ಬೀದರ್: ಜಿಲ್ಲೆಯ ಯೋಧನೊಬ್ಬ ಹನ್ನೊಂದು ವರ್ಷದಿಂದ ಗಡಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಹಕ್ಕಿಗಾಗಿ ಆತ ಕಳೆದ ನಾಲ್ಕು ವರ್ಷದಿಂದ ಸರಕಾರಿ ಕಚೇರಿಗೆ ಅಲೆದಾಡುತ್ತಿದ್ದಾನೆ. ಆದರೆ ಸರಕಾರ ಸೈನಿಕನಿಗೆ ಕೊಡಬೇಕಾಗ ಕೃಷಿ ಜಮೀನು ಮಾತ್ರ ಕೊಡುತ್ತಿಲ್ಲ. ಜಮೀನು ಕೊಡಿ ಎಂದು ರಜೆಗೆ ಬಂದಾಗ ಜಿಲ್ಲಾಧಿಕಾರಿ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ ಅಂತ ಯೋಧನ ತಂದೆ ಮಾಧವರಾವ್ ದುಃಖ ವ್ಯಕ್ತಪಡಿಸುತ್ತಿದ್ದಾರೆ.
ಬೀದರ್ ತಾಲೂಕಿನ ಕೌಠಾ ಗ್ರಾಮದ ಸಚ್ಚಿದಾನಂದ, ಪಾಕಿಸ್ತಾನ- ಇಂಡಿಯಾ ಗಡಿಯಲ್ಲಿ ಸದ್ಯ ಸೇವೆಯಲ್ಲಿದ್ದಾರೆ. ಯೋಧರ ಜೀವನಾಧಾರಕ್ಕೆಂದು ಜಮೀನು ನೀಡಬೇಕೆಂಬ ಸರ್ಕಾರದ ಮಾರ್ಗಸೂಚಿಯೇ ಇದ್ದರೂ ಯೋಧನಿಗೆ ಜಮೀನು ಸಿಗುತ್ತಿಲ್ಲ. ಜಮೀನಿಗಾಗಿ ನಾಲ್ಕು ವರ್ಷದಿಂದ ಹೊರಾಟ ನಡೆಸುತ್ತಿದ್ದಾರೆ. ವರ್ಷದಿಂದ ಅಲೆದಾಟ ನಡೆಸುತ್ತಿದ್ದರೂ, ಅವರಿಗೆ ಜಮೀನು ಮಾತ್ರ ಸಿಕ್ಕಿಲ್ಲ. ಕಳೆದ 11 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಯೋಧನಿಗೆ ಜಮೀನು, ನೀಡಬೇಕಾದ ಆಡಳಿತ ಯಂತ್ರವೇ ಕಳೆದ 4 ವರ್ಷದಿಂದ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಮೂಲಕ ಅಸಡ್ಡೆ ತೋರುತ್ತಿವೆ.
ಔರಾದ್ ತಾಲೂಕಿನ ಸಂತಪುರ ಹೋಬಳಿಯ ಬಲ್ಲೂರು (ಜೆ) ಗ್ರಾಮದ ಸರಕಾರಿ ಗಾಯರಾಣ ಭೂಮಿ ಸರ್ವೆ ನಂಬರ್ 03 ರಲ್ಲಿ ಒಟ್ಟು ವಿಸ್ತಿರ್ಣ 52 ಎಕರೆ 13 ಗುಂಟೆ ಜಮೀನು ಪೈಕಿ ಅದರಲ್ಲಿನ 4 ಎಕರೆಯಷ್ಟು ಜಮೀನು ಮಂಜೂರು ಮಾಡುವ ಬಗ್ಗೆ 2018ರಲ್ಲಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರು. ಆಗಿನಿಂದಲೂ ಸೈನಿಕ ಸಚ್ಚಿದಾನಂದ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಪಾಕಿಸ್ತಾನ ಇಂಡಿಯಾ ಗಡಿಯಲ್ಲಿ ಕಳೆದ ಮೂರು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಇವರು, ಸ್ವಲ್ಪ ರಜೆ ಸಿಕ್ಕಾಗಿ ಊರಿಗೆ ಬಂದು ಕಚೇರಿಯಿಂದ ಕಚೇರಿಗೆ ಅಲೆಯುತ್ತಲೇ ಇದ್ದಾರೆ. ಆದರೂ ಪ್ರಯೋಜನವಾಗಿಲ್ಲ.
ಔರಾದ್ ತಹಶೀಲ್ದಾರ್ 4.05 ಎಕರೆ ಜಮೀನು ಮಂಜೂರು ಮಾಡಲು ಉಪ ವಿಭಾಗಾಧಿಕಾರಿ ಕಚೇರಿಗೆ ವರದಿ ಕಳಿಸಿದ್ದರು. ಎಸಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಕಡತ ತಲುಪಿತು. ಆದರೆ ಜಿಲ್ಲಾಡಳಿತದಿಂದ ಇನ್ನೂ ಯೋಧನಿಗೆ ಜಮೀನು ಸಿಕ್ಕಿಲ್ಲ. ಜೊತೆಗೆ ಈ ಹಿಂದಿನ ಜಿಲ್ಲಾಧಿಕಾರಿ ಹೆಚ್.ಆರ್.ಮಹದೇವ್ ಇದ್ದಾಗಲು ಎರಡು ಬಾರಿ ಜಮಿನು ಕೊಡುವಂತೆ ಮನವಿ ಮಾಡಿದ್ದರು. ಈಗಿನ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರಿಗೆ ಕೂಡಾ ಜಮೀನು ಕೊಡುವಂತೆ ಮನವಿ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾನ್ ಅವರಿಗೂ ಕೂಡಾ ಇದರ ಬಗ್ಗೆ ಹೇಳಿದ್ದಾರೆ. ಯಾರಿದಂಲೂ ಸ್ಪಂದನೆ ಸಿಕ್ಕಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಯೋಧನಿಗೆ ಜಮೀನು ನೀಡಿ ಅಂತ ಮನವಿ ಮಾಡಿದ್ದಾರೆ.
ಇದನ್ನೂ ಓದಿ
1300 ವಿಕೆಟ್ ಪಡೆದ ಮುರಳೀಧರನ್, ಆರ್‌ಸಿಬಿ ಪರ ಏಕೆ ಹೆಚ್ಚು ಪಂದ್ಯಗಳನ್ನು ಆಡಲಿಲ್ಲ? 7 ವರ್ಷಗಳ ನಂತರ ಸತ್ಯ ಬಯಲು
ಗೀತ ಗೋವಿಂದಂ ರೀತಿಯಲ್ಲೇ ಚಲಿಸುತ್ತಿರುವ ಬಸ್ಸಲ್ಲಿ ಯುವತಿಯನ್ನು ಚುಂಬಿಸಿದ ಯುವಕ; ಕೇಸ್ ದಾಖಲು
(Bidar warrior is struggling to get land)
Published On - 4:15 pm, Thu, 16 September 21