ಪಾರ್ಟಿ ನಂತರ ಹೊತ್ತಿ ಉರಿದ ಗುಡಿಸಲು, ಓರ್ವ ವ್ಯಕ್ತಿ ಸಜೀವ ದಹನ

| Updated By: Rakesh Nayak Manchi

Updated on: Dec 31, 2022 | 11:00 AM

ರಾತ್ರಿ ವೇಳೆ ಪಾರ್ಟಿ ಮಾಡುತ್ತಿದ್ದಾಗ ಗುಡಿಸಲಿಗೆ ಬೆಂಕಿ ಬಿದ್ದು ಓರ್ವ ಸಜೀವ ದಹನಗೊಂಡ ಘಟನೆ ಬೀದರ್​ನಲ್ಲಿ ನಡೆದಿದೆ.

ಪಾರ್ಟಿ ನಂತರ ಹೊತ್ತಿ ಉರಿದ ಗುಡಿಸಲು, ಓರ್ವ ವ್ಯಕ್ತಿ ಸಜೀವ ದಹನ
ಬೀದರ್: ಬೆಂಕಿ ಬಿದ್ದು ಗುಡಿಸಲು ಭಸ್ಮ, ಓರ್ವ ವ್ಯಕ್ತಿ ಸಾವು
Follow us on

ಬೀದರ್: ತಡ ರಾತ್ರಿ ಪಾರ್ಟಿ ಮಾಡಿದ ನಂತರ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ (Fire) ಬಿದ್ದು ಓರ್ವ ವ್ಯಕ್ತಿ ಸಜೀವ ದಹನಗೊಂಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಹರನಾಳ ಗ್ರಾಮದಲ್ಲಿ ನಡೆದಿದೆ. 60 ವರ್ಷ ಜಗನಾಥ ಹಲಗೆ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಜಗನಾಥ ಹಲಗೆ ಹಾಗೂ ಮಾರುತಿ ಗೊರನೆ ಎಂಬ ಇಬ್ಬರು ತಡ ರಾತ್ರಿ ಪಾರ್ಟಿ ಮಾಡಿ ನಿದ್ದೆಗೆ ಜಾರಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಜಗನಾಥ ಹಲಗೆ ರಕ್ಷಿಸಲು ಮುಂದಾಗಿದ್ದ ಮಾರುತಿ ಎಂಬತಾನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಜಗನಾಥ ಹಲಗೆ ಸಾವಿನ ಸುದ್ದಿ ತಿಳಿದ ಸಂಬಂದಿಕರ ಆಕ್ರಂದನ ಮುಗಿಲುಮುಟ್ಟಿದೆ. ಜೋಳ ಕಾಯಲು ಜಮಿನಿನಲ್ಲಿ ಪುಟ್ಟ ಗುಡಿಸಲು ನಿರ್ಮಿಸಿಕೊಂಡಿದ್ದರು. ಈ ಗುಡಿಸಲಿನಲ್ಲಿ ರಾತ್ರಿ ಪಾರ್ಟಿ ಮಾಡಿ ಜನನಾಥ ಮತ್ತು ಮಾರುತಿ ಇಬ್ಬರು ನಿದ್ದೆಗೆ ಜಾರಿದ್ದಾರೆ. ಈ ವೇಳೆ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದುರ್ಘಟನೆ ಸಂಭವಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಭಾಲ್ಕಿ ತಾಲೂಕಿನ ಗ್ರಾಮಿಣ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ವಾಲ್ಮಾರ್ಟ್ ನಲ್ಲಿ ಕಳುವು ಮಾಡಿ ಸಿಕ್ಕಿಬಿದ್ದ ಮಹಿಳೆ ತನಗಾದ ಅವಮಾನಕ್ಕೆ ಪ್ರತಿಯಾಗಿ ತನ್ನ ಪುಟ್ಟ ಹೆಣ್ಣಮಗುವನ್ನು ಮನಬಂದಂತೆ ಒದ್ದಳು!

ಆನೆ ನೋಡಿ ಭಯದಲ್ಲಿ ಓಡುವಾಗ ಬಿದ್ದು ಓರ್ವನಿಗೆ ಗಾಯ

ಶಿವಮೊಗ್ಗ: ಮಲ್ಲಂದೂರು, ಹೆದ್ದೂರು, ಮೇಳಿಗೆ ಮಾರ್ಗವಾಗಿ ತೀರ್ಥಹಳ್ಳಿ ಪಟ್ಟಣ ಸಮೀಪಕ್ಕೆ ಕಾಡಾನೆ ಲಗ್ಗೆ ಇಟ್ಟಿದ್ದು, ಆನೆ ನೋಡಿ ಭಯದಲ್ಲಿ ಬಿದ್ದ ಓರ್ವನಿಗೆ ಗಾಯಗಳಾಗಿವೆ. ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯ ತುಂಗಾ ನದಿ ಬಳಿ ಶನಿವಾರ ಬೆಳಗಿನ ಜಾವ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ತೀರ್ಥಹಳ್ಳಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆನೆ ದಾಳಿಯಿಂದ ಕುರುವಳ್ಳಿಯ ಶಾಮಿಲ್ ಮತ್ತು ಇನ್ನೊಂದು ಕಾಂಪೌಂಡ್​​ಗೆ ಹಾನಿಯಾಗಿದ್ದು, ಆನೆ ಹೊಳೆ ಮೂಲಕ ರಂಜದಕಟ್ಟೆ ಕಡೆ ಹೋಗಿರುವ ಅನು ಅನುಮಾನ ವ್ಯಕ್ತವಾಗಿದೆ.

ತೀರ್ಥಹಳ್ಳಿ ಪಟ್ಟಣ ಸಮೀಪಕ್ಕೆ ಬಂದ ಕಾಡಾನೆ

ಕಳೆದ ಎರಡು ಮೂರು ದಿನಗಳಿಂದ ಎನ್.ಆರ್ ಪುರ ತಾಲೂಕಿನ ಮಲ್ಲದೂರು, ಹೆದ್ದೂರು, ಮೇಳಿಗೆ ಮಾರ್ಗವಾಗಿ ಆನೆ ಬಂದಿದ್ದು, ದಾರಿಯುದ್ಧಕ್ಕೂ ಹಾನಿಗೊಳಿಸುತ್ತಾ ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕುರುವಳ್ಳಿ ಬಳಿ ಬೆಳಿಗ್ಗೆ 4.30 ವೇಳೆಗೆ ಸ್ಥಳೀಯ ನಿವಾಸಿ ಒಬ್ಬರಿಗೆ ಕಾಣಿಸಿಕೊಂಡಿದ್ದು ಆನೆ ನೋಡಿದ ವ್ಯಕ್ತಿ ಗಾಬರಿಗೊಂಡು ಕೂಗಿಕೊಂಡು ಓಡಿ ಹೋಗುವಾಗ ಕಾಲಿಗೆ ಗಾಯಗಳಾಗಿವೆ. ಈ ಆನೆ ರಾಷ್ಟಿಯ ಹೆದ್ದಾರಿ 169 ತೀರ್ಥಹಳ್ಳಿ-ಕೊಪ್ಪ- ಶೃಂಗೇರಿ ಮಾರ್ಗ ಕುರುವಳ್ಳಿ ಮುಖ್ಯ ರಸ್ತೆಯಲ್ಲಿ ಓಡಾಡಿದ್ದಲ್ಲದೆ ಅಂಗಡಿಯೊಂದರ ಬೋರ್ಡ್ ದ್ವಂಸಗೊಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:40 am, Sat, 31 December 22