ಇನ್​ಸ್ಟಾಗ್ರಾಮ್ ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಿನಲ್ಲಿ ಯುವತಿಯರಿಗೆ ಗಾಳ, ವಂಚನೆ; ದೂರು ದಾಖಲು

ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರು ಬಳಸಿ ಇನ್​ಸ್ಟಾಗ್ರಾಮ್​ನಲ್ಲಿ ಯುವತಿಯರನ್ನು ಸಂಪರ್ಕಿಸಿ ಹಣ ಪಡೆದು ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಡಿಜೆ ದೀಪು, ಬಸವೇಶ್ವರನಗರ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ತನ್ನ ಹೆಸರನ್ನ ದುರ್ಬಳಕೆ ಮಾಡಿ ಯುವತಿಯರಿಗೆ ಅಪರಿಚಿತ ವ್ಯಕ್ತಿ ವಂಚಿಸುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇನ್​ಸ್ಟಾಗ್ರಾಮ್ ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಿನಲ್ಲಿ ಯುವತಿಯರಿಗೆ ಗಾಳ, ವಂಚನೆ; ದೂರು ದಾಖಲು
ಇನ್​ಸ್ಟಾಗ್ರಾಮ್ ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಿನಲ್ಲಿ ಯುವತಿಯರಿಗೆ ವಂಚನೆ
Edited By: Rakesh Nayak Manchi

Updated on: Sep 07, 2023 | 11:33 AM

ಬೆಂಗಳೂರು, ಸೆ.7: ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರು ಬಳಸಿ ಇನ್​ಸ್ಟಾಗ್ರಾಮ್​ನಲ್ಲಿ (Instagram) ಯುವತಿಯರಿಗೆ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಹೆಸರನ್ನ ದುರ್ಬಳಕೆ ಮಾಡಿ ಯುವತಿಯರಿಗೆ ಅಪರಿಚಿತ ವ್ಯಕ್ತಿ ವಂಚಿಸುತ್ತಿದ್ದಾನೆ ಎಂದು ಆರೋಪಿಸಿ ಡಿಜೆ ದೀಪು ಅವರು ಬಸವೇಶ್ವರನಗರ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಬೆಂಗಳೂರು (Bengaluru) ನಗರದ ಪಶ್ವಿಮ ವಿಭಾಗದ ಸೆನ್ ಪೊಲೀಸರು ಎನ್​ಸಿಆರ್ ದಾಖಲಿಸಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್ ರೀಲ್ಸ್​​ನಲ್ಲಿ ತುಂಬಾ ವೈರಲ್ ಆಗುತ್ತಿರುವ ಡಿಜೆ ದೀಪು, ತನ್ನ ಅಕೌಂಟ್​ನಲ್ಲಿ ಹಾಕುವ ಪೊಟೋ, ವೀಡಿಯೋಗಳಿಗೆ ಭರ್ಜರಿ ಪ್ರತಿಕ್ರಿಯೆಗಳು ಬರುತ್ತಿವೆ. ಈ ನಡುವೆ ದೀಪು ಹೆಸರಿನಲ್ಲಿ ನಕಲಿ ತೆರೆದು ಯುವತಿಯರಿಗೆ ಗಾಳ ಹಾಕಿ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಬ್ಬ ವಿಚಿತ್ರ ಪ್ರೇಮ್​ ಕಹಾನಿ: ಬಿಟ್ಟೋದ ಪ್ರಿಯತಮೆ ಜತೆ ಮದ್ವೆ ಮಾಡಿಸಿ ಎಂದು ಪೊಲೀಸರ ಬೆನ್ನುಬಿದ್ದ ಲವರ್ ಬಾಯ್

ನಕಲಿ ಖಾತೆಯಿಂದ ಯುವತಿಯರಿಗೆ ಮೆಸೆಜ್, ಕಾಲ್ ಮಾಡಲಾಗುತ್ತಿತ್ತು. ಇನ್ನು ನೋಡಿದ ಒಂದಷ್ಟು ಯುವತಿಯರು ಡಿಜೆ ದೀಪು ಮೆಸೇಜ್ ಮಾಡುತ್ತಿದ್ದಾನೆ, ಮಿಸ್ ಕಾಲ್ ಕೊಟ್ಟಿದ್ದಾನೆಂದು ಭಾವಿಸುತ್ತಿದ್ದರು. ಆದರೆ, ವಂಚಕ ನೇರವಾಗಿ ಭೇಟಿಯಾಗದೇ ಇನ್​ಸ್ಟಾಗ್ರಾಮ್​ನಲ್ಲಿ ಮೆಸೆಜ್ ಮಾಡುತ್ತಾ ಯುವತಿಯರೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಿದ್ದನು.

ಹಲವು ಯುವತಿಯರಿಂದ ಮೀಟ್ ಆಗುತ್ತೇನೆ, ನಿನ್ನನ್ನು ಲವ್ ಮಾಡುತ್ತೇನೆ ಎಂದು ಹಣ ಕೇಳುತ್ತಿದ್ದನು. ವಂಚನಕ ಮಾತು ನಂಬಿದ ಕೆಲವು ಯುವತಿಯರು ಹಣ ಕೊಟ್ಟು ವಂಚನೆ ಜಾಲಕ್ಕೆ ಬಿದ್ದಿದ್ದಾರೆ. ಸದ್ಯ ಬಸವೇಶ್ವರನಗರ ಸೈಬರ್ ಕ್ರೈಂ ಠಾಣೆಗೆ ಡಿಜೆ ದೀಪು ದೂರು ನೀಡಿದ್ದಾರೆ. ತನ್ನ ಹೆಸರನ್ನ ದುರ್ಬಳಕೆ ಮಾಡಿ ಯುವತಿಯರಿಗೆ ಅಪರಿಚಿತ ವ್ಯಕ್ತಿ ವಂಚಿಸುತ್ತಿದ್ದಾನೆಂದು ದೂರಿನಲ್ಲಿ ಆರೋಪಿಸಿದ್ದಾರೆ. ದೂರಿನ ಅನ್ವಯ ಪಶ್ವಿಮ ವಿಭಾಗದ ಸೆನ್ ಪೊಲೀಸರು, ಎನ್​ಸಿಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಂಚನ ಸುಳಿವು ಪತ್ತೆ

ಕೃತ್ಯದ ಬಗ್ಗೆ ಮಾಹಿತಿ ನೀಡಿದ ಡಿಜೆ ದೀಪು,  ಪ್ರದೀಪ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಪದೇ ಪದೇ ಈ ರೀತಿ ನನ್ನ ಹೆಸರು ಬಳಸಿ ವಂಚನೆ ಮಾಡುತಿದ್ದಾನೆ. ನನ್ನ ಫೋಟೊ ಬಳಸುವುದರಿಂ ನಾನು ಎಂದು ಕೊಂಡು ಜನರು ಮೊಸ ಹೊಗುತಿದ್ದಾರೆ.‌ ಇದರಿಂದ ನಾನು ತುಂಬಾ ನೊಂದಿದ್ದೇನೆ. ಈ ಹಿಂದೆ ಇದೇ ವಿಚಾರ ತಿಳಿದು ಆತನ ಮನೆಗೆ ತೆರಳಿದ್ದೆ. ಆಗ ಆತನ ಮನೆಯವರು ಕೇಳಿಕೊಂಡಿದಕ್ಕೆ ಸುಮ್ಮನಾಗಿದ್ದೆ‌.‌ ಆದರೆ ಆತ ಪದೆ ಪದೆ ತನ್ನ ಹೆಸರು ಬಳಸಿಕೊಂಡು ವಂಚನೆ ಮಾಡುತಿದ್ದಾನೆ. ಈ ಬಗ್ಗೆ ನಾನು ಹಲವು ಬಾರಿ ಠಾಣೆಗೆ ದೂರು ನೀಡಿದ್ದೆ. ಆದರೂ ಆತ ನನ್ನ ಹೆಸರು ಬಳಿಸಿ ವಂಚನೆ ಮಾಡುತ್ತಿರುವುದನ್ನು ಮುಂದುವರಿಸಿದ್ದಾನೆ ಎಂದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:47 am, Thu, 7 September 23

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us