ಆಸ್ಪತ್ರೆಗಳೇನೋ ಇವೆ, ಆದ್ರೆ ವೈದ್ಯರಿಲ್ಲ; ಜಾನುವಾರಗಳ ಕೂಗು ಅರಣ್ಯರೋದನವಾಗಿದೆ

ಕರ್ನಾಟಕದ ಕಿರೀಟದಂತೆ ಕರ್ನಾಟಕದ ತಲೆಯ ಮೇಲ್ಭಾಗದಲ್ಲಿ ಕಂಗೊಳಿಸುವ ಐತಿಹಾಸಿಕ ರಾಜ್ಯವೇ ನಮ್ಮ ಹೆಮ್ಮೆಯ ಬೀದರ್.. ಆದರೆ ಇಲ್ಲಿ ತೊಂದರೆ, ಅವ್ಯವಸ್ತೆತೆಗೇನು ಕಡಿಮೆ ಇಲ್ಲ.. ಇಲ್ಲಿ ಎಲೆಕ್ಟ್ ಆಗೋ ಅಧಿಕಾರಿಗಳು ಪಂಡ್ ಕಲೆಕ್ಟ್  ಮಾಡ್ಕೊಳ್ಳೋದ್ರಲ್ಲೇ ಇರ್ತಾರೆ ಇನ್ನು ಎಲ್ಲಿಂದ ಡೆವಲೋಪ್ಮೆಂಟ್ ಭಾಗ್ಯ. ಮನುಷ್ಯರನ್ನ ಬಿಡಿ ಮಾತನಾಡೋಕೆ ಬಾರದ ಜಾನುವಾರಗಳಿಗಳಿಗೇನಾದರು ಮಾಡಿದ್ದಾರ ಇವರು..? ಆಸ್ಪತ್ರೆ ಇದ್ರೆ, ಒಳ್ಳೆ ಡಾಕ್ಟರ್ ಇರಲ್ಲ.. ಒಳ್ಳೆ ಡಾಕ್ಟರ್ ಇದ್ರೆ, ಆಸ್ಪತ್ರೆನೇ ಇರಲ್ಲ. ಅಷ್ಟಕ್ಕೂ  ಬೀದರ್ ನಲ್ಲಿ ಈಗ ಇರುವ ಸಮಸ್ಯೆ ಏನು ಅಂದರೆ… ಬೀದರ್ […]

ಆಸ್ಪತ್ರೆಗಳೇನೋ ಇವೆ, ಆದ್ರೆ ವೈದ್ಯರಿಲ್ಲ; ಜಾನುವಾರಗಳ ಕೂಗು ಅರಣ್ಯರೋದನವಾಗಿದೆ

Updated on: Sep 18, 2019 | 12:30 PM

ಕರ್ನಾಟಕದ ಕಿರೀಟದಂತೆ ಕರ್ನಾಟಕದ ತಲೆಯ ಮೇಲ್ಭಾಗದಲ್ಲಿ ಕಂಗೊಳಿಸುವ ಐತಿಹಾಸಿಕ ರಾಜ್ಯವೇ ನಮ್ಮ ಹೆಮ್ಮೆಯ ಬೀದರ್.. ಆದರೆ ಇಲ್ಲಿ ತೊಂದರೆ, ಅವ್ಯವಸ್ತೆತೆಗೇನು ಕಡಿಮೆ ಇಲ್ಲ.. ಇಲ್ಲಿ ಎಲೆಕ್ಟ್ ಆಗೋ ಅಧಿಕಾರಿಗಳು ಪಂಡ್ ಕಲೆಕ್ಟ್  ಮಾಡ್ಕೊಳ್ಳೋದ್ರಲ್ಲೇ ಇರ್ತಾರೆ ಇನ್ನು ಎಲ್ಲಿಂದ ಡೆವಲೋಪ್ಮೆಂಟ್ ಭಾಗ್ಯ. ಮನುಷ್ಯರನ್ನ ಬಿಡಿ ಮಾತನಾಡೋಕೆ ಬಾರದ ಜಾನುವಾರಗಳಿಗಳಿಗೇನಾದರು ಮಾಡಿದ್ದಾರ ಇವರು..? ಆಸ್ಪತ್ರೆ ಇದ್ರೆ, ಒಳ್ಳೆ ಡಾಕ್ಟರ್ ಇರಲ್ಲ.. ಒಳ್ಳೆ ಡಾಕ್ಟರ್ ಇದ್ರೆ, ಆಸ್ಪತ್ರೆನೇ ಇರಲ್ಲ. ಅಷ್ಟಕ್ಕೂ  ಬೀದರ್ ನಲ್ಲಿ ಈಗ ಇರುವ ಸಮಸ್ಯೆ ಏನು ಅಂದರೆ…

ಬೀದರ್ ಜಿಲ್ಲೆಯಲ್ಲಿ ಸುಮಾರು 114 ಪಶು ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳಿವೆ. ಆದರೆ ವಿಪರ್ಯಾಸ ಅಂದರೆ ಆ ಆಸ್ಪತ್ರೆಗಳಲ್ಲಿ ಜಾನುವಾರಗಳಿಗೆ ಜಿಕಿತ್ಸೆ ನೀಡಲು ಪಶು ವೈದ್ಯರೇ ಇಲ್ಲ. ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಉಂಟಾಗಿದೆ. ಇನ್ನು ಇರುವ ಕೆಲ ಸೋಮಾರಿ ಪಶು ವೈದ್ಯರು ಸರಿಗಾಗಿ ತಮ್ಮ ಕಾರ್ಯ ನಿರ್ವಹಿಸದೆ ಆಸ್ಪತ್ರೆಗಳಿಗೆ ಚಕ್ಕರ್ ಹಾಕುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗಳು ಖಾಲಿ ಹೊಡೀತಿದ್ದು, ಜಾನುವಾರಗಳಿಗೆ ಎನಾದರು ತೊಂದರೆ ಉಂಟಾದರೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಈ ಊರಿನ ಜಾನುವಾರ ಸಾಕಣೆದಾರರು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ಉಂಟಾಗಿದ್ದು, ರೈತರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

Published On - 12:29 pm, Wed, 18 September 19