ಲಿವಿಂಗ್‌ ಟುಗೆದರ್‌: ಶೀಲದ ಮೇಲೆ ಅನುಮಾನ ಪಟ್ಟ ಪ್ರಿಯತಮನ ಎದೆಗೆ ಚಾಕುವಿನಿಂದ ಇರಿದ ಪ್ರಿಯತಮೆ..!

ಮದ್ವೆಯಾಗದೇ ಕೇರಳದ ಕಣ್ಣೂರಿನ ಯುವಕನೊಂದಿಗೆ ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್​ನಲ್ಲಿ ಇದ್ದ ಮಹಿಳೆ, ಇದೀಗ ತನ್ನ ಪ್ರಿಯಕರನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಬೆಳಗಾವಿ ಮೂಲದ ರೇಣುಕಾ ಎನ್ನುವ ಮಹಿಳೆ ಹಾಗೂ ಕಣ್ಣೂರಿನ ಜಾವೇದ್​ನ ಲಿವಿಂಗ್ ಟುಗೆದರ್​ ಪ್ರೇಮ್​ ಕಹಾನಿ ಇಲ್ಲಿದೆ.

ಲಿವಿಂಗ್‌ ಟುಗೆದರ್‌: ಶೀಲದ ಮೇಲೆ ಅನುಮಾನ ಪಟ್ಟ ಪ್ರಿಯತಮನ ಎದೆಗೆ ಚಾಕುವಿನಿಂದ ಇರಿದ ಪ್ರಿಯತಮೆ..!
ಕೊಲೆ ಮಾಡಿದ ರೇಣುಕಾ
Follow us
Jagadisha B
| Updated By: ರಮೇಶ್ ಬಿ. ಜವಳಗೇರಾ

Updated on:Sep 07, 2023 | 10:12 AM

ಬೆಂಗಳೂರು, (ಸೆಪ್ಟೆಂಬರ್ 08): ತನ್ನ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಕೋಪಗೊಂಡು ಮಹಿಳೆಯೋರ್ವಳು (Woman) ಪ್ರಿಯಕರನ (Lover) ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಈ ಘಟನೆ ಬೆಂಗಳೂರಿನ(Bengaluru) ಹುಳಿಮಾವು ಅಕ್ಷಯ್‌ ನಗರದ ಸರ್ವೀಸ್‌ ಅಪಾರ್ಟ್‌ಮೆಂಟ್​ನಲ್ಲಿ ನಡೆದಿದೆ. ಜಾವೇದ್‌ (28) ಕೊಲೆಯಾದ ಯುವಕ. ಕೇರಳದ ಕಣ್ಣೂರು ಮೂಲದ ಜಾವೇದ್‌ ಎನ್ನುವ ಯುವಕ ಹಾಗೂ ಬೆಳಗಾವಿ ಮೂಲದ ರೇಣುಕಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಲಿವಿಂಗ್​ ಟುಗೆದರ್​ನಲ್ಲಿದ್ದರು. ಆದ್ರೆ, ಇತ್ತೀಚೆಗೆ ಜಾವೇದ್‌, ರೇಣುಕಾ ಶೀಲದ ಮೇಲೆ ಅನುಮಾನಪಟ್ಟು ಪದೇ ಪದೇ ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ಮಂಗಳವಾರ (ಸೆಪ್ಟೆಂಬರ್ 05) ರಂದು ಇಬ್ಬರ ನಡುವೆ ಜಗಳವಾಗಿದ್ದು, ಆ ವೇಳೆ ರೇಣುಕಾ, ಜಾವೇದ್​ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ.

ಇನ್ನು ಇವರಿಬ್ಬರ ಗಲಾಟೆಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯ ನಿವಾಸಿಗಳು, ಕೂಡಲೇ ಗಾಯಾಳು ಜಾವೀದ್​ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಜಾವೇದ್‌ ಮೃತಪಟ್ಟಿದ್ದಾನೆ. ಬಳಿಕ ಅಪಾರ್ಚ್‌ಮೆಂಟ್‌ ಮಾಲಿಕ ಗಣೇಶ್‌ ದೂರು ಆಧರಿಸಿ ರೇಣುಕಾಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ತನ್ನ ಮಕ್ಕಳಿಗೆ ಕಿರುಕುಳ ನೀಡಿದ ಮಹಿಳೆ ಮತ್ತು ಲಿವ್-ಇನ್ ಸಂಗಾತಿಗೆ 5 ವರ್ಷ ಜೈಲು ಶಿಕ್ಷೆ

ಘಟನೆ ಹಿನ್ನೆಲೆ

ಮೊಬೈಲ್ ಸರ್ವಿಸ್ ಸೆಂಟರ್ ನಲ್ಲಿ ಕೆಲಸ ಮಾಡುತಿದ್ದ ಜಾವೇದ್, ಮಡಿವಾಳದ ಒಂದೇ ಏರಿಯಾದಲ್ಲಿ ವಾಸವಾಗಿದ್ದ ವೇಳೆ ರೇಣುಕಾಳ ಪರಿಚಯವಾಗಿದೆ. ಕಳೆದ ಮೂರು ವರ್ಷದಿಂದ ಇಬ್ಬರ ಪರಿಚಯವಾಗಿ ಬಳಿಕ ಅದು ಪ್ರೀತಿಗೆ ತಿರುಗಿತ್ತು. ಇದಾದ ಬಳಿಕ ಆಗಾಗ ಭೇಟಿ ಮಾಡುತಿದ್ದ ಇಬ್ಬರ ನಡುವೆ ಸಲುಗೆ ಬೆಳೆದಿತ್ತಿ. ಆ ನಂತರ ಇಬ್ಬರು ಲಿವಿಂಗ್​ ಟುಗೆದರ್​ನಲ್ಲಿ ಇದ್ದರು. ಹೀಗೆ  ಮೂರೂವರೆ ವರ್ಷಗಳಿಂದ ಜಾವೇದ್‌ ಹಾಗೂ  ರೇಣುಕಾ ಲಿವಿಂಗ್‌ ಟುಗೆದರ್‌ ರಿಲೇಷನ್‌ಶಿಪ್‌ನಲ್ಲಿದ್ದು, ಕೆಲ ದಿನಗಳಿಂದ ಅಷ್ಟೇ ಅಕ್ಷಯ್‌ ನಗರದ ಸರ್ವಿಸ್‌ ಅಪಾರ್ಚ್‌ಮೆಂಟ್‌ನಲ್ಲಿ ಈ ಇಬ್ಬರು ನೆಲೆಸಿದ್ದರು.

ಆದರೆ ಪ್ರತಿ ದಿನ ಜಾವೇದ್‌ ಹಾಗೂ ರೇಣುಕಾ ಮಧ್ಯೆ ಜಗಳವಾಗುತ್ತಿತ್ತು. ಶೀಲ ಶಂಕಿಸಿ ಜಾವೇದ್‌ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಅದರಂತೆಯೇ ಮಂಗಳವಾರ ಮಧ್ಯಾಹ್ನ 3ರ ಸುಮಾರಿಗೆ ಇಬ್ಬರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದುಬಂದಿದೆ. ಇನ್ನು ರೇಣುಕಾಳನ್ನು ಹುಳಿಮಾವು ಪೊಲೀಸರು ಬಂಧಿಸಿ ತನಿಖೆ ನಡೆಸಿದ ವೇಳೆ ಆಕೆಯ ಮತ್ತೊಂದು ಮುಖ ಬಯಲಿಗೆ ಬಂದಿದೆ.

ಮೊಬೈಲ್‌ ರಿಪೇರಿ ಮಾಡಿಕೊಂಡು ಜಾವೇದ್‌ ಜೀವನ ಸಾಗಿಸುತ್ತಿದ್ದ. ಇನ್ನು ಬಿಎ ಅರ್ಧಕ್ಕೆ ಬಿಟ್ಟಿರುವ ರೇಣುಕಾಗೆ ಮದುವೆಯಾಗಿಲ್ಲವಾದರೂ ಆಕೆಗೆ 6 ವರ್ಷದ ಮಗಳು ಕೂಡಾ ಇದ್ದಾಳೆ. ಇನ್ನು ಆಕೆಗೆ ಯಾವುದೇ ಉದ್ಯೋಗವಿರಲಿಲ್ಲ. ಪಬ್‌ಗಳಿಗೆ ಒಂಟಿಯಾಗಿ ಹೋಗುವ ಪುರುಷರ ಜತೆ ತಾತ್ಕಾಲಿಕ ಸಂಗಾತಿಯಾಗಿ ಆಕೆ ಹೋಗುತ್ತಿದ್ದಳು. ಈ ಮೂಲಕ ರೇಣುಕಾ ಹಣ ಗಳಿಸುತ್ತಿದ್ದಳು. ಅಲ್ಲದೇ ಐಷಾರಾಮಿ ಜೀವನಕ್ಕೆ ಆಕೆ ಮಾರು ಹೋಗಿದ್ದಳು. ಇದು ಜಾವೀದಬಿಗೆ ಗೊತ್ತಾಗಿ ಗಲಾಟೆ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಸದ್ಯ ರೇಣುಕಾಳನ್ನು ಪೊಲೀಸರು ಬಂಧಿಸಿದ್ದು, ಇನ್ನು ಆಕೆಯ ಮಗಳನ್ನು ಬಾಲ ಮಂದಿರಕ್ಕೆ ಬಿಡಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:25 am, Thu, 7 September 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ