ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಬೀದರ್​ ರೈತ; ನೈಸರ್ಗಿಕ ಕೃಷಿ ಪದ್ಧತಿಯಿಂದಲೇ ವರ್ಷಕ್ಕೆ 20 ಲಕ್ಷ ರೂ. ಆದಾಯ

| Updated By: preethi shettigar

Updated on: Dec 29, 2021 | 8:45 AM

ಇವರು ಮೂರು ಸಲ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ. ಆದರೂ ವಂಶಪಾರಂಪರ್ಯವಾಗಿ ಬಂದಿರುವ ತಮ್ಮ ಮೂಲ ವೃತ್ತಿಯಾದ ಕೃಷಿಯ ಕಾಯಕವನ್ನು ಬಿಡದೇ ಇಂದಿಗೂ ಕೂಡಾ ಕೃಷಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಬೀದರ್​ ರೈತ; ನೈಸರ್ಗಿಕ ಕೃಷಿ ಪದ್ಧತಿಯಿಂದಲೇ ವರ್ಷಕ್ಕೆ 20 ಲಕ್ಷ ರೂ. ಆದಾಯ
ರೈತ ಬಾಬುರಾವ್ ಮಲ್ಕಾಪುರ
Follow us on

ಬೀದರ್​: ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಬೀದರ್​ ಜಿಲ್ಲೆಯ ರೈತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಕೋಡುವವರ ಸಂಖ್ಯೆ ಕೂಡ ಇಲ್ಲಿ ಹೆಚ್ಚು. ಆದರೆ ಇಲ್ಲೋಬ್ಬರು ರೈತ ಇಂತರ ಹತ್ತಾರು ಸಮಸ್ಯೆಗಳ ಮಧ್ಯೆ ಮಿಶ್ರ ಬೇಸಾಯದಿಂದ (Mixed farming) ಉತ್ತಮ ಆದಾಯ ಗಳಿಸುತ್ತಿದ್ದಾರೆ. ಕೃಷಿಯಲ್ಲಿ (Agriculture) ಹೊಸ ಹೊಸ ಪ್ರಯೋಗಗಳನ್ನು ಮಾಡುವುದರ ಮೂಲಕ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಎಲ್ಲರಿಂದಲೂ ಸೈ ಎಣಿಸಿಕೊಂಡಿದ್ದಾರೆ.

ಕೃಷಿಯ ಜೊತೆಗೆ ಕುರಿ, ಕೋಳಿ,  ಹೈನುಗಾರಿಕೆ ಮಾಡಿ ಸೈ ಎನಿಸಿಕೊಂಡ ರೈತ ಬಾಬುರಾವ್ ಮಲ್ಕಾಪುರ. ಬೀದರ್ ತಾಲೂಕಿನ ಮಲ್ಕಾಪುರ ಗ್ರಾಮದವರು. ಇವರು ಮೂರು ಸಲ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ. ಆದರೂ ವಂಶಪಾರಂಪರ್ಯವಾಗಿ ಬಂದಿರುವ ತಮ್ಮ ಮೂಲ ವೃತ್ತಿಯಾದ ಕೃಷಿಯ ಕಾಯಕವನ್ನು ಬಿಡದೇ ಇಂದಿಗೂ ಕೂಡಾ ಕೃಷಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಪ್ರತಿ ದಿನ 5 ಗಂಟೆಗೆ ಎದ್ದು, ಎಮ್ಮೇ, ಆಕಳು, ಮೇಕೆಗಳಿಗೆ ಮೇವು ಹಾಕುವುದು, ಅವುಗಳು ವಾಸಿಸುವ ಜಾಗವನ್ನು ಸ್ವಚ್ಛಗೊಳಿಸುವುದು, ಅವುಗಳ ಆರೈಕೆ ಮಾಡುವುದು ಇವರ ದಿನಚರಿ. ಇನ್ನು  ವಂಶಪಾರಂಪರ್ಯವಾಗಿ ಬಂದಿರುವ 38 ಎಕರೆ ಜಮೀನಿನಲ್ಲಿ ತರಹೆವಾರಿ ಬೆಳೆಗಳನ್ನು ಮಿಶ್ರ ಬೇಸಾಯ ಪದ್ಧತಿಯಲ್ಲಿ ಬೆಳೆಸುತ್ತಿದ್ದಾರೆ. ಶುಂಠಿ, ತರಕಾರಿ, ಜೋಳ, ಕಬ್ಬು, ಇರುಳ್ಳಿ, ಕಡಲೆ, ಹೀಗೆ ನಾನಾ ಬಗೆಯ ಬೆಳೆಯನ್ನು ಇವರು ಬೆಳೆಯುತ್ತಿದ್ದಾರೆ. ಇದರಿಂದಾಗಿ ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಬೆಳೆ ಇವರಿಗೆ ಕೈ ಹಿಡಿಯುತ್ತಿದೆ.

ಕಳೆದ ವರ್ಷ 12 ಎಕರೆಯಷ್ಟು ಜಮೀನಿನಲ್ಲಿ ಟೊಮೆಟೋ ಬೆಳೆಸಿದ್ದರು. ಅದಲ್ಲಿಯೂ ಕೂಡಾ 20 ಲಕ್ಷ ರೂಪಾಯಿವರೆಗೆ ಲಾಭ ಮಾಡಿಕೊಂಡಿದ್ದಾರೆ. ಇನ್ನೂ ಪ್ರತಿ ವರ್ಷವೂ ಏನಿಲ್ಲವೆಂದರೆ 10 ಎಕರೆಯಷ್ಟಾದರೂ ಈರುಳ್ಳು ಬೆಳೆಸುತ್ತಾರೆ. ಈರುಳ್ಳಿಗೆ ಯಾವಾಗ ದರವಿರುತ್ತದೆಯೋ ಆಗ ಅದನ್ನು ಮಾರಾಟ ಮಾಡುತ್ತಾರೆ. ಹೀಗಾಗಿ ಈವರೆಗೆ ಇವರು ನಷ್ಟ ಅನುಭವಿಸಿಯೇ ಇಲ್ಲಾ. ಇನ್ನೂ ಹತ್ತು ಜನ ಕೂಲಿ ಆಳುಗಳು ಇವರ ಹೊಲದಲ್ಲಿ ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ.

ಭರಪೂರ ಫಸಲು

ಸುಮಾರು 38 ಎಕರೆಯಷ್ಟು ನೀರಾವರಿ ಜಮೀನು ಹೊಂದಿರುವ ಬಾಬುರಾವ್ ಮಲ್ಕಾಪುರ ಅಪ್ಪಟ್ಟ ಕೃಷಿಕರು. ಕೃಷಿಯ ಜೊತೆಗೆ ಹೈನುಗಾರಿಯಲ್ಲಿಯೂ ಸಾಕಷ್ಟೂ ಆಸಕ್ತಿ ಹೊಂದಿರುವ ಇವರು ವಿವಿಧ ಜಾತಿಯ ಸುಮಾರು 40 ಎಮ್ಮೇಗಳು, 40 ಆಕಳುಗಳು, ನೂರಕ್ಕೂ ಹೆಚ್ಚು ಮೇಕೆಗಳನ್ನು ಸಾಕಿದ್ದಾರೆ. ಇನ್ನೂ ಇವರ ಹೊಲದಲ್ಲಿ ಆಯಾ ಋತುಮಾನಕ್ಕೆ ತಕ್ಕಂತೆ ನೈಸರ್ಗಿಕವಾಗಿ, ವೈಜ್ಞಾನಿಕವಾಗಿ ಬೆಳೆ ಬೆಳೆದು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾರೆ. ಮಿಶ್ರ ಬೇಸಾಯವು ಅವರಿಗೆ ಮೇಲಿಂದ ಮೇಲೆ ಆದಾಯ ತಂದುಕೊಡುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಮಳೆಯ ಕೊರತೆ, ನೈಸರ್ಗಿಕ ವಿಕೋಪದಿಂದ ಒಂದು ಬೆಳೆ ಕೈಕೊಟ್ಟಾಗ ಮತ್ತೊಂದು ಬೆಳೆ ಕೈಹಿಡಿಯುತ್ತಿದೆ. ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಸಮರ್ಥ ನೀರಿನ ಬಳಕೆಗಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಕೂಲಿ ಆಳುಗಳ ಜೊತೆಗೆ ಸ್ವಂತ ತಾನು ಕೂಡ ಹೊಲದಲ್ಲಿ ಕೆಲಸ ಮಾಡುವುದರಿಂದ ಲಾಭ ನಷ್ಟಗಳ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳುವುದು ಸಾಧ್ಯವಾಗಿದೆ ಎಂದು ರೈತ ಬಾಬುರಾವ್​ ಹೇಳಿದ್ದಾರೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ:
ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಸಾಹಸಿ ರೈತ; ಮಳೆ ನೀರನ್ನೇ ಆಧಾರವಾಗಿಸಿ ವರ್ಷಕ್ಕೆ 10 ಲಕ್ಷ ರೂ. ಆದಾಯ

ಬರದ ನಾಡಲ್ಲಿ ಶ್ರೀಗಂಧ ಬೆಳೆದ ಸಾಹಸಿ, ಮಿಶ್ರ ಪದ್ಧತಿ ಬೇಸಾಯದಿಂದ ಸುಧಾರಿಸಿತು ರೈತನ ಆದಾಯ

Published On - 8:40 am, Wed, 29 December 21