ಫಿನಿಕ್ಸ್ ಮಾಲ್ ಆಫ್ ಏಷ್ಯಾ ಪ್ರವೇಶ ನಿರ್ಬಂಧ ಪ್ರಶ್ನಿಸಿ ರಿಟ್ ಅರ್ಜಿ: ಜ.30ಕ್ಕೆ ವಿಚಾರಣೆ ಮುಂದೂಡಿಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 05, 2024 | 8:25 PM

ಫಿನಿಕ್ಸ್ ಮಾಲ್ ಆಫ್ ಏಷ್ಯಾ(Phoenix Mall Of Asia)ಗೆ ಪ್ರವೇಶ ನಿರ್ಬಂಧಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸ್ಪಾರ್ಕಲ್ ಒನ್ ಮಾಲ್ ಡೆವಲಪರ್ಸ್ ಲಿಮಿಟೆಡ್ ಸಲ್ಲಿಸಿದ್ದ​ ರಿಟ್ ಅರ್ಜಿ ವಿಚಾರಣೆ ಮಾಡಲಾಗಿದೆ. ಈ ವೇಳೆ ಸಮಸ್ಯೆ ಬಗೆಹರಿಸಲು ಕೈಗೊಂಡ ಕ್ರಮದ ಮಾಹಿತಿ ಹೈಕೋರ್ಟ್(High Court)​ಗೆ ವರದಿ ಸಲ್ಲಿಕೆ ಮಾಡಲಾಗಿದ್ದು, ಪರಿಹಾರ ಕ್ರಮದ ಜಾರಿ ಬಗ್ಗೆ ಜ.30 ಕ್ಕೆ ತಿಳಿಸಲು ಸೂಚಿಸಿ ಹೈಕೋರ್ಟ್​ ವಿಚಾರಣೆಯನ್ನು ಮುಂದೂಡಿದೆ.

ಫಿನಿಕ್ಸ್ ಮಾಲ್ ಆಫ್ ಏಷ್ಯಾ ಪ್ರವೇಶ ನಿರ್ಬಂಧ ಪ್ರಶ್ನಿಸಿ ರಿಟ್ ಅರ್ಜಿ: ಜ.30ಕ್ಕೆ ವಿಚಾರಣೆ ಮುಂದೂಡಿಕೆ
ಮಾಲ್ ಆಫ್ ಏಷ್ಯಾ ಪ್ರವೇಶ ನಿರ್ಬಂಧ ಪ್ರಶ್ನಿಸಿ ರಿಟ್ ಅರ್ಜಿವಿಚಾರಣೆ ಮುಂದೂಡಿಕೆ
Follow us on

ಬೆಂಗಳೂರು, ಜ.05: ಫಿನಿಕ್ಸ್ ಮಾಲ್ ಆಫ್ ಏಷ್ಯಾ(Phoenix Mall Of Asia)ಗೆ ಪ್ರವೇಶ ನಿರ್ಬಂಧಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸ್ಪಾರ್ಕಲ್ ಒನ್ ಮಾಲ್ ಡೆವಲಪರ್ಸ್ ಲಿಮಿಟೆಡ್ ಸಲ್ಲಿಸಿದ್ದ​ ರಿಟ್ ಅರ್ಜಿ ವಿಚಾರಣೆ ಮಾಡಲಾಗಿದೆ. ಈ ವೇಳೆ ಸಮಸ್ಯೆ ಬಗೆಹರಿಸಲು ಕೈಗೊಂಡ ಕ್ರಮದ ಮಾಹಿತಿ ಹೈಕೋರ್ಟ್(High Court)​ಗೆ ವರದಿ ಸಲ್ಲಿಕೆ ಮಾಡಲಾಗಿದ್ದು, ಅದರಲ್ಲಿ ದ್ವಿಚಕ್ರ ವಾಹನಗಳ ಪ್ರವೇಶ ಶುಲ್ಕ ಕಡಿತ, ಕ್ಯಾಬ್, ಆಟೋಗಳ ಪಿಕಪ್, ಡ್ರಾಪ್ ಪಾಯಿಂಟ್ ಬದಲಾವಣೆ. ಮಾಲ್​ನ ಉದ್ಯೋಗಿಗಳ ವಾಹನ ಪಾರ್ಕಿಂಗ್ ಗೆ ರಿಯಾಯಿತಿ ಪಾಸ್ ವ್ಯವಸ್ಥೆ. ವಾಹನಗಳ ಭದ್ರತಾ ಚೆಕಿಂಗ್ ಪಾಯಿಂಟ್ ಬದಲಾವಣೆ. ಪ್ರೀಪೇಯ್ಡ್ ಆಟೋ ನಿಲ್ದಾಣ ಸ್ಥಾಪಿಸಲು ಕ್ರಮ. ಇದಲ್ಲದೇ ಇನ್ನೂ ಹಲವು‌ ಕ್ರಮಗಳ ಮಾಹಿತಿಯನ್ನು ಹೈಕೋರ್ಟ್​ಗೆ ಸಲ್ಲಿಸಲಾಗಿದೆ. ಆದರೆ, ಪರಿಹಾರ ಕ್ರಮದ ಜಾರಿ ಬಗ್ಗೆ ಜ.30 ಕ್ಕೆ ತಿಳಿಸಲು ಸೂಚಿಸಿ ಹೈಕೋರ್ಟ್​ ವಿಚಾರಣೆಯನ್ನು ಮುಂದೂಡಿದೆ. ಇನ್ನು ಅಲ್ಲಿಯವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚಿಸಿದೆ.

ಮಾಲ್ ಆಫ್ ಏಷ್ಯಾದಿಂದ ಆಗುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟ ಸ್ಥಳೀಯರು

ಪಾರ್ಕಿಂಗ್ ವಿಚಾರವಾಗಿ ಮಾಲ್ ಆಫ್ ಏಷ್ಯಾ ಮತ್ತು ಬೆಂಗಳೂರುನಗರ ಪೊಲೀಸರ ನಡುವೆ ಜಟಾಪಟಿ ನಡೆಯುತ್ತಿದ್ದು, ಈ ನಡುವೆ ಮಲ್ಟಿಫ್ಲೆಕ್ಸ್​ಗೆ ಅನುಮತಿ ಕೋರಿ ಪೊಲೀಸರಿಗೆ ಮನವಿ ಮಾಡಿದೆ. ಆದರೆ, ಟ್ರಾಫಿಕ್ ಸಮಸ್ಯೆ ಸರಿಮಾಡಿದ ಬಳಿಕ ಅನುಮತಿ ನೀಡುತ್ತೇವೆ ಎಂದು ಪೊಲೀಸರು ಖಡಕ್ ಆಗಿ ಸೂಚಿಸಿದ್ದಾರೆ. ಈ ಜಟಾಪಟಿ ನಡುವೆ ಸ್ಥಳೀಯರು ಮಾಲ್​ನಿಂದ ಆಗುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದು, ‘ಅಪಾರ್ಟ್ಮೆಂಟ್​ನಲ್ಲಿ ನೆಲೆಸಿರುವ ನಮಗೆ ಮಾಲ್​ನಿಂದ ಹಲವು ತೊಂದರೆಗಳು ಆಗುತ್ತಿವೆ.

ಇದನ್ನೂ ಓದಿ:ಮಾಲ್ ಆಫ್ ಏಷ್ಯಾ-ಬೆಂಗಳೂರು ಪೊಲೀಸರ ನಡುವೆ ಜಟಾಪಟಿ; ಮಾಲ್​ನಿಂದ ಆಗುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟ ಸ್ಥಳೀಯರು

ಸಮಸ್ಯೆಗಳನ್ನು ಬಿಚ್ಚಿಟ್ಟ ಸ್ಥಳೀಯರು

ಮಾಲ್​ನಿಂದ ಬರುವ ಜನರೇಟರ್ ಶಬ್ದದಿಂದ ಮಾಲಿನ್ಯವಾಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ. ಮಾಲ್ ಲೈಟಿಂಗ್ಸ್ ಅಪಾರ್ಟ್ಮೆಂಟ್ ನಿವಾಸಿಗಳ ನಿದ್ದೆಗೂ ಸಮಸ್ಯೆ ಉಂಟುಮಾಡುತ್ತಿದೆ. ಬಳ್ಳಾರಿ ರಸ್ತೆ ಹಾಗೂ ಕೆಂಪೇಗೌಡ ಏರ್ಪೋರ್ಟ್ ರಸ್ತೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಮಾಲ್​ಗೆ ಬರುವವರು ರಸ್ತೆಯಲ್ಲೇ ಪಾರ್ಕಿಂಗ್ ಮಾಡಿ ತೆರಳುತ್ತಾರೆ. ಸರ್ವಿಸ್ ರಸ್ತೆ ಮೂಲಕ ಹೆಬ್ಬಾಳ, ಸಹಕಾರನಗರ, ಜಕ್ಕೂರು, ಅಮೃತಹಳ್ಳಿ ನಿವಾಸಿಗಳು ತೆರಳಲು ಕಷ್ಟವಾಗುತ್ತಿದೆ. ಆಸ್ಪತ್ರೆಗೆ ತೆರಳುವ ಹಿರಿಯ ನಾಗರೀಕರಿಗೆ, ರೋಗಿಗಳಿಗೆ ಅನಾನುಕೂಲವಾಗುತ್ತಿದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುನ ಓದಲು ಇಲ್ಲಿ ಕ್ಲಿಕ್ ಮಾಡಿ