ಬೀದರ್: ಭಾಲ್ಕಿ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಲಘು ಭೂಕಂಪ

| Updated By: ವಿವೇಕ ಬಿರಾದಾರ

Updated on: Oct 24, 2023 | 11:45 AM

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಇಂದು (ಸೆ.05) ಬೆಳಗ್ಗೆ 9.11ರ ಸುಮಾರಿಗೆ ಲಘು ಭೂಕಂಪವಾಗಿದೆ.  ರಿಕ್ಟರ್ ಮಾಪಕದಲ್ಲಿ 2.6ರಷ್ಟು ಕಂಪನದ ತೀವ್ರತೆ ದಾಖಲಾಗಿದೆ.

ಬೀದರ್: ಭಾಲ್ಕಿ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಲಘು ಭೂಕಂಪ
ಭೂಕಂಪ
Follow us on

ಬೀದರ್:  ಜಿಲ್ಲೆಯ ಭಾಲ್ಕಿ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಇಂದು (ಸೆ.05) ಬೆಳಗ್ಗೆ 9.11ರ ಸುಮಾರಿಗೆ ಲಘು ಭೂಕಂಪವಾಗಿದೆ.  ರಿಕ್ಟರ್ ಮಾಪಕದಲ್ಲಿ 2.6ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಇದು ಲಘು ಭೂಕಂಪನವಾಗಿದ್ದು, ಜನರು ಭಯಪಡದಂತೆ ಮನವಿ ಮಾಡಿದ್ದಾರೆ. ಇನ್ನು ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ  ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ತಾಲೂಕಿನ ಹಿಲಾಲಪುರ ವಡ್ಡನಕೇರ ಸಕ್ಕರಗಂಜ್ ನಿಂಬೂರ್ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಜನರು ಭಯ ಭೀತರಾಗಿ ಮನೆಯಿಂದ ಹೊರಗೆ ಬಂದಿದ್ದರು.  ಭೂಕಂಪ ರಿಕ್ಟರ್​ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿತ್ತು.

ಕಲಬುರಗಿ ಜಿಲ್ಲೆಯಲ್ಲಿ ಮಳೆ ಅವಾಂತರ, ಮನೆಗಳಿಗೆ ನುಗ್ಗಿದ ನೀರು

ಕಲಬುರಗಿ: ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಚಿಂಚೋಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿದೆ. ನಿನ್ನೆ (ಸೆ.04) ಸಂಜೆ ಸುರಿದ ಮಳೆಗೆ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ಜನರು ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ.  ಇಂದು ಕೂಡ ಗ್ರಾಮದ ರಸ್ತೆಗಳು ಜಲಾವೃತಗೊಂಡಿವೆ.
ಗ್ರಾಮದ ಸುತ್ತಮುತ್ತ ಅಪಾರ ಪ್ರಮಾಣದ ನೀರು ಹರಿಯುತ್ತಿದೆ.

ಇದನ್ನೂ ಓದಿ: ಕಲಬುರಗಿ ಜಿಲ್ಲೆಯಲ್ಲಿ ನಿಲ್ಲದ ಮಳೆ: ಪೊಲೀಸ್ ಠಾಣೆಗೆ ನುಗ್ಗಿದ ಮಳೆ ನೀರು, ಸರ್ಕಾರಿ ಶಾಲಾ ಮೈದಾನ ಜಲಾವೃತ

ಇನ್ನು ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿರುವ  ಹಿನ್ನಲೆಯಲ್ಲಿ ಭೀಮಾ‌ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಹರಿಯುವ ಕಾಗಿಣಾ ನದಿಯಿಂದಲೂ ಭೀಮಾ ನದಿಗೆ ಅಪಾರ ನೀರು ಬರುತ್ತಿದೆ.

ಭೀಮಾ‌ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ದೇವಸ್ಥಾನಗಳು ಸಂಪೂರ್ಣ ಮುಳುಗಡೆಯಾಗಿವೆ. ಯಾದಗಿರಿ ನಗರದ ಹೊರ ಭಾಗದಲ್ಲಿರುವ ಭೀಮಾ ನದಿ ಪಾತ್ರದ ಕಂಗಾಳೇಶ್ವೇರ ಹಾಗೂ ವೀರಾಂಜನೇಯ ದೇವಸ್ಥಾನಗಳು ನೀರಲ್ಲಿ ಮುಳುಗಿವೆ.  ದೇವಸ್ಥಾನಗಳು ಮುಳುಗಡೆಯಾದ ಹಿನ್ನೆಲೆಯಲ್ಲಿ ಭಕ್ತರು ನದಿ ದಡದಲ್ಲೇ ನಿಂತು ದರ್ಶನ ಪಡೆಯುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:42 am, Tue, 5 September 23