10 ಲಕ್ಷಕ್ಕೆ ಬೇಡಿಕೆಯಿಟ್ಟು ಪೊಲೀಸರ ಸೋಗಿನಲ್ಲಿ ಉದ್ಯಮಿಯನ್ನ ಕಿಡ್ನಾಪ್ ಮಾಡಿದ್ದ ಮೂವರು ಬಂಧನ
ಪೊಲೀಸರ ಸೋಗಿನಲ್ಲಿ ಬಂದಿದ್ದ ಆರೋಪಿಗಳು ಚಿನ್ನದ ವ್ಯಾಪಾರದಲ್ಲಿ ಅವ್ಯವಹಾರ ಮಾಡಿದ್ದೀರಾ ಎಂದು ಬೆದರಿಸಿದ್ದರು. ಆ ಬಳಿಕ ಕೋರಮಂಗಲದ ರೂಂನಲ್ಲಿಟ್ಟು 10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು.
ಬೆಂಗಳೂರು: ಹಣಕ್ಕಾಗಿ ಉದ್ಯಮಿಯನ್ನ ಅಪಹರಿಸಿದ್ದ ಮೂವರನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ನದೀಮ್ ಶರೀಫ್, ಸಂತೋಷ್, ಅಜರ್ ಬಂಧಿತ ಆರೋಪಿಗಳು. ಜುಲೈ 7ರಂದು ಉದ್ಯಮಿ ದಿವಾಕರ್ ರೆಡ್ಡಿಯನ್ನು ಅಪಹರಿಸಿದ್ದರು (Kidnap). ಪೊಲೀಸರ ಸೋಗಿನಲ್ಲಿ ಬಂದಿದ್ದ ಆರೋಪಿಗಳು ಚಿನ್ನದ ವ್ಯಾಪಾರದಲ್ಲಿ ಅವ್ಯವಹಾರ ಮಾಡಿದ್ದೀರಾ ಎಂದು ಬೆದರಿಸಿದ್ದರು. ಆ ಬಳಿಕ ಕೋರಮಂಗಲದ ರೂಂನಲ್ಲಿಟ್ಟು 10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ದಿವಾಕರ್ ಸ್ನೇಹಿತ ಹಲಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯದ ನಶೆಯಲ್ಲಿ ಲಾರಿ ಚಾಲನೆ; 3-4 ವಾಹನ ಜಖಂ ದಾವಣಗೆರೆ: ಮದ್ಯದ ನಶೆಯಲ್ಲಿ ಚಾಲಕನೊಬ್ಬ ಲಾರಿ ಓಡಿಸಿದ್ದಾನೆ. ಈ ವೇಳೆ ಮೂರರಿಂದ ನಾಲ್ಕು ವಾಹನಗಳು ಜಖಂ ಆಗಿವೆ. ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಂಠಪೂರ್ತಿ ಕುಡಿದು ಮನೆಗಳ ಒಳಗೆ ಲಾರಿ ನುಗ್ಗಿಸಿದ್ದಾನೆ. ಲಾರಿ ದಾವಣಗೆರೆಯಿಂದ ಚನ್ನಗಿರಿ ಕಡೆಗೆ ಹೊರಟ್ಟಿತ್ತು. ಲಾರಿ ಚಾಲಕನ ಅವಾಂತರಕ್ಕೆ ಓಮಿನಿ ಸೇರಿ ಮೂರ್ನಾಲ್ಕು ವಾಹನ ಜಖಂ ಆಗಿವೆ. ಹದಡಿ ಠಾಣೆ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ಪಾರಿವಾಳ ಹಿಡಿಯಲು ಹೋಗಿದ್ದ ಯುವಕ ಸಾವು ಪಾರಿವಾಳ ಹಿಡಿಯಲು ಹೋಗಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಿನ ವಿನಾಯಕ ಲೇಔಟ್ನಲ್ಲಿ ನಡೆದಿದೆ. 19 ವರ್ಷದ ಫಾರೂಕ್ ಮೃತ ದುರ್ದೈವಿ. ಪಾರಿವಾಳ ಹಿಡಿಯುವ ಅಭ್ಯಾಸ ಹೊಂದಿದ್ದ ಯುವಕ 4 ಮಹಡಿಯ ಕಟ್ಟಡದಿಂದ ಬಿದ್ದು ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಸಂಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ
ಸಂಜಯನಗರದಲ್ಲಿ ಪಾರಿವಾಳ ಹಿಡಿಯಲು ಹೋದ ಯುವಕ ನಾಲ್ಕನೇ ಮಹಡಿಯಿಂದ ಬಿದ್ದು ಸಾವು
(Police have arrested three persons who abducted a businessman demanding Rs 10 lakh)