AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲೊಂದು ವಿಚಿತ್ರ ಪ್ರೇಮ್​ ಕಹಾನಿ: ಬಿಟ್ಟೋದ ಪ್ರಿಯತಮೆ ಜತೆ ಮದ್ವೆ ಮಾಡಿಸಿ ಎಂದು ಪೊಲೀಸರ ಬೆನ್ನುಬಿದ್ದ ಲವರ್ ಬಾಯ್

ದುಡಿಯೋಕೆ ಅಂತ ಬಂದವನು ಎರಡು ವರ್ಷದ ಹಿಂದೆ ಪ್ರೀತಿಯಲ್ಲಿ ಬಿದ್ದಿದ್ದ. ಕೆಲಸ ಮಾಡುವಾಗ ಪರಿಚಯ ಆದಾಕೆಯ ಜೊತೆ ಪ್ರೀತಿ ಬೆಳೆಸಿಕೊಂಡಿದ್ದ. ಪ್ರೀತಿ ಮಾಡಲು ಶುರು ಮಾಡಿದ್ದೇ ಯುವತಿಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದನಂತೆ. ಬೆಳಿಗ್ಗೆ ತಿಂಡಿಯಿಂದ ಹಿಡಿದು, ಮಧ್ಯಾಹ್ನದ ಊಟ ರಾತ್ರಿ ಊಟಕ್ಕೂ ಈತನೇ ದುಡ್ಡು ಕೊಡುತಿದ್ದನಂತೆ. ಹೀಗೆ ಎರಡು ವರ್ಷ ಲಕ್ಷಾಂತರ ರೂಪಾಯಿ ಹಣ ಕೊಟ್ಟಿದ್ದಾನಂತೆ. ಆದ್ರೆ, ಇಬ್ಬರ ಮದುವೆ ಮಧ್ಯೆ ಜಾತಿ ಅಡ್ಡಬಂದಿದ್ದು, ಇದೇ ಕಾರಣ ನೀಡಿ ಯುವತಿ ತನ್ನ ಪ್ರಿಯತಮನಿಂದ ದೂರವಾಗಿದ್ದಾಳೆ, ಆದ್ರೆ, ಇದೀಗ ಲವರ್​ ಬಾಯ್​ ಆಕೆಯೊಂದಿಗೆ ಮದ್ವೆ ಮಾಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ.

ಬೆಂಗಳೂರಿನಲ್ಲೊಂದು ವಿಚಿತ್ರ ಪ್ರೇಮ್​ ಕಹಾನಿ: ಬಿಟ್ಟೋದ ಪ್ರಿಯತಮೆ ಜತೆ ಮದ್ವೆ ಮಾಡಿಸಿ ಎಂದು ಪೊಲೀಸರ ಬೆನ್ನುಬಿದ್ದ ಲವರ್ ಬಾಯ್
ಸಾಂದರ್ಭಿಕ ಚಿತ್ರ
Jagadisha B
| Edited By: |

Updated on:Sep 07, 2023 | 10:42 AM

Share

ಬೆಂಗಳೂರು, (ಸೆಪ್ಟೆಂಬರ್, 07): ಬಿಟ್ಟು ಹೋಗಿರುವ ಪ್ರಿಯಮೆ ಜೊತೆ ಮದುವೆ ಮಾಡಿಸಿ ಎಂದು ಪಾಗಲ್​ ಪ್ರೇಮಿಯೊಬ್ಬ ಪೊಲೀಸರ ಬೆನ್ನು ಬಿದ್ದಿದ್ದಾನೆ. ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಮಣಿಕಂಠ ಎನ್ನುವಾತ ಬೆಂಗಳೂರಿನ ಜಯನಗರದಲ್ಲಿರುವ ತಿಲಕ್ ನಗರ ಪೊಲೀಸ್ ಠಾಣೆಗೆ ಪ್ರತಿನಿತ್ಯ ಹೋಗಿ ತನ್ನ ಪ್ರಿಯತಮೆ ಜೊತೆ ಮದುವೆ ಮಾಡಿಸಿ ಎಂದು ಪೊಲೀಸರಿಗೆ ಪಟ್ಟು ಹಿಡಿದಿದ್ದಾನೆ. ಪ್ರೀತಿ ಪ್ರೇಮ ಅಂತ ಜೊತೆಯಾಗಿದ್ದವ ಜೊತೆಯಾಗಿ ನಿಂತು ನೋಡ್ಕೊಂಡೆ. ಮದುವೆ ಅಂದ ತಕ್ಷಣ ಜಾತಿ ನೆಪ ಹೇಳಿ ಬಿಟ್ಟುಗೋಗಿದ್ದಾಳೆ. ಇದೀಗ ಅವರ ಜೊತೆಯೇ ಮದುವೆ ಮಾಡಿಸಿ ಎಂದು ಲವರ್ ಬಾಯ್​ ಮಣಿಕಂಠ ಎನ್ನುವಾತ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.

ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಮಣಿಕಂಠ ಎನ್ನುವಾತ ಬೆಂಗಳೂರಿನ ಜಯನಗರದಲ್ಲಿರುವ ತಿಲಕ್ ನಗರ ಪೊಲೀಸ್ ಠಾಣೆಗೆ ಪ್ರತಿನಿತ್ಯ ತನ್ನ ಪ್ರಿಯತಮೆ ಜೊತೆ ಮದುವೆ ಮಾಡಿಸಿ ಎಂದು ಪೊಲೀಸರಿಗೆ ಪಟ್ಟು ಹಿಡಿದಿದ್ದಾನೆ.

ಇದನ್ನೂ ಓದಿ: ಲಿವಿಂಗ್‌ ಟುಗೆದರ್‌: ಶೀಲದ ಮೇಲೆ ಅನುಮಾನ ಪಟ್ಟ ಪ್ರಿಯತಮನ ಎದೆಗೆ ಚಾಕುವಿನಿಂದ ಇರಿದ ಪ್ರಿಯತಮೆ..!

ದುಡಿಯೋಕೆ ಅಂತ ಬಂದವನು ಎರಡು ವರ್ಷದ ಹಿಂದೆ ಪ್ರೀತಿಯಲ್ಲಿ ಬಿದ್ದಿದ್ದ. ಹೌದು.. ಕೆಲಸ ಮಾಡುವಾಗ ಪರಿಚಯ ಆದಾಕೆಯ ಜೊತೆ ಪ್ರೀತಿ ಬೆಳೆಸಿಕೊಂಡಿದ್ದ. ಪ್ರೀತಿ ಮಾಡಲು ಶುರು ಮಾಡಿದ್ದೇ ಯುವತಿಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದನಂತೆ. ಬೆಳಿಗ್ಗೆ ತಿಂಡಿಯಿಂದ ಹಿಡಿದು, ಮಧ್ಯಾಹ್ನದ ಊಟ ರಾತ್ರಿ ಊಟಕ್ಕೂ ಈತನೇ ದುಡ್ಡು ಕೊಡುತಿದ್ದನಂತೆ. ಹೀಗೆ ಎರಡು ವರ್ಷ ಲಕ್ಷಾಂತರ ರೂಪಾಯಿ ಹಣ ಕೊಟ್ಟಿದ್ದಾನಂತೆ. ಆದ್ರೆ, ಇಬ್ಬರ ಮದುವೆ ಮಧ್ಯೆ ಜಾತಿ ಅಡ್ಡಬಂದಿದ್ದು, ಇದೇ ಕಾರಣ ನೀಡಿ ಪ್ರಿಯತಮೆ ಮಣಿಕಂಠನನ್ನು ಬಿಟ್ಟು ದೂರವಾಗಿದ್ದಾಳೆ,

ಇದರಿಂದ ಮನನೊಂದಿಗೆ ಮಣಿಕಂಠ, ಆಕೆಯೊಂದಿಗೆ ಮದುವೆ ಮಾಡಿಸಿ ಎಂದು ಪೊಲಿಸರ ದುಂಬಾಲು ಬಿದ್ದಿದ್ದಾನೆ. ಈಗ ಯುವತಿಗೆ ಕೊಟ್ಟ ಹಣದ ಪೋನ್ ಪೇ ಹಿಸ್ಟರಿ ಜೆರಾಕ್ಸ್ ಪ್ರತಿ, ಯುವತಿ ಜೊತೆ ಮಾಡಿದ ಮೆಸೇಜ್ ಚಾಟಿಂಗ್ ಮಾಡಿರುವುದನ್ನು ಝರಾಕ್ಸ್ ಮಾಡಿಸಿ ಅದನ್ನು ಹಿಡಿದು ದಿನ ಪ್ರತಿ ಠಾಣೆಗೆ ಅಲೆದಾಡುತ್ತಿದ್ದಾನೆ. ಅಲ್ಲದೇ ದುಡ್ಡು ಹೋದರೂ ಪರವಾಗಿಲ್ಲ ನನಗೆ ನನ್ನ ಪ್ರೀತಿ ಬೇಕು ಎಂದು ಹಠ ಹಿಡಿದಿದ್ದು, ಯುವತಿ ಮನೆಯವರ ಜೊತೆ ಮಾತನಾಡಿ ಮದುವೆ ಮಾಡಿಸಿ ಎಂದು ಪೊಲೀಸರಿಗೆ ಅಂಗಲಾಚಿ ಬೇಡಿಕೊಂಡಿದ್ದಾನೆ.

ಕೊನೆಗೆ ವಿಧಿ ಇಲ್ಲದೇ ತಿಲಕ್​ ನಗರ ಪೊಲೀಸರು, ಮಣಿಕಂಠನ ದೂರನ್ನು ಸ್ವೀಕರಿಸಿ ಯುವತಿ ಮನೆಯವರನ್ನು ಸಂಪರ್ಕ ಮಾಡಿ ಯುವಕ ಪ್ರೀತಿ ಬಗ್ಗೆ ಹೇಳಿದ್ದಾರೆ. ಅಲ್ಲದೇ ಯುವತಿ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ. ಆ ವೇಳೆ ಯುವತಿಗೆ ಮದುವೆಯಾಗಲು ಇಷ್ಟವಿಲ್ಲದಿದರೂ ಮಣಿಕಂಠ ಆಕೆ ಹಿಂದೆ ಬಿದ್ದಿರುವುದು ಗೊತ್ತಾಗಿದೆ. ಹೀಗಾಗಿ ಪೊಲೀಸರು ಅಂತಿಮವಾಗಿ ತನಿಖೆ ಮುಕ್ತಾಯಗೊಳಿಸಿದ್ದಾರೆ. ಅಲ್ಲದೇ ಈ ಪ್ರಕರಣವು ಅಸಂಜ್ಞೆಯ ಅಪರಾಧವಾಗಿರುವುದರಿಂದ ಸಂಬಂಧ ಪಟ್ಟ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ತಿಲಕ್​ ನಗರ ಪೊಲೀಸ್ ಇನ್ಸ್​ಪೆಕ್ಟರ್​ ಹಿಂಬರಹ ಬರೆದುಕೊಟ್ಟಿದ್ದಾರೆ.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:40 am, Thu, 7 September 23