ಬೀದರ್: ಜಿಲ್ಲಾಸ್ಪತ್ರೆಯಲ್ಲೇ ಎರಡು ಗ್ಯಾಂಗ್ಗಳ ನಡುವೆ ಮಾರಾಮಾರಿ ಆಗಿದೆ. ಬ್ರಿಮ್ಸ್‌ನಲ್ಲಿ ಭೀಬತ್ಸ ದೃಶ್ಯವೇ ಕಂಡು ಬಂದಿದ್ದು ಎದೆ ಝಲ್ ಎನ್ನಿಸುವಂತಿದೆ. ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದವನ್ನೇ ಎಬ್ಬಿಸಿ ಹಲ್ಲೆ ನಡೆಸಲಾಗಿದೆ. ಎಮರ್ಜೆನ್ಸಿ ವಾರ್ಡ್‌ನಲ್ಲಿ ಟ್ರೀಟ್‌ಮೆಂಟ್ ಪಡೆಯುತ್ತಿದ್ದವನ ಮೇಲೆಯೂ ಅಟ್ಯಾಕ್ ಮಾಡಲಾಗಿದೆ.
ಹಣಕಾಸು ವಿಚಾರಕ್ಕೆ ಎರಡು ಗ್ಯಾಂಗ್ ನಡುವೆ ಗಲಾಟೆ
ಬೀದರ್ ಜಿಲ್ಲಾಸ್ಪತ್ರೆ ಬ್ರಿಮ್ಸ್ನಲ್ಲಿ ಎರಡು ಗ್ಯಾಂಗ್ಗಳ ನಡುವೆ ಮಾರಾಮಾರಿ ನಡೆದಿದೆ. 2020 ರಲ್ಲಿ ಕಾಂಗ್ರೆಸ್ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಫಿರೋಜ್ ಖಾನ್, ಅರಬಾಜ್‌ಖಾನ್ ಅನ್ನೋ ಒಂದು ಟೀಂ ಹಾಗೂ ಮಹ್ಮದ್ ರೌಫ್, ಅಫಸರ್ ಖಾನ್ ಅನ್ನೋ ಇನ್ನೊಂದು ಗ್ಯಾಂಗ್ ನಡುವೆ ವಾರ್ ನಡೆದಿತ್ತು. ಹಣಕಾಸು ವಿಚಾರಕ್ಕೆ ನಡೆದ ಈ ಗಲಾಟೆ ಸಂಬಂಧ ಬೀದರ್‌ನ ಟೌನ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಎರಡೂ ಕಡೆಯವರು ಕೇಸ್ ದಾಖಲಿಸಿದ್ರು. ಈ ಕೇಸ್ ಸಂಬಂಧ ವಿಚಾರಣೆ ನಡೆಸೋಕೆ ಅಂತಾ ಇವತ್ತು (ಮಾರ್ಚ್ 24) ಪೊಲೀಸರು ಎರಡೂ ಗುಂಪುಗಳಿಗೂ ಬುಲಾವ್ ನೀಡಿದ್ರು.
ವಿಚಾರಣೆಗೆ ಕರೆದ ದಿನವೇ ಗ್ಯಾಂಗ್‌ಗಳ ನಡುವೆ ಮಾರಾಮಾರಿ
ಇನ್ನು ಇವತ್ತು ವಿಚಾರಣೆಗೆ ಕರೆದಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ, ಎರಡೂ ಗ್ಯಾಂಗ್‌ಗಳ ನಡುವೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೀದರ್‌ನ ಮನಿಯಾರ್ ತಾಲೀಮ್ ಬಡಾವಣೆಯಲ್ಲಿ ಬಡಿದಾಟವಾಗಿತ್ತು. ಅದೇ ಬಡಿದಾಟದಲ್ಲಿ ಗಾಯಗೊಂಡಿದ್ದ ಮಹ್ಮದ್ ರೌಫ್ ಹಾಗೂ ಅಫಸರ್ ಖಾನ್ ಬ್ರಿಮ್ಸ್‌ನ ಎಮರ್ಜೆನ್ಸಿ ವಾರ್ಡ್‌ಗೆ ದಾಖಲಾಗಿದ್ರು. ಹೀಗೆ ದಾಖಲಾಗಿರೋದು ಗೊತ್ತಾಗ್ತಿದ್ದಂತೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ತನ್ನ ಗ್ಯಾಂಗ್ ಕಟ್ಟಿಕೊಂಡು ಕಾಂಗ್ರೆಸ್ ಮುಖಂಡ ಫಿರೋಜ್ ಖಾನ್, ಬ್ರಿಮ್ಸ್‌ಗೆ ಎಂಟ್ರಿಯಾಗಿದ್ದ.
ಕಾರ್‌ನಿಂದ ಇಳಿದು ಓಡೋಡಿ ಬಂದವರೇ ಮಹ್ಮದ್ ರೌಫ್ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿದ್ದ ಚೇರ್, ವೈದ್ಯಕೀಯ ಉಪಕರಣ ಸೇರಿದಂತೆ ಕೈಗೆ ಸಿಕ್ಕವಸ್ತುಗಳಿಂದ ಅಟ್ಯಾಕ್ ಮಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರೋ ರೌಫ್‌ನನ್ನ ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಡಿದಾಟದಲ್ಲಿ ಫಿರೋಜ್ ಖಾನ್ ಕಡೆಯವರಿಗೂ ಗಾಯಗಳಾಗಿದ್ದು, ಬ್ರಿಮ್ಸ್‌ನಲ್ಲೇ ಟ್ರೀಟ್‌ಮೆಂಟ್ ಪಡೆಯುತ್ತಿದ್ದಾರೆ. ಇನ್ನೂ ಈ ಗ್ಯಾಂಗ್‌ವಾರ್‌ನಿಂದ ಇಡೀ ಬ್ರಿಮ್ಸ್ ಆವರಣದಲ್ಲಿ ಆತಂಕದ ವಾತಾವರಣವಿದ್ದು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಒಟ್ನಲ್ಲಿ ನೂರಾರು ಸಿಬ್ಬಂದಿ, ನೂರಾರು ರೋಗಿಗಳು ಇರೋ ಬ್ರಿಮ್ಸ್‌ನಲ್ಲೇ ನಡೆದಿರೋ ಗ್ಯಾಂಗ್‌ವಾರ್, ಬೀದರ್‌ನ ಸ್ಥಿತಿ ಎಲ್ಲಿಗೆ ತಲುಪಿದೆ ಅನ್ನೋದನ್ನ ತೋರಿಸ್ತಿದ್ರೆ, ಕೇಸ್ ದಾಖಲಿಸಿಕೊಂಡಿರೋ ನ್ಯೂಟೌನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವರದಿ: ಸುರೇಶ್ ನಾಯಕ್, ಟಿವಿ9 ಬೀದರ್
ಇದನ್ನೂ ಓದಿ: Gold- Silver Rate: ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್ 24ರ ಗುರುವಾರದ ಚಿನ್ನ, ಬೆಳ್ಳಿ ದರದ ಮಾಹಿತಿ ಇಲ್ಲಿದೆ