ಗೆಳತಿಯ ಪೋಷಕರನ್ನು ಮೆಚ್ಚಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ
ಚೀನಾದಲ್ಲಿ ಪ್ರೀತಿಗಾಗಿ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ 36 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಗೆಳತಿಯ ಪೋಷಕರನ್ನು ಮೆಚ್ಚಿಸಲು ತೂಕ ಇಳಿಸಿಕೊಳ್ಳಲು ಯತ್ನಿಸಿದ್ದ ವ್ಯಕ್ತಿ, ಶಸ್ತ್ರಚಿಕಿತ್ಸೆ ಬಳಿಕ ಅಸುನೀಗಿದ್ದಾರೆ. ವೈದ್ಯರು ನಿರ್ಲಕ್ಷ್ಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಆರೋಪಿಸಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರೀತಿಗಾಗಿ ಕೆಲವರು ಹುಚ್ಚು ಕೆಲಸಗಳನ್ನು ಮಾಡುತ್ತಾರೆ. ಅದರಲ್ಲೂ ಈ ಹುಡುಗರು ಪ್ರೀತಿಸಿದ ಹುಡುಗಿಗಾಗಿ ಏನ್ ಬೇಕಾದರೂ ಮಾಡ್ತಾರೆ ಎಂಬುದಕ್ಕೆ ಚೀನಾದ (Chinese man weight loss surgery) ಈ ಘಟನೆ ಸಾಕ್ಷಿಯಾಗಿದೆ. ಚೀನಾದ 36 ವರ್ಷದ ವ್ಯಕ್ತಿಯೊಬ್ಬರು ತನ್ನ ಗೆಳತಿಯ ಪೋಷಕರಿಗೆ ತನ್ನ ಮೇಲೆ ಒಳ್ಳೆಯ ಅಭಿಪ್ರಾಯ ಬರಬೇಕೆಂದು ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಈ ಸುದ್ದಿ ವೈರಲ್ ಆಗಿದೆ. ಶಸ್ತ್ರಚಿಕಿತ್ಸೆಗೆ ಮುನ್ನ ಮತ್ತು ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಅವರ ಆರೈಕೆ ಬಗ್ಗೆ ಸರಿಯಾದ ಕಾಳಜಿ ಮಾಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಮೃತ ವ್ಯಕ್ತಿ ಲಿ ಜಿಯಾಂಗ್ (ನಿಜವಾದ ಹೆಸರು ಬಹಿರಂಗ ಪಡಿಸಿಲ್ಲ) ಎಂಬುವವರು ಹೆನಾನ್ ಪ್ರಾಂತ್ಯದ ಕ್ಸಿನ್ಕ್ಸಿಯಾಂಗ್ ಪ್ರದೇಶದವರು. 174 ಸೆಂ.ಮೀ ಎತ್ತರ ಮತ್ತು 130 ಕಿಲೋಗ್ರಾಂ ತೂಕ ಇದ್ದ ಲಿ ಜಿಯಾಂಗ್, ಬೊಜ್ಜು ಕಡಿಮೆ ಮಾಡಲು ಮತ್ತು ಆಹಾರ ಪದ್ಧತಿಯನ್ನು ನಿಯಂತ್ರಿಸಲು ಬಹಳ ಕಷ್ಟಪಟ್ಟಿದ್ದಾರೆ. ಲಿ ಜಿಯಾಂಗ್ 2 ತಿಂಗಳ ಹಿಂದೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಅವರ ನಡುವೆ ಎಲ್ಲವೂ ಚೆನ್ನಾಗಿತ್ತು. ಎರಡು ಮನೆಯವರು ಮದುವೆ ಮಾಡಬೇಕು ಎಂದು ಪರಸ್ಪರ ಭೇಟಿ ಮಾಡಲು ತಯಾರಿ ನಡೆಸಿದ್ದರು ಎಂದು ಲಿ ಜಿಯಾಂಗ್ ಅವರ ಅಣ್ಣ ಹೇಳಿದ್ದಾರೆ. ಈ ವೇಳೆ ಲಿ ಜಿಯಾಂಗ್ ತನ್ನ ಹುಡುಗಿಯ ಮನೆಯವರನ್ನು ಭೇಟಿ ಮಾಡುವ ಮುನ್ನ ತೂಕವನ್ನು ಇಳಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದರು, ಅದಕ್ಕಾಗಿ ಈ ರೀತಿಯ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗಾಗಿ ಲಿ ಜಿಯಾಂಗ್ ಸೆಪ್ಟೆಂಬರ್ 30ರಂದು ಝೆಂಗ್‌ಝೌನಲ್ಲಿರುವ ಪೀಪಲ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯನ್ನು ಅಕ್ಟೋಬರ್ 2 ರಂದು ನಡೆಸಲಾಯಿತು, ಜತೆಗೆ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಮರುದಿನ ಜನರಲ್ ವಾರ್ಡ್‌ಗೆ ಸ್ಥಳಾಂತರಿಸುವ ಮುನ್ನ ಅವರನ್ನು ತೀವ್ರ ನಿಗಾ ಘಟಕ (ICU)ಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ಸ್ವಲ್ಪ ಚೇತರಿಸಿಕೊಂಡ ಅವರನ್ನು ಸಾಮಾನ್ಯ ಸಾಮಾನ್ಯ ವಾರ್ಡ್‌ಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಕ್ಟೋಬರ್ 4ರಂದು ಅವರ ಸ್ಥಿತಿ ಇನ್ನು ಗಂಭೀರವಾಗಿತ್ತು. ಬೆಳಿಗ್ಗೆ 6.40ರ ವೇಳೆಗೆ ಮತ್ತೆ ತುರ್ತು ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರನ್ನು ಉಳಿಸಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡಿದ್ದಾರೆ. ಅದರ ಹೊರತಾಗಿಯೂ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ: ತಿಂಗಳಿಗೆ 7 ಲಕ್ಷ ರೂ. ಸಂಬಳದ ಕೆಲಸ ಬಿಟ್ಟ ಬೆಂಗಳೂರಿನ ಗೂಗಲ್ ಉದ್ಯೋಗಿ, ಇಲ್ಲಿದೆ ಕಾರಣ
ವೈದ್ಯರ ಮೇಲೆ ಆರೋಪ:
ಲಿ ಜಿಯಾಂಗ್ ಅವರ ಕುಟುಂಬ ಆಸ್ಪತ್ರೆ ವೈದ್ಯರ ಮೇಲೆ ಆರೋಪ ಮಾಡಿದೆ. ಆಸ್ಪತ್ರೆಯು ಶಸ್ತ್ರಚಿಕಿತ್ಸೆಗೆ ಅನುಮೋದನೆ ನೀಡುವ ಮೊದಲು ಅವರ ಒಟ್ಟಾರೆ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಲ್ಲ. ಅವರಿಗೆ ಯಾವ ತೊಂದರೆ ಇದೆ ಎಂಬುದನ್ನು ಮೊದಲು ಪತ್ತೆ ಮಾಡಿ ಅದಕ್ಕೆ ಚಿಕಿತ್ಸೆ ನೀಡಬೇಕಿತ್ತು ಎಂದು ಹೇಳಿದ್ದಾರೆ. ಆದರೆ ಕುಟುಂಬದ ಈ ಆರೋಪವನ್ನು ವೈದ್ಯರು ನಿರಾಕರಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Thu, 13 November 25




