AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನ ಪೆಟ್ರೋಲ್​, ಡೀಸೆಲ್​ ದರ: ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ಗೆ 99.84 ರೂ.

Petrol and Diesel Price Today: ಪೆಟ್ರೋಲ್​ ಮತ್ತು ಡಿಸೇಲ್​ ದರ ಪ್ರತಿದಿನ ಪರಿಷ್ಕರಣೆಯಾಗುತ್ತಿರುತ್ತದೆ. ಪೆಟ್ರೋಲ್​ ಮತ್ತು ಡೀಸೆಲ್​ ದರ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುತ್ತದೆ. ಹಾಗಾದರೆ 2024 ಮಾರ್ಚ್​ 29 ರಂದು ದೇಶದ ಪ್ರಮುಖ ರಾಜ್ಯಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ ಎಷ್ಟಿದೆ?... ಇಲ್ಲಿದೆ ಮಾಹಿತಿ...

ಇಂದಿನ ಪೆಟ್ರೋಲ್​, ಡೀಸೆಲ್​ ದರ: ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ಗೆ 99.84 ರೂ.
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on:Mar 30, 2024 | 6:49 AM

Share

ನವದೆಹಲಿ, ಮಾರ್ಚ್​ 29: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ (Petrol and Diesel Price) ಏರಿಳಿತದಿಂದ ಸರಕು-ಸಾಗಾಣಿಕೆಯ ಬೆಲೆಗಳು ಕೂಡ ಏರಿಳಿತ ಕಾಣುತ್ತವೆ. 2017ರ ಜೂನ್​ನಲ್ಲಿ ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗೆ ದೈನಂದಿನ ಬೆಲೆ ಪರಿಷ್ಕರಣೆ ಕಾರ್ಯವಿಧಾನವನ್ನು ಜಾರಿಗೆ ತಂದಿತು. ಅಂದಿನಿಂದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಬೆಳಿಗ್ಗೆ ದರಗಳನ್ನು ಪರಿಷ್ಕರಿಸುತ್ತಿವೆ. ಇದಕ್ಕೂ ಮುನ್ನ ಇಂಧನ ಬೆಲೆಯನ್ನು ಹದಿನೈದು ದಿನಗಳಿಗೊಮ್ಮೆ ಪರಿಷ್ಕರಿಸಲಾಗಿತ್ತು. ಹಾಗಾದರೆ ಇಂದು (ಶುಕ್ರವಾರ ಮಾರ್ಚ್​ 29) ರ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಇಲ್ಲಿದೆ…

ಮಾರ್ಚ್ 29, 2024 ರಂದು, ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹94.72 ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ₹87.62. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹104.21 ಮತ್ತು ಡೀಸೆಲ್ ಬೆಲೆ ₹92.15. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ₹99.84 ಹಾಗೂ ಡೀಸೆಲ್ ಲೀಟರ್ ಗೆ ₹85.93 ಇದೆ.

ಮಾರ್ಚ್​ 29ರ ಪೆಟ್ರೋಲ್​ ಮತ್ತು ಡೀಸೆಲ್​ ದರ
ನಗರ ಪೆಟ್ರೋಲ್​ (ಲೀ) ಡೀಸೆಲ್ (ಲೀ)​​
ಅಹಮದಾಬಾದ್ 94.28 87,55​
ಭೋಪಾಲ್ 106.29 91.84
ಚೆನ್ನೈ 100.75 92.34
ಹೈದರಾಬಾದ್ 107.41 95.65
ಜಮ್ಮು 95.43 81.28
ಕೊಲ್ಕತ್ತಾ 103.94 90.76
ಲಖನೌ 94.65 87.76
ನಾಗಪುರ 103.98 90.54
ನೋಯ್ಡಾ 94.65 87.75
ಪುಣೆ 103.88 90.41

ಮಾರ್ಚ್ 29, ಬುಧವಾರ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ತೈಲ ಮಾರುಕಟ್ಟೆ ಮೇ 2022 ರಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ. ಮತ್ತು ಡೀಸೆಲ್‌ಗೆ 6 ರೂ. ಕಡಿತಗೊಳಿಸಿದಾಗಿನಿಂದ ದೇಶಾದ್ಯಂತ ಇಂಧನ ಬೆಲೆಗಳಲ್ಲಿ ಏರಿಳಿತ ಕಂಡುಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಮತ್ತು ಸರಕು ಸಾಗಣೆ ಶುಲ್ಕಗಳು, ಸ್ಥಳೀಯ ತೆರಿಗೆಗಳು ಮತ್ತು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ನಂತಹ ವಿವಿಧ ಅಂಶಗಳನ್ನು ಬದಲಾಗುತ್ತವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:14 am, Fri, 29 March 24