ಸವದತ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸೇರಿದ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್‌ಗಳು ಜಪ್ತಿ
ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್‌ಗಳನ್ನು ಜಪ್ತಿ ಮಾಡಿದ್ದಾರೆ. JDS ಅಭ್ಯರ್ಥಿ ಸೌರವ್ ಚೋಪ್ರಾ ಭಾವಚಿತ್ರವಿರುವ ಟಿಫಿನ್ ಬಾಕ್ಸ್‌ಗಳು ಜಪ್ತಿ.
ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆ ಚುನಾವಣಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದು ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್‌ಗಳನ್ನು ಜಪ್ತಿ ಮಾಡಿದ್ದಾರೆ. ಸವದತ್ತಿಯ ಸಂಭವ ಟಿಂಬರ್ ಯಾರ್ಡ್ ಗೋದಾಮು ಮೇಲೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು 23,84,272 ರೂ. ಮೌಲ್ಯದ 1,012 ಹೊಲಿಗೆ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
11,27,840 ರೂ. ಮೌಲ್ಯದ 1,060 ಐರನ್ ಸ್ಟ್ಯಾಂಡ್ಗಳು. JDS ಅಭ್ಯರ್ಥಿ ಸೌರವ್ ಚೋಪ್ರಾ ಭಾವಚಿತ್ರವಿರುವ 3.24 ಲಕ್ಷ ಮೌಲ್ಯದ 2,160 ಟಿಫಿನ್ ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ದಾಖಲೆ ಇಲ್ಲದ 7 ಕೆಜಿಗೂ ಅಧಿಕ ಚಿನ್ನ ಜಪ್ತಿ
ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ದಾಖಲೆ ಇಲ್ಲದ 7 ಕೆಜಿಗೂ ಅಧಿಕ ಚಿನ್ನ ಜಪ್ತಿ ಮಾಡಲಾಗಿದೆ. 5 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಜಪ್ತಿ ಮಾಡಿದ್ದು ಮೂವರನ್ನು ವಿವೇಕ್ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಚರ್ ವಾಹನದಲ್ಲಿ ದಾಖಲೆ ಇಲ್ಲದೆ ಚಿನ್ನ, ಬೆಳ್ಳಿಯನ್ನು ಸಾಗಿಸಲಾಗುತ್ತಿತ್ತು. ಸದ್ಯ ವಿವೇಕ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ 7 ಕೆಜಿ 999 ಗ್ರಾಂ ಚಿನ್ನ, 46 ಕೆಜಿ 700 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ ಈ ಬಗ್ಗೆ ಕೇಸ್ ದಾಖಲಾಗಿದ್ದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:51 am, Wed, 19 April 23