ಸಂಜಯನಗರದಲ್ಲಿ ಪಾರಿವಾಳ ಹಿಡಿಯಲು ಹೋದ ಯುವಕ ನಾಲ್ಕನೇ ಮಹಡಿಯಿಂದ ಬಿದ್ದು ಸಾವು

ಪಾರಿವಾಳಗಳನ್ನ ಹಿಡಿಯುವ ಅಭ್ಯಾಸ ಹೊಂದಿದ್ದ ಫಾರೂಕ್ ಇಂದೂ ಕೂಡ ಅದೇ ಯತ್ನದಲ್ಲಿದ್ದ. ಆದ್ರೆ ಪರಿವಾಳ ಹಿಡಿಯುವ ವೇಳೆ ಆತನ ಕಾಲು ಜಾರಿ 4 ಮಹಡಿಯ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾನೆ.

ಸಂಜಯನಗರದಲ್ಲಿ ಪಾರಿವಾಳ ಹಿಡಿಯಲು ಹೋದ ಯುವಕ ನಾಲ್ಕನೇ ಮಹಡಿಯಿಂದ ಬಿದ್ದು ಸಾವು
ಸಂಜಯನಗರದಲ್ಲಿ ಪಾರಿವಾಳ ಹಿಡಿಯಲು ಹೋದ ಯುವಕ ನಾಲ್ಕನೇ ಮಹಡಿಯಿಂದ ಬಿದ್ದು ಸಾವು
Edited By:

Updated on: Aug 10, 2021 | 9:45 AM

ಬೆಂಗಳೂರು: ಪಾರಿವಾಳ ಹಿಡಿಯಲು ಹೋಗಿ ಕಟ್ಟಡದ ಮೇಲಿಂದ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬೆಂಗಳೂರಿನ ಸಂಜಯನಗರ ಠಾಣಾ ವ್ಯಾಪ್ತಿಯ ವಿನಾಯಕ ಲೇಔಟ್‌ನಲ್ಲಿ ನಡೆದಿದೆ. ಉಮರ್ ಫಾರೂಕ್ (19) ಮೃತ ಯುವಕ.

ಪಾರಿವಾಳಗಳನ್ನ ಹಿಡಿಯುವ ಅಭ್ಯಾಸ ಹೊಂದಿದ್ದ ಫಾರೂಕ್ ಇಂದೂ ಕೂಡ ಅದೇ ಯತ್ನದಲ್ಲಿದ್ದ. ಆದ್ರೆ ಪರಿವಾಳ ಹಿಡಿಯುವ ವೇಳೆ ಆತನ ಕಾಲು ಜಾರಿ 4 ಮಹಡಿಯ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾನೆ. ಕೆಳಕ್ಕೆ ಬಿದ್ದ ಕಾರಣ ಗಂಭೀರವಾಗಿ ಗಾಯಗೊಂಡ ಫಾರೂಕ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಂಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ನಿಮ್ಮ ತಾಯಿ ತುಂಬಾ ಸೀರಿಯಸ್ ಆಗಿದ್ದಾರೆ! ಮೃತಳ ಪುತ್ರನಿಗೆ ಆಸ್ಪತ್ರೆಯಿಂದ ಕರೆ: ಮಡಿಕೇರಿ ಕೊವಿಡ್ ಆಸ್ಪತ್ರೆ ಕರ್ಮಕಾಂಡ