ಗಡಿನಾಡಲ್ಲಿ ಸುಂದರಿಯರ ಕ್ಯಾಟ್ ವಾಕ್: ರಂಗುರಂಗಿನ ಸೀರೆಯಲ್ಲಿ ಮಿಂಚಿದ ನೀರೆಯರು

|

Updated on: Feb 18, 2020 | 11:19 AM

ಬೀದರ್: ಅದು ರಂಗು ರಂಗಿನ ವೇದಿಕೆ. ಅಲ್ಲಿತ್ತು ಬಣ್ಣ ಬಣ್ಣದ ಚಿತ್ತಾರ. ನೆರೆದ ಯುವಕರ ಚೀತ್ಕಾರ. ದೇಶಿ ಹಾಗೂ ವಿದೇಶಿ ಹಾಡುಗಳಿಗೆ ನೆರೆದವರೆಲ್ಲರಿಂದ ಸಿಕ್ಕಿದ್ದು ಶಿಳ್ಳೇ ಕೇಕೆ. ಆ ಇದೇನು ಅಂದ್ರಾ? ಇಲ್ಲಿದೆ ನೋಡಿ ಆ ಕಲರ್ ಫುಲ್ ಸಂಜೆಯ ಡಿಟೇಲ್ಸ್ ರಂಗು ರಂಗಿನ ದೇಶಿ ಹಾಗೂ ವಿದೇಶಿ ಸೀರೆಯುಟ್ಟ ನೀರೆಯರು, ಬಗೆ ಬಗೆ ಉಡುಪುಗಳಲ್ಲಿ ಕಂಗೊಳಿಸುತ್ತಾ ಕ್ಯಾಟ್ ವಾಕ್ ಮಾಡ್ತಿರೋ ಹುಡುಗರು. ಆಗಾಗ ಡಾನ್ಸ್ , ಹಿಂಬದಿಯಲ್ಲಿ ಮಸ್ತ್ ಸಾಂಗ್ಸ್ ಹಾಗೂ ಕೇಕೆ ಶಿಳ್ಳೆ. ಹೌದು […]

ಗಡಿನಾಡಲ್ಲಿ ಸುಂದರಿಯರ ಕ್ಯಾಟ್ ವಾಕ್: ರಂಗುರಂಗಿನ ಸೀರೆಯಲ್ಲಿ ಮಿಂಚಿದ ನೀರೆಯರು
Follow us on

ಬೀದರ್: ಅದು ರಂಗು ರಂಗಿನ ವೇದಿಕೆ. ಅಲ್ಲಿತ್ತು ಬಣ್ಣ ಬಣ್ಣದ ಚಿತ್ತಾರ. ನೆರೆದ ಯುವಕರ ಚೀತ್ಕಾರ. ದೇಶಿ ಹಾಗೂ ವಿದೇಶಿ ಹಾಡುಗಳಿಗೆ ನೆರೆದವರೆಲ್ಲರಿಂದ ಸಿಕ್ಕಿದ್ದು ಶಿಳ್ಳೇ ಕೇಕೆ. ಆ ಇದೇನು ಅಂದ್ರಾ? ಇಲ್ಲಿದೆ ನೋಡಿ ಆ ಕಲರ್ ಫುಲ್ ಸಂಜೆಯ ಡಿಟೇಲ್ಸ್

ರಂಗು ರಂಗಿನ ದೇಶಿ ಹಾಗೂ ವಿದೇಶಿ ಸೀರೆಯುಟ್ಟ ನೀರೆಯರು, ಬಗೆ ಬಗೆ ಉಡುಪುಗಳಲ್ಲಿ ಕಂಗೊಳಿಸುತ್ತಾ ಕ್ಯಾಟ್ ವಾಕ್ ಮಾಡ್ತಿರೋ ಹುಡುಗರು. ಆಗಾಗ ಡಾನ್ಸ್ , ಹಿಂಬದಿಯಲ್ಲಿ ಮಸ್ತ್ ಸಾಂಗ್ಸ್ ಹಾಗೂ ಕೇಕೆ ಶಿಳ್ಳೆ. ಹೌದು ಇಂದು ಸಂಜೆ ಈ ದೃಶ್ಯಗಳೆಲ್ಲ ಕಂಡುಬಂದಿದ್ದು ಬೀದರ್ ನಗರದ ಜಿಲ್ಲಾ ರಂಗಮಂದಿರದಲ್ಲಿ. ನಗರದ ಜಿಲ್ಲಾ ರೋಟರಿ ಕ್ಲಬ್ ಸಹಯೋಗದಲ್ಲಿ ಉಡಾನ್ ಸಂಸ್ಥೆ ಈ ವಿಭಿನ್ನ ಕಾರ್ಯಕ್ರಮ ಆಯೋಜಿಸಿತ್ತು.

ಕ್ಯಾಟ್ ವಾಕ್ ಮಾಡಿದ ಸುಂದರಿಯರು:
ಈ ಸಂಸ್ಥೆ ಆಯೋಜಿಸಿದ್ದ ಇಂದಿನ ಫ್ಯಾಷನ್ ಫಿನಾಲೆ ತೀರಾ ವಿಭಿನ್ನವಾಗಿತ್ತು. ಮಂದ ಬೆಳಕಿನ ನಡುವೆ ಕ್ಯಾಟ್ ವಾಕ್ ಮಾಡಿದ ಸುಂದರಿಯರ ಲಹರಿ ನೋಡುಗರಿಗೆ ಹೊಸ ಲೋಕವನ್ನೇ ತೆರೆದಿಟ್ಟಿತ್ತು‌. ತೆಲಂಗಾಣ, ಮಹಾರಾಷ್ಟ್ರ, ಹೈದರಾಬಾದ್​ನಿಂದ ಬಂದಿದ್ದ ಯುವತಿಯರ ಜೊತೆಗೆ ಸ್ಥಳೀಯ ಬೀದರ್ ಯುವತಿಯರು ಈ ಫ್ಯಾಶನ್ ಶೋದಲ್ಲಿ ಭಾಗಿಯಾಗಿದ್ರು.

ಒಟ್ಟು 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಹವಹಿಸಿದ್ದ ಈ ಸ್ಪರ್ಧೆಯಲ್ಲಿ ಹೆಣ್ಣು ಮಕ್ಕಳ ಸಮಸ್ಯೆ ಬಿಂಬಿಸುವಂತಹ ಘಟನಾವಳಿಗಳ ಬಗ್ಗೆಯೂ ಬೆಳಕು ಚೆಲ್ಲಲಾಯಿತು. ಫ್ಯಾಷನ್ ಶೋ ಎಂದರೆ ಈ ಕಾರ್ಯಕ್ರಮ ಅದಕ್ಕಷ್ಟೇ ಸೀಮಿತವಾಗಿರಲಿಲ್ಲ. ಬೀದರ್​ನಂತಹ ಗಡಿನಾಡಲ್ಲೂ ನಡೆದ ಈ ಉತ್ತಮ ಕಾರ್ಯಕ್ರಮ ಲಿಂಗ ಸಮಾನತೆ, ಮಹಿಳಾ ಸ್ವಾತಂತ್ರ್ಯ ದಂತಹ ವಿಚಾರಗಳ ಪ್ರಹಸನದ ಮೂಲಕ ಗಮನ ಸೆಳೆಯಿತು. ಜೊತೆಗೆ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಸಾಕಷ್ಟು ವಿಭಿನ್ನ ಎನ್ನುವಂತೆ ಡಾನ್ಸ್ ಮಾಡುವ ಮೂಲಕ ಗಮನ ಸೆಳೆದರು.

ಯುವ ಜನತೆಯನ್ನು ಗುರಿಯಾಗಿಟ್ಟುಕೊಂಡು ಆಯೋಜಿಸಿದ್ದ ಈ ಕಾರ್ಯಕ್ರಮ ಮನೋಹರವಾಗಿತ್ತು‌. ಹಲವಾರು ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೂ ವೇದಿಕೆಯಾಗಿತ್ತು. ಮನರಂಜನೆಯ ಜೊತೆಗೆ ಯುವಕ, ಯುವತಿಯರ ಪ್ರಾತ್ಯಕ್ಷಿತೆ ಬಗ್ಗೆಯೂ ಚೆನ್ನಾಗಿ ತಿಳಿಸಿಕೊಟ್ಟ ಈ ಕಾರ್ಯಕ್ರಮ ಅವರ ಜವಾಬ್ದಾರಿ ನೆನಪಿಸುವಲ್ಲಿಯೂ ಸಕ್ತವಾಯಿತು ಎಂದರೆ ಅತಿಶಯೋಕ್ತಿ ಆಗಲಾರದು‌.





Published On - 5:37 pm, Mon, 17 February 20