Inside Suddi: ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ.. ಯಡಿಯೂರಪ್ಪ ಫ್ಯಾಕ್ಟರ್- ವರಿಷ್ಠರು ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡ್ತಾರಾ?
ಈ ಮಧ್ಯೆ ಯಡಿಯೂರಪ್ಪ ಫ್ಯಾಕ್ಟರ್ ಅನ್ನು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅರಿತುಕೊಂಡಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ನಿರೂಪಿಸಲು ಹೋಗಿದ್ದ ಬಿಜೆಪಿ ವರಿಷ್ಠರು ತಮ್ಮ ಗುರಿ ಸಾಧಿಸುವಲ್ಲಿ ನಿರೀಕ್ಷಿತ ಸಫಲತೆ ಸಾಧಿಸಿಲ್ಲ. ಹೀಗಾಗಿ ಈಗ ಹೈಕಮಾಂಡ್ ಕೂಡಾ ಯಡಿಯೂರಪ್ಪನವರನ್ನು ಪೂರ್ತಿಯಾಗಿ ಪಕ್ಕಕ್ಕಿಡುವ ಧೈರ್ಯ ತೋರಲಾರದು ಎಂಬುದು ರಾಜ್ಯ ನಾಯಕರ ಲೆಕ್ಕಾಚಾರ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಇಂದು ನಾಳೆ ಅಂತಾ ಮಾಜಿ ಆಗುವ ಹಾದಿಯಲ್ಲಿದ್ದಾರೆ. ಅವರ ಉತ್ತರಾಧಿಕಾರಿ ಯಾರು ಎಂಬುದು ಇನ್ನೂ ಸಸ್ಪೆನ್ಸ್ ಆಗಿದ್ದರೂ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಪುತ್ರನ ಪರ ಲಾಬಿ ಮಾಡುತ್ತಿದ್ದಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ದಟ್ಟವಾಗಿತ್ತು. ಇಂದು ಸ್ವತ: ಬಿ.ವೈ. ವಿಜಯೇಂದ್ರ ತಮ್ಮ ಪರವಾಗಿ ತಂದೆ ಡಿಮ್ಯಾಂಡ್ ಮಾಡಿಲ್ಲ ಎಂದು ಮೊದಲ ಬಾರಿಗೆ ಸ್ಪಷ್ಟಪಡಿಸಿದ್ದಾರೆ. ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ.. ವಿಧಾನಸಭಾ ಸೋಲಿನಿಂದ ಪುಟಿದೇಳಬೇಕಾದ ಒತ್ತಡದಲ್ಲಿ ಕಮಲ ಪಾಳಯ ಇದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳೀನ್ ಕುಮಾರ್ ಅವರೇ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಾಯಕರನ್ನು ಆಯ್ಕೆ ಮಾಡುವುದೇ ಬಿಜೆಪಿ ಹೈಕಮಾಂಡ್ಗೆ ದೊಡ್ಡ ಚಿಂತೆಯಾಗಿದೆ. ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ರೆ ಯಾರನ್ನ ಮಾಡಬೇಕು ಎಂಬುದೇ ಬಿಜೆಪಿ ವರಿಷ್ಠರಿಗೆ ತಲೆನೋವಾಗಿದೆ. ಇದರ ಮಧ್ಯೆಯೇ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿರುವ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿಬಿಡುತ್ತಾರೇನೋ ಎಂಬ ಆತಂಕ ರಾಜ್ಯ ಬಿಜೆಪಿಯ ಹಲವು ನಾಯಕರಲ್ಲಿ ಈಗಲೂ ಇದೆ.
ಚುನಾವಣಾ ರಾಜಕೀಯದಿಂದ ದೂರವಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಲು ಪಟ್ಟು ಹಿಡಿದಿದ್ದಾರೆ ಎಂಬ ಮಾತು ವಿಧಾನಸಭಾ ಚುನಾವಣೆ ಮುಗಿದ ಬಳಿಕದಿಂದಲೂ ಜಗನ್ನಾಥ ಭವನದಲ್ಲಿ ಓಡಾಡುತ್ತಲೇ ಇತ್ತು. ಅದಕ್ಕೆ ಪೂರಕವೆಂಬಂತೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮತ್ತು ಹೊಸ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಹೈಕಮಾಂಡ್ ವಿಳಂಬಿಸುತ್ತಿರುವ ಕಾರಣ ಯಡಿಯೂರಪ್ಪ ನಡೆ ಬಗ್ಗೆ ವಿರೋಧಿ ಬಣ ಈಗಲೂ ಅತಂಕವನ್ನೇ ಮಡಿಲಲ್ಲಿ ಇಟ್ಟುಕೊಂಡಿದೆ.
ಇನ್ನು ಯಡಿಯೂರಪ್ಪನವರ ಒಂದು ಕಾಲದ ಮಾನಸಪುತ್ರ ರೇಣುಕಾಚಾರ್ಯ ಇದೇ ವಿಚಾರವಾಗಿ ಕೂಡ ಈ ಹಿಂದೆ ಮಾತನಾಡಿದ್ರು. ಯಡಿಯೂರಪ್ಪವರನ್ನು ಕಡೆಗಣಿಸಿ ಸೋತಿದ್ದಾಗಿದೆ. ಇನ್ಮೇಲಾದ್ರು ಸರಿಪಡಿಸಿಕೊಳ್ಳಿ ಅಂತ ಹೇಳಿದ್ರು.
ಯಡಿಯೂರಪ್ಪ ಬೆಂಬಲಿಗರು ಆಗಾಗ ಬ್ಯಾಟಿಂಗ್ ಮಾಡುತ್ತಿದ್ದರೂ ಸ್ವತ: ಯಡಿಯೂರಪ್ಪ ಅವರಾಗಲೀ ಅಥವಾ ವಿಜಯೇಂದ್ರ ಅವರಾಗಲೀ ರಾಜ್ಯಾಧ್ಯಕ್ಷ ರೇಸ್ ನಲ್ಲಿ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿರಲಿಲ್ಲ. ಹಾಗಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಎಂದಾಗಲೆಲ್ಲಾ ವಿಜಯೇಂದ್ರ ಹೆಸರು ಮುನ್ನೆಲೆಗೆ ಬಂದು ನಿಲ್ಲುತ್ತಿತ್ತು. ಆದರೆ ಇಂದು ವಿಜಯೇಂದ್ರ ತಾವು ರಾಜ್ಯಾಧ್ಯಕ್ಷ ರೇಸ್ ನಲ್ಲಿ ಇಲ್ಲ, ತಮ್ಮನ್ನು ರಾಜ್ಯಾಧ್ಯಕ್ಷ ಮಾಡಬೇಕು ಅಂತಾ ಯಡಿಯೂರಪ್ಪನವರು ಹೈಕಮಾಂಡ್ ಗೆ ಡಿಮ್ಯಾಂಡ್ ಮಾಡಿಲ್ಲ ಎಂದು ಮೊದಲ ಬಾರಿಗೆ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಯಡಿಯೂರಪ್ಪ ಫ್ಯಾಕ್ಟರ್ ಅನ್ನು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅರಿತುಕೊಂಡಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ನಿರೂಪಿಸಲು ಹೋಗಿದ್ದ ಬಿಜೆಪಿ ವರಿಷ್ಠರು ತಮ್ಮ ಗುರಿ ಸಾಧಿಸುವಲ್ಲಿ ನಿರೀಕ್ಷಿತ ಸಫಲತೆ ಸಾಧಿಸಿಲ್ಲ. ಹೀಗಾಗಿ ಈಗ ಹೈಕಮಾಂಡ್ ಕೂಡಾ ಯಡಿಯೂರಪ್ಪನವರನ್ನು ಪೂರ್ತಿಯಾಗಿ ಪಕ್ಕಕ್ಕಿಡುವ ಧೈರ್ಯ ತೋರಲಾರದು ಎಂಬುದು ರಾಜ್ಯ ನಾಯಕರ ಲೆಕ್ಕಾಚಾರ.
ಹೀಗಾಗಿ ಯಡಿಯೂರಪ್ಪನವರ ಒತ್ತಡಕ್ಕೆ ಮಣಿದು ಎಲ್ಲಾದರೂ ವರಿಷ್ಠರು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿಬಿಡುತ್ತಾರೇನೋ ಎಂಬ ಆತಂಕ ಒಳಗೊಳಗೇ ಇನ್ನೂ ಕೂಡಾ ಹಲವು ಕಮಲ ನಾಯಕರನ್ನು ಕಾಡುತ್ತಿದೆ. ಈ ಮಧ್ಯೆ ರಾಜಕಾರಣದಲ್ಲಿ ಯಾರು ತಾವು ಆಕಾಂಕ್ಷಿ ಅಲ್ಲ ಎನ್ನುವವರೇ ಪ್ರಬಲ ಆಕಾಂಕ್ಷಿಯಾಗಿರುತ್ತಾರೆ ಎಂಬ ಸೂತ್ರದ ಕಾರಣದಿಂದಾಗಿ ಈಗ ಸ್ವತ: ವಿಜಯೇಂದ್ರ ತಾನು ರಾಜ್ಯಾಧ್ಯಕ್ಷ ಸ್ಥಾನಾಕಾಂಕ್ಷಿ ಅಲ್ಲ ಎಂದು ಹೇಳಿದರೂ ಅದನ್ನು ಸುಲಭವಾಗಿ ರಾಜ್ಯ ನಾಯಕರು ನಂಬಲು ಸಿದ್ಧರಿಲ್ಲ.ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ..
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ