ಚುನಾವಣೆ ಭ್ರಷ್ಟಾಚಾರಕ್ಕೆ ಜನ್ಮ ನೀಡಿದವರು ಬಳ್ಳಾರಿ ರೆಡ್ಡಿಗಳು : ಬೀಳಗಿ ಕಾಂಗ್ರೆಸ್​ ಶಾಸಕ ಜೆ. ಟಿ. ಪಾಟೀಲ್

ಚುನಾವಣೆಯಲ್ಲಿ ಹಣ ಪಡೆದು  ಮತ ಕೊಡ್ತೀರಿ, ನೀವು ಮಕ್ಕಳಿಗೆ ಯಾವ ನೈತಿಕ ಪಾಠ ಕೊಡ್ತೀರಿ..  ಚುನಾವಣೆ ಭ್ರಷ್ಟಾಚಾರ ಹುಟ್ಟಾಕಿದವರು ನಮ್ಮ ಬಳ್ಳಾರಿ ರೆಡ್ಡಿಗಳು.. ನಾವೂ ರಾಜಕಾರಣಿಗಳು ಕೂಡ ಕೆಟ್ಟಿದೀವಿ, ನಾವೇನು ಪರಿಶುದ್ಧರಾಗಿ ಉಳಿದಿಲ್ಲ ಎಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ವೇಳೆ ಶಿಕ್ಷಕರಿಗೆ ಬೀಳಗಿ ಶಾಸಕ ಜಗದೀಶ್ ತಿಮ್ಮನಗೌಡ ಪಾಟೀಲ್ ನೈತಿಕ ಪಾಠ ಮಾಡಿದರು.

| Edited By: ಸಾಧು ಶ್ರೀನಾಥ್​

Updated on:Sep 07, 2023 | 10:14 AM

ಬಾಗಲಕೋಟೆ: ಚುನಾವಣೆಯಲ್ಲಿ ಹಣ ಪಡೆದು ಈಡಿಸಿ (ಮತ) ಕೊಡ್ತೀರಿ, ನೀವು ಮಕ್ಕಳಿಗೆ ಯಾವ ನೈತಿಕ ಪಾಠ ಕೊಡ್ತೀರಿ.. ಬಡವರು ರೊಕ್ಕಾ ತಗೊಂಡು ಓಟು ಹಾಕಿದ್ರೆ ಅವರನ್ನ ಶಪಿಸುತ್ತೇವೆ.. ಚುನಾವಣೆ ಭ್ರಷ್ಟಾಚಾರ ಹುಟ್ಟಾಕಿದವರು ನಮ್ಮ ಬಳ್ಳಾರಿ ರೆಡ್ಡಿಗಳು.. ನಾವೂ ರಾಜಕಾರಣಿಗಳು ಕೂಡ ಕೆಟ್ಟಿದೀವಿ, ನಾವೇನು ಪರಿಶುದ್ಧರಾಗಿ ಉಳಿದಿಲ್ಲ ಎಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ವೇಳೆ ಶಿಕ್ಷಕರಿಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಶಾಸಕ ಜಗದೀಶ್ ತಿಮ್ಮನಗೌಡ ಪಾಟೀಲ್ ನೈತಿಕ ಪಾಠ ಮಾಡಿದರು.

ಶಾಸಕ ಜೆ. ಟಿ. ಪಾಟೀಲ್ ಇನ್ನೂ ಏನು ಹೇಳಿದರು ಕೇಳಿ:

ಕ್ಯಾಂಪಸ್ ಗಳಲ್ಲಿ ಹೋದಾಗ ಯುನಿವರ್ಸಿಟಿಯಲ್ಲಿರುವ, ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುವ, ಪ್ರೊಫೆಸರ್ ಗಳು, ಡಾಕ್ಟರ್ ಗಳು ಕೇಳುತ್ತಿದ್ದರು.. ಅವರು ಒಂದು ಮೊಬೈಲ್ ಕೊಡ್ತಾರೆ ಮೂರು ಸಾವಿರ ರೂಪಾಯಿ ಕೊಡ್ತಾರೆ ನೀವೇನು ಕೊಡ್ತೀರಿ? ಅಂತ ಕೇಳ್ತಿದ್ರು.. ಪಾಪ ಬಡವರು ಚುನಾವಣೆಯಲ್ಲಿ ರೊಕ್ಕಾ ತಗೊಂಡು ಓಟ್ ಹಾಕಿದ್ರೆ ಅವರನ್ನ ಯಾಕೆ ಶಪಿಸಬೇಕು.. ನಾನು ಕೇಳ್ತೀನಿ, ಪಂಚಾಯಿತಿ ಅಧ್ಯಕ್ಷರನ್ನ ಆಯ್ಕೆ ಮಾಡುವಾಗ, ಶಿಕ್ಷಕರ ಚುನಾವಣೆಯಲ್ಲಿ ಯಾರು (ಹಣ) ತಗೊಂಡಿಲ್ಲ ಕೈ ಎತ್ತಿ ಹೇಳಿ ನೋಡೋಣ.? ಎಂದು ಪ್ರಶ್ನೆ.. ನಮ್ಮ ಚುನಾವಣೆಯಲ್ಲಿ ಈಡಿಸಿ (ಅಂಚೆಮತ) ಕೊಡೋವಾಗ 2 ರಿಂದ 5 ಸಾವಿರ ತಗೊಂಡ್ರು ಶಿಕ್ಷಕರು.. ಪಾಠ ಏನು ಹೇಳ್ತೀರಿ? ಮಕ್ಕಳಿಗೆ ಏನು ಕಲಸ್ತಿರಿ? ಯಾವ ನೈತಿಕ ಪಾಠ ಕಲಸ್ತಿರಿ?

ಈಗ ನಾನು ಹೇಳೋದು ಭಾಳ ಮಂದಿಗೆ ನೋವಾಗುತ್ತೆ.. ದಯಮಾಡಿ, ಎಲ್ಲ ಸಮಾಜ ಕೆಟ್ಟಿದೆ, ನಾವು ಕೆಟ್ಟಿದ್ದೀವಿ.. ರಾಜಕಾರಣಿಗಳು, ನಾವೇನು ಪರಿಶುದ್ಧರಾಗಿ ಉಳಿದಿಲ್ಲ.. ದೇಶವನ್ಮ ರಾಜ್ಯವನ್ನು ಕೆಡಿಸುವವರು ನಾವೇ.. ರಾಜಕಾರಣಿಗಳೇ ಮೊದಲು, ನಂತರ ಅಧಿಕಾರಿಗಳು.. ಆದ್ರೆ, ತ್ಯಾಗಮಯಿ ಜೀವನ ಇರುವುದು ಶಿಕ್ಷಕರ ಸಮೂಹವನ್ನು ಬಿಟ್ರೆ ಬೇರೆ ಯಾವುದು ಇಲ್ಲ.. ನೀವು ಕೆಟ್ಟರೆ ದೇಶ ಕೆಡುತ್ತೆ, ನೀವು ಕೆಟ್ಟರೆ ಮುಂದಿನ ಸಮಾಜ ಕೆಡುತ್ತೆ, ಮುಂದಿನ ಕುಟುಂಬ ಕೆಡುತ್ತೆ, ಇಡೀ ದೇಶವೇ ಸರ್ವನಾಶವಾಗುತ್ತೆ.. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.. ಇವತ್ತು ರಾಜಕಾರಣ ಯಾವುದರ ಮೇಲೆ ನಿಂತಿದೆ.. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಲ್ಲ ಪಕ್ಷದ ರಾಜಕಾರಣಿಗಳಿಗೂ ಗೊತ್ತಿದೆ.. ಚುನಾವಣೆಯಲ್ಲಿ 10 ಪಟ್ಟು 20 ಪಟ್ಟು ಕರ್ಚು ಜಾಸ್ತಿ ಆಗ್ತಾ ಇದೆ.. ಇದು ಎಲೆಕ್ಷನ್ ಕಮಿಷನ್ ಗೆ ಗೊತ್ತಿಲ್ಲವೇ? ಅಧಿಕಾರಿಗಳಿಗೆ ಗೊತ್ತಿಲ್ಲವೇ?

ಯಾರು ಇದನ್ನು ತಳಬಂದಿಗೆ ತರೋಕೆ ಪ್ರಯತ್ನ ಮಾಡ್ತಿದ್ದೀರಿ.? ಪಕ್ಷದಲ್ಲಿ ದುಡ್ಡು ಕಲೆಕ್ಟ ಮಾಡೋದು ಬಿಟ್ರೆ, ಸುಧಾರಣೆಯತ್ತ ಯಾರು ಮಾಡ್ಲಿಕತ್ತಿಲ್ಲ.. ಇದಕ್ಕೆ ಗಂಟೆ ಕಟ್ಟುವವರು ಯಾರೂ ಇನ್ನೂ ಹುಟ್ಟಿಲ್ಲ ದೇಶದಲ್ಲಿ.. ನಡು ಒಮ್ಮೆ ಯಾರೋ ಪುಣ್ಯಾತ್ಮರು ಮಾತಾದ್ರಿದ್ರು, ಮಾತನ್ನ ಅಷ್ಟಕ್ಕೇ ನಿಲ್ಲಿಸಿದ್ರು.. ಚುನಾವಣೆ ವ್ಯವಸ್ಥೆಯಲ್ಲಿ ಏನು ಹಣದ ವ್ಯವಸ್ಥೆ ಇದೆ ಅನ್ನೋದನ್ನ ಮಾತಾಡಿದ್ರಿ ಅದನ್ನ ಮುಂದುವರೆಸಲಿಲ್ಲ.. ನಾವು ಕೋಟಿಗಟ್ಟಲೇ ಖರ್ಚು ಮಾಡಿ ಹೋದಮೇಲೆ ನಾವೇನು ಮಾಡಬೇಕು..

ಹೊಲಮನಿ ಮಾರ್ಕೊ ಬೇಕಾ? ಒಂದುಕಡೆ ಪ್ರಾಮಾಣಿಕವಾಗಿ ಇರಬೇಕು ಅಂತ ಅಪೇಕ್ಷೆ ಮಾಡ್ತೇವೆ.. ಇನ್ನೊಂದು ಕಡೆ, ಆಸ್ತಿ ಮಾಡಿ ಚುನಾವಣೆ ಮಾಡೋ ಪರಿಸ್ಥಿತಿ ದೇಶದಲ್ಲಿ ರಾಜ್ಯದಲ್ಲಿ ನಿರ್ಮಾಣ ಆಗಿದೆ.. ಬೀಳಗಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಈ ವಿಡಿಯೋ ವೈರಲ್ ಆಗಿದೆ.

 

Published On - 10:05 am, Thu, 7 September 23

Follow us
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್