ಬೆಂಗಳೂರು: ಮಹಿಳೆಯೊಬ್ಬರು ಕಟ್ಟದಿಂದ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ (Bengaluru) ಗುರುವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ನಡೆದಿದೆ. ಇದೊಂದು ಆತ್ಮಹತ್ಯೆ ಆಗಿರಬಹುದು ಎಂದು ಶಂಕಿಸಲಾಗಿದೆ. ನಗರದ ಯುನಿಟಿ ಕಟ್ಟಡದಿಂದ ಮಹಿಳೆ ಬಿದ್ದಿದ್ದಾರೆ. ಅವರು ಬಿದ್ದಿರುವ ರೀತಿ ನೋಡಿದರೆ ಆತ್ಮಹತ್ಯೆಯಂತೆ ಕಾಣಿಸುತ್ತಿದೆ ಎಂದು ಪ್ರತ್ಯಕ್ಷದರ್ಶಿ ಪ್ರೇಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೃತಪಟ್ಟಿರುವ ಮಹಿಳೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಡಿವಿಷನಲ್ ಆಫೀಸ್ನ ಮ್ಯಾನೇಜರ್ ಅಪರ್ಣಕುಮಾರಿ ಎಂದು ಗುರುತಿಸಲಾಗಿದೆ.
ಮಹಿಳೆ ಕಿಟಕಿಯಿಂದ ಬಟ್ಟೆ ಹಾಕಿ ಕೆಳಗೆ ಇದ್ದರು. ಆಗ ಓರ್ವ ವ್ಯಕ್ತಿ ಮಹಿಳೆಯ ಕೈಹಿಡಿದುಕೊಂಡಿದ್ದರು. ವ್ಯಕ್ತಿಯ ಕೈಜಾರಿ ಕೆಳಗೆಬಿದ್ದು ಮಹಿಳೆ ಮೃತಪಟ್ಟಿದ್ದಾರೆ ಎಂದು ಪ್ರೇಮ್ ಹೇಳಿದ್ದಾರೆ.
ಮಹಿಳೆ ಕಟ್ಟಡದಿಂದ ಕೆಳಗೆ ಬಿದ್ದಾಗ ಉಸಿರಾಡುತ್ತಿದ್ದರು. ಘಟನಾ ಸ್ಥಳಕ್ಕೆ ಌಂಬುಲೆನ್ಸ್ ಬರುವುದು ತಡವಾಯಿತು ಎಂದು ಪ್ರೇಮ್ ಹೇಳಿದ್ದಾರೆ.
ಇದನ್ನೂ ಓದಿ: Bengaluru Karaga Mahotsava: ಬೆಂಗಳೂರಿನ ಐತಿಹಾತಿಕ ಕರಗ ಮಹೋತ್ಸವದ ವೇಳೆ ಅಗ್ನಿ ಅವಘಡ, ಬೈಕ್ಗಳು ಭಸ್ಮ
ಕಿಟಕಿ ತೆರೆದು ಬಟ್ಟೆ ಹಾಕಿ ಹೊರ ಹಾರಲು ಅಪರ್ಣಕುಮಾರಿ ಯತ್ನಿಸಿದ್ದಾರೆ. ಅಷ್ಟರಲ್ಲಿ ಅದನ್ನು ಕಂಡ ಆಫಿಸ್ ಸಿಬ್ಬಂದಿಯೊಬ್ಬರು ತಡೆಯಲು ಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾಗಿದೆ ಎಂದು ಇತರ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಎಸ್ಜೆ ಪಾರ್ಕ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮಹಿಳೆಯ ಸಾವಿಗೆ ನಿಖರ ಕಾರಣ ಏನಿರಬಹುದು ಎಂಬ ಕುರಿತು ಅನ್ವೇಷಣೆ ನಡೆಸುತ್ತಿದ್ದಾರೆ. ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಕಚೇರಿಯಲ್ಲಿದ್ದ ಡೈರಿ ಹಾಗೂ ಮಹಿಳೆಯ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಅಪರ್ಣಕುಮಾರಿ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Thu, 6 April 23