ಬೆಂಗಳೂರು, ಮಾ.29: ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ (Bengaluru Air Quality) ಸುಧಾರಿಸಿದೆ ಎಂದು ವಿಶ್ವ ವಾಯು ಗುಣಮಟ್ಟ ವರದಿಯ (World Air Quality Report) ಅಂಕಿ ಅಂಶಗಳು ಬಹಿರಂಗಪಡಿಸಿವೆ. 2023 ರಲ್ಲಿ, ಬೆಂಗಳೂರಿನ ಸರಾಸರಿ PM 2.5 ಮೌಲ್ಯವು ಪ್ರತಿ ಕ್ಯಾಬಿಕ್ ಮೀಟರ್ಗೆ 28.6 ಮೈಕ್ರೋಗ್ರಾಂಗಳಷ್ಟಾಗಿದೆ. 2022 ರಲ್ಲಿ ಪ್ರತಿ ಕ್ಯಾಬಿಕ್ ಮೀಟರ್ 31.5 ಮೈಕ್ರೋಗ್ರಾಂಗಳಷ್ಟು ದಾಖಲಾಗಿತ್ತು. ಇದು 2018 ರಿಂದ ನಗರವು ಕಂಡ ಅತ್ಯುತ್ತಮ ಗಾಳಿಯ ಗುಣಮಟ್ಟವಾಗಿದೆ.
ಜಗತ್ತಿನಾದ್ಯಂತ ಮೌಲ್ಯಮಾಪನ ಮಾಡಲಾದ 7,812 ನಗರಗಳಲ್ಲಿ ಬೆಂಗಳೂರು 673 ನೇ ಅತ್ಯಂತ ಕಲುಷಿತ ನಗರವಾಗಿದೆ. ಆದಾಗ್ಯೂ, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತಾ ಸೇರಿದಂತೆ ದೇಶದ ಇತರ ಮೆಟ್ರೋಪಾಲಿಟನ್ ನಗರಗಳಿಗಿಂತ ಬೆಂಗಳೂರು ಕಡಿಮೆ ಮಾಲಿನ್ಯವನ್ನು ಹೊಂದಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಇದನ್ನೂ ಓದಿ: Karnataka Weather Update: ಮಾರ್ಚ್ 28ರ ಬೆಂಗಳೂರು ತಾಪಮಾನ 7 ವರ್ಷಗಳಲ್ಲೇ ಗರಿಷ್ಠ
ಆದಾಗ್ಯೂ, ಹವಾಮಾನ ಬದಲಾವಣೆಗಳು ಸುಧಾರಿತ ಗಾಳಿಯ ಗುಣಮಟ್ಟಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುತ್ತಿದೆ ಎಂದು ನಾವು ಭ್ರಮೆಯಲ್ಲಿರಬಾರದು. ಹವಾಮಾನದ ಅಂಶಗಳ ಕಾರಣದಿಂದಾಗಿ ಸುಧಾರಣೆ ದಾಖಲಾಗಿದೆ. ಇಎಲ್ ನಿನೊ ಪರಿಣಾಮವು ಕಣಗಳನ್ನು ಕರಾವಳಿಯ ಕಡೆಗೆ ಹರಡುತ್ತದೆ ಮತ್ತು ಇದು ಬೆಂಗಳೂರಿನ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ (ಎನ್‌ಐಎಎಸ್) ಚೇರ್ ಪ್ರೊಫೆಸರ್ ಪ್ರೊಫೆಸರ್ ಗುಫ್ರಾನ್ ಬೇಗ್ ಹೇಳಿದ್ದಾರೆ.
ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ವಾಹನಗಳ ಹೊರಸೂಸುವಿಕೆಯು ವಾಯುಮಾಲಿನ್ಯಕ್ಕೆ ಪ್ರಮುಖ ಕೊಡುಗೆಯಾಗಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಪ್ರೊಫೆಸರ್ ಟಿ.ವಿ.ರಾಮಚಂದ್ರ ಹೇಳಿದ್ದಾರೆ. ನಮ್ಮ ಅಧ್ಯಯನದ ಪ್ರಕಾರ, ಸುಮಾರು 70% ಬೆಂಗಳೂರಿನ ನಾಗರಿಕರು ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ಪರಿಸ್ಥಿತಿ ಹೀಗಿರುವಾಗ, ಗಾಳಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆಯನ್ನು ನಾವು ನಿರೀಕ್ಷಿಸಲಾಗುವುದಿಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ