ಬೀದರ್​: ನಾಲ್ಕು ತಿಂಗಳಲ್ಲಿ ಬರೊಬ್ಬರಿ 325 ಕೇಸ್, 811 ಜನ ಆರೋಪಿಗಳಿಂದ ಕೋಟಿ ಕೋಟಿ ಮೌಲ್ಯದ ವಸ್ತುಗಳು ಜಪ್ತಿ

|

Updated on: Apr 23, 2023 | 7:08 AM

ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಆ ಜಿಲ್ಲೆಯಲ್ಲಿ ಕ್ರೈಂ ರೇಟ್ ಜಾಸ್ತಿಯಾಗುತ್ತಿತ್ತು. ಕಳ್ಳತನ, ಗಾಂಜಾ ಸಾಗಾಟ, ಅಫೀಮು ಮಾರಾಟ, ಬೈಕ್ ಕಳ್ಳತನ ಪ್ರಕರಣಗಳು ಕೂಡ ಹೆಚ್ಚುತ್ತಲೇ ಸಾಗಿತ್ತು. ಆದರೆ ಖಡಕ್ ಎಸ್ಪಿ ಎಂದು ಹೆಸರು ಮಾಡಿರುವ ಚನ್ನಬಸವಣ್ಣ ಬೀದರ್ ಜಿಲ್ಲೆಗೆ ಎಸ್ಪಿಯಾಗಿ ಬಂದ ಕೂಡಲೇ ಕ್ರೈಂಗಳಿಗೆ ಬ್ರೇಕ್ ಬಿದ್ದಿದೆ.

ಬೀದರ್​: ನಾಲ್ಕು ತಿಂಗಳಲ್ಲಿ ಬರೊಬ್ಬರಿ 325 ಕೇಸ್, 811 ಜನ ಆರೋಪಿಗಳಿಂದ ಕೋಟಿ ಕೋಟಿ ಮೌಲ್ಯದ ವಸ್ತುಗಳು ಜಪ್ತಿ
ಬೀದರ್​ ಎಸ್ಪಿ
Follow us on

ಬೀದರ್​: ಮಟ್ಕಾ, ಕಳ್ಳತನ, ಗ್ಯಾಮಲಿಂಗ್​ನಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸ್. ನಾಲ್ಕು ತಿಂಗಳ ಅವಧಿಯಲ್ಲಿ ಬರೊಬ್ಬರಿ 325 ಕೇಸ್ ದಾಖಲಿಸಿ, 811 ಜನರ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 9 ಕೋಟಿ 19 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದ್ದು. ಜಿಲ್ಲೆಗೆ ಬಂದಿರುವ ಹೊಸ ಎಸ್ಪಿಗೆ ಖದೀಮರ ಗ್ಯಾಂಗ್ ತಂಡಾ ಹೊಡೆದಿದೆ. ಹೌದು ಮಹಾರಾಷ್ಟ್ರ ತೆಲಂಗಾಣದ ಗಡಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಕಳೆದೆರಡು ವರ್ಷದಿಂದ ಕ್ರೈಂ ರೇಟ್ ಜಾಸ್ತಿಯಾಗುತ್ತಲೇ ಸಾಗಿತ್ತು. ಅಬಕಾರಿ ಕೇಸ್​ಗಳು, ಬೈಕ್, ಚೈನ್, ಮನೆಗಳ್ಳತನ, ಗಾಂಜಾ ಸಾಗಾಣಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದವೂ. ಜಿಲ್ಲೆಯಲ್ಲಿ ಮಟ್ಕಾ ಧಂದೆ ಗಲ್ಲಿ ಗಲ್ಲಿಯಲ್ಲೂ ನಡೆದಿತ್ತು. ಆದರೆ ಕಳೆದೆ ನಾಲ್ಕೈದು ತಿಂಗಳಿಂದ ಜಿಲ್ಲೆಯಲ್ಲಿ ಕ್ರೈಂ ರೇಟ್ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದಕ್ಕೆ ಪ್ರಮುಖವಾದ ಕಾರಣ ಬೀದರ್ ಜಿಲ್ಲೆಗೆ ನೂತನವಾಗಿ ಬಂದಿರುವ ಎಸ್ಪಿ ಚನ್ನಬಸವಣ್ಣ ಲಂಗೋಟಿ.

ಹೌದು ಈ ಕಡಕ್ ಆಫೀಸ್​ರ್ ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದಂತೆ ನಿದ್ರೆಗೆ ಜಾರಿದ್ದ ಪೊಲೀಸ್ ಸಿಬ್ಬಂದಿಗಳೆಲ್ಲ ಆ್ಯಕ್ಟಿವ್ ಆಗಿದ್ದಾರೆ. ಜಿಲ್ಲೆಗೆ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗೆ ಸುತ್ತಾಡಿ ಆ್ಯಕ್ಟಿವ್ ಇರುವ ಎಲ್ಲಾ ರೌಡಿ ಶೀಟರ್​ಗಳನ್ನ ಕರೆಯಿಸಿ ಅವರಿಗೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಕಟ್ಟುನಿಟ್ಟಾಗಿ ತಿಳುವಳಿಕೆ ಕೊಟ್ಟಿದ್ದಾರೆ. ಈ ನೆಲದ ಕಾನೂನಿಗೆ ಬೆಲೆ ಕೊಡುವವರಿಗೆ ನಾವು ಸಾಥ್ ಕೊಡುತ್ತೇವೆ ಇಲ್ಲವಾದರೆ ಪೊಲೀಸ್ ಏನು ಎಂದು ತೋರಿಸಬೇಕಾಗುತ್ತದೆಂದು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನುಮುಂದೆ ಯಾವುದೇ ಕ್ರೈಂನಲ್ಲಿ ಭಾಗಿಯಾದವರನ್ನ ನಾವು ಸುಮ್ಮನೇ ಬಿಡೋದಿಲ್ಲ ಅದರ ಮೂಲ ಹುಡುಕಿಕೊಂಡು ಹೋಗಿ ಕಿಂಗ್ ಪೀನ್​ಗಳನ್ನ ಬಂಧಿಸುವ ಕೆಲಸವನ್ನ ನಾವು ಮಾಡುತ್ತಿದ್ದೇವೆಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:ಚೀನಾದ ಶಿಯೋಮಿಗೆ ಭಾರೀ ಹಿನ್ನಡೆ; 5551 ಕೋಟಿ ರೂ. ಜಪ್ತಿ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್​​

ಇನ್ನು ವಿವಿಧ ಪ್ರಕರಣದಲ್ಲಿ ಬಂಧಿತ 811 ಜನರ ಪೈಕಿ 40 ಆರೋಪಿಗಳ ಮೇಲೆ ರೌಡಿ ಶೀಟ್ ಓಪನ್ ಮಾಡಿದ್ದು ಇದು ಪುಡಿ ರೌಡಿಗಳು ಗಾಬರಿಯಾಗುವಂತೆ ಮಾಡಿದೆ. ಇನ್ನು ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 13 ಗಾಂಜಾ ಪ್ರಕರಣವನ್ನ ಬೇಧಿಸಿರುವ ಬೀದರ್ ಪೊಲೀಸರು ಒಟ್ಟು 832 ಕೆ.ಜಿಯಷ್ಟು ಗಾಂಜಾವನ್ನ ವಶಕ್ಕೆ ಪಡೆದುಕೊಂಡಿದ್ದು, ಸೀಜ್ ಮಾಡಿದ ಗಾಂಜಾ ಮೌಲ್ಯವೇ 8 ಕೋಟಿ 32 ಸಾವಿರ ರೂಪಾಯಿ ಮೌಲ್ಯದ್ದಾಗುತ್ತದೆಂದು ಅಂದಾಜಿಸಲಾಗಿದೆ. ಇನ್ನು ಗಾಂಜಾ ಕೇಸ್ ಸಂಬಂಧ ರಾಜ್ಯ, ಅಂತರ್ ರಾಜ್ಯ ಸೇರಿದಂತೆ ಒಟ್ಟು 29 ಜನರನ್ನ ಬಂಧಿಸಲಾಗಿದೆ.

ಚುನಾವಣೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೂ ಅಬಕಾರಿ ಪ್ರಕರಣಗಳನ್ನ ನೋಡುವುದಾದರೆ 324 ಜನರ ಮೇಲೆ ಪ್ರಕರಣ ದಾಖಲಾಗಿದ್ದು, 224 ಜನರನ್ನ ಬಂಧಿಸಲಾಗಿದೆ. 1068 ಲೀಟರ್ ಲಿಕ್ಕರ್ ಜಪ್ತಿ, 619 ಲೀಟರ್ ಬೀಯರ್, ಕಳ್ಳಬಟ್ಟಿ. 35 ಲೀಟರ್ ಸೇಂಧಿ, 37 ಬೈಕ್, 12 ನಾಲ್ಕು ಚಕ್ರದ ವಾಹನ ಜಪ್ತಿ ಮಾಡಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಲಿಕ್ಕರ್, ಬೀಯರ್, ಸೇಂಧಿ ಜೊತೆಗೆ ವಾಹನಗಳ ಒಟ್ಟಾರೆ ಮೌಲ್ಯ ಸುಮಾರು 85 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ.

ಇದನ್ನೂ ಓದಿ:ಸವದತ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸೇರಿದ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್​​ಗಳು ಜಪ್ತಿ

ಎನೇ ಇರಲಿ ಬೀದರ್ ಜಿಲ್ಲೆಗೆ ಖಡಕ್ ಎಸ್ಪಿ ಎಂಟ್ರಿ ಕೊಡುತ್ತಿದ್ದಂತೆ ಕಳ್ಳ ಖದೀಮರು, ಧೋ ನಂಬರ್ ದಂಧೆಯಲ್ಲಿ ತೊಡಗಿದ್ದವರಿಗೆ ನಡುಕ ಶುರುವಾಗಿದೆ. ನಾಲ್ಕು ತಿಂಗಳ ಅವಧಿಯಲ್ಲಿ ನೂರಾರು ಕೇಸ್​ಗಳನ್ನ ಪತ್ತೆ ಹಚ್ಚಿ ನೂರಾರು ಆರೋಪಿಗಳನ್ನ ಜೈಲಿಗಟ್ಟಿ ಪದೇ ಪದೇ ಕ್ರೈಂನಲ್ಲಿ ಭಾಗಿಯಾದವರ ಮೇಲೆ ನಿರ್ಧಾಕ್ಷ್ಯಣ್ಯವಾಗಿ ರೌಡಿ ಶೀಟ್​ ಓಪನ್ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ಕ್ರೈಂ ಕಂಟ್ರೋಲ್​ಗೆ ಬಂದಿದೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ