ಬೀದರ್: ಇಲ್ಲಿನ ಬಸವಕಲ್ಯಾಣ ತಾಲೂಕಿನ ಗುಂಡೂರ ಗ್ರಾಮದ ರೈತ ರಾಮಲಿಂಗ ಬಿರಾದಾರಗೆ ಸೇರಿದ 4 ಎಕರೆ ಹೊಲದಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ. ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದು ಅಪಾರ ಹಾನಿ ಸಂಭವಿಸಿದೆ. ರಾಮಲಿಂಗ ಬಿರಾದಾರಗೆ ಸೇರಿದ 4 ಎಕರೆ ಕಬ್ಬು ಬೆಂಕಿಗಾಹುತಿ ಆಗಿದೆ. ಕಟಾವಿಗೆ ಬಂದಿದ್ದ ಕಬ್ಬು ಸುಟ್ಟಿರುವ ಕಾರಣ ಐದು ಲಕ್ಷದ ವರೆಗೆ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ಈ ನಷ್ಟಕ್ಕೆ ಕಾರಣರಾದವರಿಂದಲೆ ಪರಿಹಾರಕ್ಜೆ ರೈತ ಆಗ್ರಹ ವ್ಯಕ್ತಪಡಿಸಿದ್ದಾರೆ.
ರಾಯಚೂರು: ಚಿನ್ನದಂಗಡಿಯಲ್ಲಿ ಕೆಲಸಕ್ಕಿದ್ದು ಅಲ್ಲೇ ಕಳ್ಳತನ ಮಾಡುತ್ತಿದ್ದವರ ಬಂಧನ
ಚಿನ್ನದಂಗಡಿಯಲ್ಲಿ ಕೆಲಸಕ್ಕಿದ್ದು, ಅಲ್ಲೆ ನಿತ್ಯ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಉಂಡ ಮನೆಗೆ ದ್ರೋಹ ಬಗೆದ ಕೆಲಸಗಾರರನ್ನು ಅರೆಸ್ಟ್ ಮಾಡಲಾಗಿದೆ. ಸಿಸಿಟಿವಿ ಆಫ್ ಮಾಡಿ ನಿತ್ಯ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ರಾಯಚೂರು ನಗರದ ಚಿನ್ನದಂಗಡಿಯೊಂದರಲ್ಲಿ ಕಳ್ಳತನ ನಡೆದಿತ್ತು. ನೇತಾಜಿನಗರ ಪೊಲೀಸರಿಂದ ಇಬ್ಬರು ಖತರ್ನಾಕ್ ಕಳ್ಳರು ಅರೆಸ್ಟ್ ಆಗಿದ್ದಾರೆ. ನಿಖಿಲ್ (18) ಹಾಗೂ ಲಕ್ಷ್ಮಿಕಾಂತ (24) ಬಂಧಿತ ಆರೋಪಿಗಳು. ಬಂಧಿತರಿಂದ 11 ಲಕ್ಷ 86 ಸಾವಿರ ಮೌಲ್ಯದ 205 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಬಂಗಾರದ ಉಂಗುರಗಳು, ತಾಳಿಸರ, ಸರಗಳು, ನೆಕ್ಲೆಸ್ ಜಪ್ತಿ ಮಾಡಲಾಗಿದೆ. ಕಳೆದೊಂದು ವರ್ಷದಿಂದ ಕೆಲಸ ಮಾಡುತ್ತಿದ್ದ ಆರೋಪಿ ನಿಖಿಲ್ ಮತ್ತು ಲಕ್ಷ್ಮೀಕಾಂತ್, ಲಾಕರ್ ನಂಬರ್ ಹಾಗೂ ಸಿಸಿಟಿವಿ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದರು. ಮಾಲೀಕರಿಲ್ಲದ ವೇಳೆ ಸಿಸಿಟಿವಿ ಕನೆಕ್ಷನ್ ಆಫ್ ಮಾಡಿ ಸಣ್ಣ ಪ್ರಮಾಣದಲ್ಲಿ ಚಿನ್ನ ಕಳ್ಳತನ ಮಾಡುತ್ತಿದ್ದರು. ಹೀಗೆ ಕಳೆದೊಂದು ತಿಂಗಳಿಂದ ನಿತ್ಯ ಚಿನ್ನ ಕದಿಯುತ್ತಿದ್ದ ಆರೋಪಿಗಳು, ಲಕ್ಷಾಂತರ ರೂ.ಮೌಲ್ಯದ ಒಟ್ಟು 251 ಗ್ರಾಂ ಚಿನ್ನಾಭರಣವನ್ನು ಆರೋಪಿಗಳು ಕದ್ದಿದ್ದರು. ಇತ್ತೀಚೆಗೆ ರಿಪೇರಿ ಸಂಬಂಧ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಲಾಗಿತ್ತು. ಆಗ ನಿತ್ಯ ಸಿಸಿಟಿವಿ ಆಫ್ ಆಗುತ್ತಿರೋದು ಬೆಳಕಿಗೆ ಬಂದಿದೆ. ನಂತರ ಅಂಗಡಿಯಲ್ಲಿನ ಚಿನ್ನಾಭರಣದ ಮಾಹಿತಿ ಪಡೆದಾಗ ಕಳ್ಳತನ ಬೆಳಕಿಗೆ ಬಂದಿದೆ. ಈ ಬಗ್ಗೆ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಜಯನಗರ: ಸುಟ್ಟ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕ ಸಾವು
ಸುಟ್ಟ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕ ಎ.ನಾಗರಾಜ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಾ.1 ರಂದು ಹೊಸಪೇಟೆ ತಾಲೂಕಿನ ಡಣಾಪುರ ಬಳಿಯ ಬಿಎಂಎಂ ಇಸ್ಪಾತ್ ಕಾರ್ಖಾನೆಯಲ್ಲಿ ವೇಸ್ಟ್ ಮೆಟೀರಿಯಲ್ ಮೈ ಮೇಲೆ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬೀದರ್: ಸಕ್ಕರೆ ಕಾರ್ಖಾನೆ ತ್ಯಾಜ್ಯ ಹಳ್ಳದ ನೀರಿಗೆ; ನಾಲ್ಕೈದು ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ
ಇದನ್ನೂ ಓದಿ: Crime News: ಕೌಟುಂಬಿಕ ಕಲಹ ಹಿನ್ನೆಲೆ; ಚಾಕುವಿನಿಂದ ಪತ್ನಿ ಕುತ್ತಿಗೆ ಕೊಯ್ದು ಪತಿ ಆತ್ಮಹತ್ಯೆಗೆ ಯತ್ನ