ಹಾಸನ:ಮೊನ್ನೆಯಷ್ಟೇ ಮದುವೆಯಾಗಿದ್ದ ಚನ್ನರಾಯಪಟ್ಟಣದ ಯುವತಿ ವರದಕ್ಷಿಣೆ ಕಿರುಕುಳ ತಾಳದೆ ಆತ್ಮಹತ್ಯೆ ಮಾಡಿಕೊಂಡಳೇ?
ರೋಹಿಣಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಪೋಷಕರಿಗೆ ವರದಕ್ಷಿಣೆ ಕಿರುಕುಳದ ಬಗ್ಗೆ ಮೆಸೇಜ್ ಮಾಡಿದ್ದಳು ಅಂತ ಹೇಳಲಾಗಿದೆ.
ಹಾಸನ: ಎಲ್ಲ ಯುವತಿಯರಂತೆ ಮದುವೆ ಬಗ್ಗೆ ಕನಸು ಕಂಡ ಒಬ್ಬ ಸ್ಫುರದ್ರೂಪಿ ಯುವಕನ್ನು ಮದುವೆಯಾದ 22-ವರ್ಷದ ಸುಂದರ ತರುಣಿಯೊಬ್ಬಳು ಮದುವೆಯಾದ ಕೆಲವೇ ದಿನಗಳ ನಂತರ ತನ್ನ ಕನಸು ಮತ್ತು ಬದುಕನ್ನು ಕೊನೆಗಾಣಿಸಿಕೊಂಡಿದ್ದಾಳೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ (Channarayapatna) ತಾಲ್ಲೂಕಿನಲ್ಲಿರುವ ಸಮುದ್ರವಳ್ಳಿಯಲ್ಲಿ ರೋಹಿಣಿ (Rohini) ಹೆಸರಿನ ನವವಿವಾಹಿತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಹೇಳಲಾಗುತ್ತಿದೆ. ಹೊಳೆನರಸೀಪುರ ತಾಲ್ಲೂಕಿನ ಕಲ್ಲಹಳ್ಳಿಯ ಸುಮಂತ್ ನನ್ನು (Sumanth) ಮದುವೆಯಾಗಿದ್ದ ರೋಹಿಣಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಪೋಷಕರಿಗೆ ವರದಕ್ಷಿಣೆ ಕಿರುಕುಳದ ಬಗ್ಗೆ ಮೆಸೇಜ್ ಮಾಡಿದ್ದಳು ಅಂತ ಹೇಳಲಾಗಿದೆ. ಪೋಷಕರು ತಮ್ಮ ಮಗಳನ್ನು ಕೊಲ್ಲಲಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos