ಇನ್ಸ್ಟಾಗ್ರಾಮ್ ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಿನಲ್ಲಿ ಯುವತಿಯರಿಗೆ ಗಾಳ, ವಂಚನೆ; ದೂರು ದಾಖಲು
ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರು ಬಳಸಿ ಇನ್ಸ್ಟಾಗ್ರಾಮ್ನಲ್ಲಿ ಯುವತಿಯರನ್ನು ಸಂಪರ್ಕಿಸಿ ಹಣ ಪಡೆದು ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಡಿಜೆ ದೀಪು, ಬಸವೇಶ್ವರನಗರ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ತನ್ನ ಹೆಸರನ್ನ ದುರ್ಬಳಕೆ ಮಾಡಿ ಯುವತಿಯರಿಗೆ ಅಪರಿಚಿತ ವ್ಯಕ್ತಿ ವಂಚಿಸುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಬೆಂಗಳೂರು, ಸೆ.7: ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರು ಬಳಸಿ ಇನ್ಸ್ಟಾಗ್ರಾಮ್ನಲ್ಲಿ (Instagram) ಯುವತಿಯರಿಗೆ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಹೆಸರನ್ನ ದುರ್ಬಳಕೆ ಮಾಡಿ ಯುವತಿಯರಿಗೆ ಅಪರಿಚಿತ ವ್ಯಕ್ತಿ ವಂಚಿಸುತ್ತಿದ್ದಾನೆ ಎಂದು ಆರೋಪಿಸಿ ಡಿಜೆ ದೀಪು ಅವರು ಬಸವೇಶ್ವರನಗರ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಬೆಂಗಳೂರು (Bengaluru) ನಗರದ ಪಶ್ವಿಮ ವಿಭಾಗದ ಸೆನ್ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ತುಂಬಾ ವೈರಲ್ ಆಗುತ್ತಿರುವ ಡಿಜೆ ದೀಪು, ತನ್ನ ಅಕೌಂಟ್ನಲ್ಲಿ ಹಾಕುವ ಪೊಟೋ, ವೀಡಿಯೋಗಳಿಗೆ ಭರ್ಜರಿ ಪ್ರತಿಕ್ರಿಯೆಗಳು ಬರುತ್ತಿವೆ. ಈ ನಡುವೆ ದೀಪು ಹೆಸರಿನಲ್ಲಿ ನಕಲಿ ತೆರೆದು ಯುವತಿಯರಿಗೆ ಗಾಳ ಹಾಕಿ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲೊಬ್ಬ ವಿಚಿತ್ರ ಪ್ರೇಮ್ ಕಹಾನಿ: ಬಿಟ್ಟೋದ ಪ್ರಿಯತಮೆ ಜತೆ ಮದ್ವೆ ಮಾಡಿಸಿ ಎಂದು ಪೊಲೀಸರ ಬೆನ್ನುಬಿದ್ದ ಲವರ್ ಬಾಯ್
ನಕಲಿ ಖಾತೆಯಿಂದ ಯುವತಿಯರಿಗೆ ಮೆಸೆಜ್, ಕಾಲ್ ಮಾಡಲಾಗುತ್ತಿತ್ತು. ಇನ್ನು ನೋಡಿದ ಒಂದಷ್ಟು ಯುವತಿಯರು ಡಿಜೆ ದೀಪು ಮೆಸೇಜ್ ಮಾಡುತ್ತಿದ್ದಾನೆ, ಮಿಸ್ ಕಾಲ್ ಕೊಟ್ಟಿದ್ದಾನೆಂದು ಭಾವಿಸುತ್ತಿದ್ದರು. ಆದರೆ, ವಂಚಕ ನೇರವಾಗಿ ಭೇಟಿಯಾಗದೇ ಇನ್ಸ್ಟಾಗ್ರಾಮ್ನಲ್ಲಿ ಮೆಸೆಜ್ ಮಾಡುತ್ತಾ ಯುವತಿಯರೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಿದ್ದನು.
ಹಲವು ಯುವತಿಯರಿಂದ ಮೀಟ್ ಆಗುತ್ತೇನೆ, ನಿನ್ನನ್ನು ಲವ್ ಮಾಡುತ್ತೇನೆ ಎಂದು ಹಣ ಕೇಳುತ್ತಿದ್ದನು. ವಂಚನಕ ಮಾತು ನಂಬಿದ ಕೆಲವು ಯುವತಿಯರು ಹಣ ಕೊಟ್ಟು ವಂಚನೆ ಜಾಲಕ್ಕೆ ಬಿದ್ದಿದ್ದಾರೆ. ಸದ್ಯ ಬಸವೇಶ್ವರನಗರ ಸೈಬರ್ ಕ್ರೈಂ ಠಾಣೆಗೆ ಡಿಜೆ ದೀಪು ದೂರು ನೀಡಿದ್ದಾರೆ. ತನ್ನ ಹೆಸರನ್ನ ದುರ್ಬಳಕೆ ಮಾಡಿ ಯುವತಿಯರಿಗೆ ಅಪರಿಚಿತ ವ್ಯಕ್ತಿ ವಂಚಿಸುತ್ತಿದ್ದಾನೆಂದು ದೂರಿನಲ್ಲಿ ಆರೋಪಿಸಿದ್ದಾರೆ. ದೂರಿನ ಅನ್ವಯ ಪಶ್ವಿಮ ವಿಭಾಗದ ಸೆನ್ ಪೊಲೀಸರು, ಎನ್ಸಿಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಂಚನ ಸುಳಿವು ಪತ್ತೆ
ಕೃತ್ಯದ ಬಗ್ಗೆ ಮಾಹಿತಿ ನೀಡಿದ ಡಿಜೆ ದೀಪು, ಪ್ರದೀಪ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಪದೇ ಪದೇ ಈ ರೀತಿ ನನ್ನ ಹೆಸರು ಬಳಸಿ ವಂಚನೆ ಮಾಡುತಿದ್ದಾನೆ. ನನ್ನ ಫೋಟೊ ಬಳಸುವುದರಿಂ ನಾನು ಎಂದು ಕೊಂಡು ಜನರು ಮೊಸ ಹೊಗುತಿದ್ದಾರೆ. ಇದರಿಂದ ನಾನು ತುಂಬಾ ನೊಂದಿದ್ದೇನೆ. ಈ ಹಿಂದೆ ಇದೇ ವಿಚಾರ ತಿಳಿದು ಆತನ ಮನೆಗೆ ತೆರಳಿದ್ದೆ. ಆಗ ಆತನ ಮನೆಯವರು ಕೇಳಿಕೊಂಡಿದಕ್ಕೆ ಸುಮ್ಮನಾಗಿದ್ದೆ. ಆದರೆ ಆತ ಪದೆ ಪದೆ ತನ್ನ ಹೆಸರು ಬಳಸಿಕೊಂಡು ವಂಚನೆ ಮಾಡುತಿದ್ದಾನೆ. ಈ ಬಗ್ಗೆ ನಾನು ಹಲವು ಬಾರಿ ಠಾಣೆಗೆ ದೂರು ನೀಡಿದ್ದೆ. ಆದರೂ ಆತ ನನ್ನ ಹೆಸರು ಬಳಿಸಿ ವಂಚನೆ ಮಾಡುತ್ತಿರುವುದನ್ನು ಮುಂದುವರಿಸಿದ್ದಾನೆ ಎಂದಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 am, Thu, 7 September 23