ಬಾಗಲಕೋಟೆ: ಕಬ್ಬು ಲೋಡ್ ಆಗಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ವಿದ್ಯುತ್ ಸ್ಪರ್ಶದಿಂದ ಬೆಂಕಿ, ಹೆಚ್ಚಿನ ಹಾನಿಯಿಲ್ಲ
ಅಗ್ನಿಶಾಮಕ ದಳದ ಸಿಬ್ಬಂದಿ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರಲ್ಲದೆ ಹೆಚ್ಚಿನ ಅನಾಹುತ ಜರುಗುವುದನ್ನು ತಪ್ಪಿಸಿದರು.
ಬಾಗಲಕೋಟೆ: ಟ್ರ್ಯಾಕ್ಟರ್ (tractor) ಟ್ರಾಲಿಯಲ್ಲಿ ಲೋಡ್ ಆಗಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ (Jamakhandi) ತಾಲ್ಲೂಕಿನ ಚಂದ್ರಗಿರಿಪೇಟೆಯಲ್ಲಿ (Chgandragiripiet) ಸಂಭವಿಸಿದೆ. ಕಬ್ಬಿನ ಲೋಡ್ ಗೆ ವಿದ್ಯುತ್ ಸ್ಪರ್ಶವಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಒಟ್ಟು 30 ಟನ್ ಕಬ್ಬು ಲೋಡ್ ಆಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರಲ್ಲದೆ ಹೆಚ್ಚಿನ ಅನಾಹುತ ಜರುಗುವುದನ್ನು ತಪ್ಪಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos