Video: ಮಹಿಳೆಗೆ ಆಹಾರ ತಂದುಕೊಟ್ಟು ಹಸಿವು ನೀಗಿಸಿದ ಬೆಂಗಳೂರಿನ ಉಬರ್ ಚಾಲಕ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಹೃದಯ ಗೆಲ್ಲುತ್ತದೆ. ಇದೀಗ ಬೆಂಗಳೂರಿನ ಉಬರ್ ಚಾಲಕನೊಬ್ಬನು ತಮ್ಮ ಕೆಲಸದ ನಡುವೆ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮುಂಬೈ ಮಹಿಳೆಗೆ ಸ್ಯಾಂಡ್‌ವಿಚ್ ತಂದು ಕೊಟ್ಟು ಹಸಿವು ನೀಗಿಸಿದ್ದಾನೆ. ಈ ಮಹಿಳೆಯೂ ಬೆಂಗಳೂರಿನ ಉಬರ್ ಚಾಲಕನ ಒಳ್ಳೆತನವನ್ನು ಹಾಡಿ ಹೊಗಳಿದ್ದಾಳೆ.

ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಬೇರೆಯವರಿಗೆ ಸಹಾಯ ಮಾಡಲು ಹಿಂದೇಟು ಹಾಕುವವರೇ ಹೆಚ್ಚು. ಹಸಿವು ಎಂದಾಗ ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡುವ ಗುಣ ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ಬೆಂಗಳೂರಿನ (Bengaluru) ಉಬರ್ ಚಾಲಕನೊಬ್ಬ ಮುಂಬೈ ಮಹಿಳೆಗೆ ಆಹಾರ ತಂದು ಕೊಟ್ಟು ಆಕೆಯ ಹಸಿವನ್ನು ನೀಗಿಸಿದ್ದಾನೆ. ಈ ವ್ಯಕ್ತಿಯ ಒಳ್ಳೆತನಕ್ಕೆ ಮಹಿಳೆಯೂ ಕೃತಜ್ಞತೆ ಸಲ್ಲಿಸಿದ್ದಾಳೆ. ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.
ಉಬರ್ ಚಾಲಕನಿಗೆ ಕೃತಜ್ಞತೆ ಸಲ್ಲಿಸಿದ ಮುಂಬೈ ಮಹಿಳೆ
ಮುಂಬೈ ಮೂಲದ ಮಹಿಳೆ ಯೋಗಿತಾ ರಾಥೋಡ್ (yogithaarathore) ಇನ್ಸ್ಟಾಗ್ರಾಮ್ ನಲ್ಲಿ ಘಟನೆಯನ್ನು ವಿವರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಬೆಂಗಳೂರಿನಲ್ಲಿ ನಡೆದದ್ದು ನಾನು ಎಂದಿಗೂ ಮರೆಯಲಾಗದಂತಹ ಸುಂದರ ಘಟನೆ ಎಂದು ಹೇಳುವ ಮೂಲಕ ಅವರು ವೀಡಿಯೊವನ್ನು ಪ್ರಾರಂಭವಾಗುತ್ತದೆ. ತನಗೆ ಹಸಿವಿನಿಂದಾಗಿ ಹೊಟ್ಟೆ ನೋವು ಕಾಣಿಸಿಕೊಂಡಿತು ಎಂದು ವಿವರಿಸುವುದನ್ನು ನೋಡಬಹುದು.
ಕ್ಯಾಬ್‌ನಲ್ಲಿ ತನ್ನ ಸ್ನೇಹಿತೆಯೊಂದಿಗೆ ಫೋನ್ ನಲ್ಲಿ ಮಾತನಾಡುತ್ತಾ, ನನಗೆ ತುಂಬಾ ಹಸಿವಾಗಿದೆ, ನನ್ನ ವಿಮಾನ ಕೂಡ ಬೆಳಗಿನ ಜಾವ 2 ಗಂಟೆಗೆ. ಬೆಂಗಳೂರು ವಿಮಾನ ನಿಲ್ದಾಣ ಎಷ್ಟು ದೂರದಲ್ಲಿದೆ ಎಂದು ನಿನಗೆ ತಿಳಿದಿದೆ ಎಂದು ಹೇಳಿದೆನು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ಮಹಿಳೆಯ ಸಂಕಟವನ್ನು ಅರಿತುಕೊಂಡ ಕ್ಯಾಬ್ ಚಾಲಕ ಕಾರಿನಿಂದ ಇಳಿದು ಸ್ಯಾಂಡ್‌ವಿಚ್‌ನೊಂದಿಗೆ ಹಿಂತಿರುಗಿದ್ದಾನೆ. ಈ ಚಾಲಕನು, ನನ್ನ ಸಹೋದರಿ ಹಸಿದಿದ್ದರೆ, ನನಗೂ ಈ ರೀತಿಯದ್ದೇ ಭಾವನೆ ಬರುತ್ತಿತ್ತು ಎಂದು ಹೇಳುತ್ತಿರುವುದು ನೀವಿಲ್ಲಿ ಕಾಣಬಹುದು. ನೀವು ಕಾಲ್‌ನಲ್ಲಿ ಸಸ್ಯಾಹಾರ ಬೇಕು ಎಂದು ಹೇಳಿದ್ದೀರಿ. ಹಾಗಾಗಿ ವೆಜೀಟೇರಿಯನ್ ಫುಡ್ ಹುಡುಕುತ್ತಿದ್ದೆ ಎಂದು ಹೇಳಿದ್ದಾನೆ. ಆ ಬಳಿಕ ರಾಥೋಡ್ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿ, ನಾನು ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಎಂದು ಹೇಳುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ:ಪ್ರಯಾಣಿಕ ಮರೆತುಹೋದ ಹಣದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ
ಈ ವಿಡಿಯೋ ಇಪ್ಪತ್ತಾನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಒಳ್ಳೆತನ ಹೊಂದಿರುವ ಈ ಸಹೋದರ ಜಗತ್ತಿನಲ್ಲಿ ಎಲ್ಲವನ್ನೂ ಪಡೆಯುತ್ತಾನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಮತ್ತೊಬ್ಬರು ಒಳ್ಳೆಯವರಿಗೆ ಈಗ ಕಾಲ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ, ಮುಖ ತೋರಿಸಿದ್ರೆ ಈ ಉಬರ್ ಚಾಲಕ ಫೇಮಸ್ ಆಗ್ತಾ ಇದ್ರು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Fri, 21 November 25




