸಣ್ಣ ವಯಸ್ಸಿನಲ್ಲಿ ಈ ಬೊಂಬೆ ಆಟ ನೋಡಿದ್ದೇವೆ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Tue, 11 November 25