ಬೀದರ್: ಸಕ್ಕರೆ ಕಾರ್ಖಾನೆ ತ್ಯಾಜ್ಯ ಹಳ್ಳದ ನೀರಿಗೆ; ನಾಲ್ಕೈದು ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ

| Updated By: ganapathi bhat

Updated on: Mar 14, 2022 | 10:27 AM

ಇದೇ ಹಳ್ಳದ ನೀರು ಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಕೂಡ ಆಸರೆ ಆಗಿದೆ. ಹಳ್ಳಕ್ಕೆ ವಿಷಕಾರಿ ‌ನೀರು ಬಿಡದಂತೆ ಎಷ್ಟೇ ಮನವಿ ಮಾಡಿದರು ಮಾಲೀಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ವಿಷಕಾರಿಯಾದ ಅಂತರ್ ಜಲ ಹೆಚ್ಚಾಗಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.

ಬೀದರ್: ಸಕ್ಕರೆ ಕಾರ್ಖಾನೆ ತ್ಯಾಜ್ಯ ಹಳ್ಳದ ನೀರಿಗೆ; ನಾಲ್ಕೈದು ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ
ಸಕ್ಕರೆ ಕಾರ್ಖಾನೆ ತ್ಯಾಜ್ಯ ಹಳ್ಳದ ನೀರಿಗೆ
Follow us on

ಬೀದರ್: ಸಕ್ಕರೆ ಕಾರ್ಖಾನೆ ತ್ಯಾಜ್ಯ ಹಳ್ಳದ ನೀರಿಗೆ ಬಿಟ್ಟ ಹಿನ್ನೆಲೆ 4- 5 ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬೀದರ್​ನ ಮರಕುಂದಾ, ಮೊಗದಾಳ, ಭಂಗೂರು, ಬಾಪೂರ ಗ್ರಾಮದ ಜನರಿಗೆ ಕಿಸಾನ್ ಸಕ್ಕರೆ ಕಾರ್ಖಾನೆಯಿಂದ ತ್ಯಾಜ್ಯ ಬಿಡುಗಡೆ ಮಾಡಿದ್ದು ಭಾರೀ ಸಮಸ್ಯೆಗೆ ಕಾರಣವಾಗಿದೆ. ಬೀದರ್ ತಾಲೂಕಿನ ಮೊಗದಾಳದಲ್ಲಿರುವ ಕಾರ್ಖಾನೆಯ ತ್ಯಾಜ್ಯವನ್ನು ಹಳ್ಳಕ್ಕೆ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನಾಲ್ಕೈದು ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಕಿಲೋಮೀಟರ ಗಟ್ಟಲೆ ಹರಿಯುವ ಹಳ್ಳಕ್ಕೆ ಕಾರ್ಖಾನೆ ವಿಷಕಾರಿ ತ್ಯಾಜ್ಯ ಸೇರ್ಪಡೆ ಮಾಡಲಾಗುತ್ತಿದೆ. ಹಳ್ಳದಲ್ಲಿ ವಿಷಕಾರಿ ತ್ಯಾಜ್ಯ ಸೇರಿದ್ದರಿಂದ‌ ನೀರು ಕುಡಿಯದಂತಾ ಸ್ಥಿತಿ ಗ್ರಾಮಸ್ಥರದ್ದು ಎಂದು ಹೇಳಲಾಗಿದೆ. ಇದೇ ಹಳ್ಳದ ನೀರು ಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಕೂಡ ಆಸರೆ ಆಗಿದೆ. ಹಳ್ಳಕ್ಕೆ ವಿಷಕಾರಿ ‌ನೀರು ಬಿಡದಂತೆ ಎಷ್ಟೇ ಮನವಿ ಮಾಡಿದರು ಮಾಲೀಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ವಿಷಕಾರಿಯಾದ ಅಂತರ್ ಜಲ ಹೆಚ್ಚಾಗಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.

ಧಾರವಾಡ: ಮಹಾನಗರ ಪಾಲಿಕೆಯಿಂದ ನಗರದಲ್ಲಿ ಹಾಕಿದ್ದ ಅನಧಿಕೃತ ಫಲಕ, ಹೋರ್ಡಿಂಗ್ಸ್, ಪ್ಲೆಕ್ಸ್ ತೆರವು

ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಹಾಕಿದ್ದ ಅನಧಿಕೃತ ಫಲಕ, ಹೋರ್ಡಿಂಗ್ಸ್, ಪ್ಲೆಕ್ಸ್ ತೆರವು ಮಾಡಲಾಗಿದೆ. ಸಾರ್ವಜನಿಕರಿಂದ ದೂರು ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪಾಲಿಕೆ ಸಿಬ್ಬಂದಿ ಹಲವರಿಗೆ ದಂಡವನ್ನೂ ವಿಧಿಸಿದ್ದಾರೆ. ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಮರಗಳಿಗೆ ಭಿತ್ತಿಪತ್ರ ಅಂಟಿಸಿದವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಕೋಚಿಂಗ್ ಸೆಂಟರ್, ಪಿಜಿ ಹಾಗೂ ವಿವಿಧ ಸಂಸ್ಥೆಗಳಿಗೆ ಸೇರಿದ ಫಲಕಗಳನ್ನು ತೆರವು ಮಾಡಲಾಗಿದೆ. ಫುಟ್‌ಪಾತ್ ಅತಿಕ್ರಮಿಸಿದ್ದ ಬೋರ್ಡ್‌ಗಳ ತೆರವು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಮತ್ತೊಂದು ಜೀವ ಬಲಿ; ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ

ಇದನ್ನೂ ಓದಿ: ತುಮಕೂರಿನಲ್ಲಿ ತಾಯಿ ಎದುರೇ 17 ವರ್ಷದ ಮಗಳ ಅಪಹರಣ! ಬಾಗಿಲು ಮುರಿದು ಮನೆಗೆ ನುಗ್ಗಿ ಬಾಲಕಿ ಕಿಡ್ನ್ಯಾಪ್