1300 ವಿಕೆಟ್ ಪಡೆದ ಮುರಳೀಧರನ್, ಆರ್‌ಸಿಬಿ ಪರ ಏಕೆ ಹೆಚ್ಚು ಪಂದ್ಯಗಳನ್ನು ಆಡಲಿಲ್ಲ? 7 ವರ್ಷಗಳ ನಂತರ ಸತ್ಯ ಬಯಲು

ಮೊದಲ ಆರು ಪಂದ್ಯಗಳಲ್ಲಿ ನನ್ನನ್ನು ಆಡುವ ಇಲೆವೆನ್‌ನಲ್ಲಿ ಆಯ್ಕೆ ಮಾಡಲಾಗಿಲ್ಲ. ಆದರೆ ಕುಂಬ್ಳೆ ನನಗೆ ಒಂದು ಪಂದ್ಯದಲ್ಲಿ ಅವಕಾಶ ನೀಡಿದರು ಮತ್ತು ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ಅದರ ನಂತರ ನಾನು ಎಲ್ಲಾ ಆರು ಪಂದ್ಯಗಳನ್ನು ಚೆನ್ನಾಗಿ ಆಡಿದ್ದೇನೆ.

1300 ವಿಕೆಟ್ ಪಡೆದ ಮುರಳೀಧರನ್, ಆರ್‌ಸಿಬಿ ಪರ ಏಕೆ ಹೆಚ್ಚು ಪಂದ್ಯಗಳನ್ನು ಆಡಲಿಲ್ಲ? 7 ವರ್ಷಗಳ ನಂತರ ಸತ್ಯ ಬಯಲು
ಮುತ್ತಯ್ಯ ಮುರಳೀಧರನ್
Follow us
TV9 Web
| Updated By: ಪೃಥ್ವಿಶಂಕರ

Updated on: Sep 16, 2021 | 4:06 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವಾಗಲೂ ದಂತಕಥೆಯ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ. ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್, ಡೇನಿಯಲ್ ವೆಟೋರಿ, ಮಿಚೆಲ್ ಸ್ಟಾರ್ಕ್ ಮುಂತಾದ ಆಟಗಾರರು ಈ ತಂಡದ ಭಾಗವಾಗಿದ್ದಾರೆ. ಈ ಹೆಸರುಗಳಲ್ಲಿ ಒಂದು ಮುತ್ತಯ್ಯ ಮುರಳೀಧರನ್ ಅವರದ್ದು. ಅವರು 2012 ರಲ್ಲಿ ಆರ್‌ಸಿಬಿಯೊಂದಿಗಿದ್ದರು. ಆದರೆ ಮುರಳೀಧರನ್ ಕೇವಲ 10 ಪಂದ್ಯಗಳನ್ನು ಮಾತ್ರ ಆಡಿದರು. ಐಪಿಎಲ್‌ನಲ್ಲಿ ಕೇವಲ ನಾಲ್ಕು ವಿದೇಶಿ ಆಟಗಾರರು ಮಾತ್ರ ಒಂದು ತಂಡದಲ್ಲಿ ಆಡಬಹುದು. ಈ ಕಾರಣದಿಂದಾಗಿ, ವಿಶ್ವದ ಅತ್ಯಂತ ವೇಗದ ಸ್ಪಿನ್ನರ್ ಎಲ್ಲಾ ಪಂದ್ಯಗಳಲ್ಲಿ ಆರ್ಸಿಬಿಯ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಆದರೂ ಅವರ ಪ್ರದರ್ಶನ ಚೆನ್ನಾಗಿತ್ತು. ಅವರು ಒಂಬತ್ತು ಪಂದ್ಯಗಳಲ್ಲಿ 14 ವಿಕೆಟ್ ಪಡೆದರು. ಎರಡು ವರ್ಷಗಳ ಕಾಲ ಈ ತಂಡದ ಭಾಗವಾಗಿದ್ದ ಮುರಳೀಧರನ್ ಆರ್‌ಸಿಬಿ ತಂಡದಲ್ಲಿ ಏಕೆ ಹೆಚ್ಚು ಪಂದ್ಯಗಳನ್ನು ಆಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮುರಳಿ, ಆ ಸಮಯದಲ್ಲಿ ನಾನು ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದೆ. ಆ ಸಮಯದಲ್ಲಿ ಅನಿಲ್ ಕುಂಬ್ಳೆ ನನಗೆ ಕರೆ ಮಾಡಿ ನೀನು ಫಿಟ್ ಆಗಿದ್ದೇಯಾ ಮತ್ತು ಆಡುತ್ತಿಯಾ ಎಂದು ಕೇಳಿದರು. ನೀನು ಸಿದ್ದನಿದ್ದರೆ ನಾವು ನಿಮ್ಮನ್ನು ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಎಂದರು. ಅದಕ್ಕೆ ನಾನು, ನನಗೆ ಅವಕಾಶ ನೀಡಿದರೆ ನಾನು ನನ್ನ ಅತ್ಯುತ್ತಮವಾದದ್ದನ್ನು ನೀಡುತ್ತೇನೆ ಎಂದು ಹೇಳಿದೆ. ಹರಾಜಿನಲ್ಲಿ ಅನಿಲ್ ನನ್ನನ್ನು ಆಯ್ಕೆ ಮಾಡಿದಾಗ, ನಾನು ಆರ್‌ಸಿಬಿಗೆ ಹೋಗಿದ್ದೆ. ನಾನು ಮೊದಲ ಬಾರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದೆ. ಅವರು ಈಗಾಗಲೇ ವೆಟ್ಟೋರಿಯನ್ನು ಸಾಗರೋತ್ತರ ಸ್ಪಿನ್ನರ್ ಹೊಂದಿದ್ದರು ಮತ್ತು ತಂಡದಲ್ಲಿ ಗೇಲ್, ಎಬಿ ಡಿವಿಲಿಯರ್ಸ್ ಇದ್ದರು. ಹೀಗಾಗಿ ನನಗೆ ಅವಕಾಶ ಸಿಗುವುದು ತೀರ ಕಷ್ಟವಾಗಿತ್ತು.

ಮುರಳಿ ಎರಡು ಋತುಗಳಲ್ಲಿ ಆರ್‌ಸಿಬಿ ಪರ ಆಡಿದ್ದರು ಶ್ರೀಲಂಕಾದ ಅನುಭವಿ ಆರ್‌ಸಿಬಿಯ ಆರಂಭಿಕ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ತುಂಬಾ ಕಷ್ಟಕರವಾಗಿತ್ತು. ಆದರೆ ಸೀಸನ್ ಮುಂದುವರೆದಂತೆ ಕ್ರಮೇಣ ಅವರಿಗೆ ಅವಕಾಶ ಸಿಕ್ಕಿತು ಎಂದು ಹೇಳಿದರು. ಮೊದಲ ಆರು ಪಂದ್ಯಗಳಲ್ಲಿ ನನ್ನನ್ನು ಆಡುವ ಇಲೆವೆನ್‌ನಲ್ಲಿ ಆಯ್ಕೆ ಮಾಡಲಾಗಿಲ್ಲ. ಆದರೆ ಕುಂಬ್ಳೆ ನನಗೆ ಒಂದು ಪಂದ್ಯದಲ್ಲಿ ಅವಕಾಶ ನೀಡಿದರು ಮತ್ತು ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ಅದರ ನಂತರ ನಾನು ಎಲ್ಲಾ ಆರು ಪಂದ್ಯಗಳನ್ನು ಚೆನ್ನಾಗಿ ಆಡಿದ್ದೇನೆ. ಎರಡನೇ ಸೀಸನ್ ಕೂಡ ಚೆನ್ನಾಗಿತ್ತು. ಮೂರನೇ ಸೀಸನ್​ನಲ್ಲಿ ನನಗೆ ಸೊಂಟದ ಗಾಯವಾಗಿತ್ತು. ಹೀಗಾಗಿ ಅವಕಾಶ ಸಿಗುವುದು ಕಷ್ಟಕರವಾಗಿತ್ತು.

ಮುರಳೀಧರನ್ ಟೆಸ್ಟ್ (800), ಏಕದಿನ (534) ಮತ್ತು ಟಿ 20 (13) ಗಳಲ್ಲಿ ಒಟ್ಟು 1347 ವಿಕೆಟ್ ಪಡೆದಿದ್ದಾರೆ. ನಾವು ಐಪಿಎಲ್ ಬಗ್ಗೆ ಮಾತನಾಡಿದರೆ, ಇಲ್ಲಿ ಅವರು 66 ಪಂದ್ಯಗಳನ್ನು ಆಡಿದ್ದಾರೆ ಮತ್ತು 63 ವಿಕೆಟ್ ಪಡೆದರು. ಅವರು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಚ್ಚಿ ಟಸ್ಕರ್ಸ್ ಕೇರಳ ಪರವಾಗಿ ಕೂಡ ಆಡಿದ್ದರು.

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು