ಬೀದರ್, ಮೇ.15: ಜಿಲ್ಲೆಯ ಹುಮ್ನಾಬಾದ್(Humnabad) ತಾಲೂಕಿನ ಬಶೀಲಾಪುರ ಗ್ರಾಮದ ಬಳಿ 71 ಎಕರೆಯಷ್ಟೂ ಜಮೀನಿನಲ್ಲಿ ತೆಲಂಗಾಣ ಮೂಲದ ಸುಧಾಕರ ಎಂಬುವರು ವಿವಿಧ ಜಾತಿಯ ಮಾವು(Mango) ಬೆಳೆಸಿದ್ದು, ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಇನ್ನು ಸುಧಾಕರ ಎಂಬುವವರ ಮಾವಿನ ತೋಟದ ಮಾವುನ್ನು ಅತೀಫ್ ಎಂಬ ರೈತ, ಒಂದು ಕೋಟಿ ರೂಪಾಯಿಗೆ ಖರೀಧಿಸಿದ್ದು. ಅದನ್ನು ಮಾರಾಟ ಮಾಡಿ ವರ್ಷಕ್ಕೆ ಎರಡು ಕೋಟಿಗೂ ಅಧಿಕ ಲಾಭವನ್ನ ಮಾಡುತ್ತಿದ್ದಾರೆ. ಇವರ ತೋಟದಲ್ಲಿ ಮಾವು ಪ್ರಿಯರ ಮೆಚ್ಚಿನ ತಳಿಗಳಾದ ದಸೇರಾ, ಮಲ್ಲಿಕಾ, ಕೇಸರ್, ಬಾದಾಮಿ, ರಸಪೂರಿ, ಆಲ್ಫೋನ್ಸಾ, ತೋತಾಪುರಿ ಮಾವು ಸೇರಿದಂತೆ ವಿವಿಧ ಬಗೆಯ ತಳಿಗಳ ಮಾವುಗಳು ಇವೆ.
ಪ್ರತಿದಿನವೂ 20 ಕ್ಕೂ ಹೆಚ್ಚು ಕೆಲಸಗಾರರು ಮಾವು ಕಟಾವು ಮಾಡಿ ಫ್ಯಾಕ್ ಮಾಡಿ ಹೈದ್ರಾಬಾದ್ಗೆ ಕಳುಹಿಸಿಕೊಡುತ್ತಾರೆ. ಬಳಿಕ ಅಲ್ಲಿಂದ ಹೈದ್ರಾಬಾದ್ ಇಂದ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನ ಫ್ಯಾಕ್ ಮಾಡಿ ವಿದೇಶಕ್ಕೆ ರಫ್ತು ಮಾಡುತ್ತಾರೆಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸಂತೋಷ್ ಎಂಬುವವರು ಹೇಳುತ್ತಿದ್ದಾರೆ.
ಇದನ್ನೂ ಓದಿ:ಧಾರವಾಡದಲ್ಲಿ ಮಾವು ಮೇಳ ಆರಂಭ; ಇಲ್ಲಿವೆ ವಿವಿಧ ಬಗೆಯ ಹಣ್ಣುಗಳು
ಬೀದರ್ ಜಿಲ್ಲೆಯಲ್ಲಿ ಮಾವು ಬೆಳೆಗೆ ಉತ್ತಮವಾದ ಮಣ್ಣು ಹಾಗೂ ಉತ್ತಮ ಹವಾಮಾನ ಇರುವುದರಿಂದ ಇಲ್ಲಿ ಮಾವು ಬೆಳೆಯಲು ಉತ್ತಮವಾಗಿದೆ ಎಂದು ಇಲ್ಲಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಈ ವರ್ಷ ಡಿಸೆಂಬರ್ದಿಂದ ಜನವರಿಯಲ್ಲಿ ಶೇ.65ರಷ್ಟು ಗಿಡಗಳು ಹೂ ಬಿಟ್ಟಿದ್ದು, ಅಕಾಲಿಕ ಮಳೆ ಮತ್ತು ಹೆಚ್ಚು ಇಬ್ಬನಿ ಕಾಣಿಸಿಕೊಳ್ಳದ ಕಾರಣ ಉತ್ತಮ ಫಸಲು ಬರುವ ನಿರೀಕ್ಷೆ ಇದೆ. ಸದ್ಯಕ್ಕೆ ಮಾವಿನ ಬೆಳೆಗೆ ಯಾವುದೇ ರೋಗ ಮತ್ತು ಕೀಟಗಳ ಬಾಧೆ ತಟ್ಟಿಲ್ಲ. ಜೊತೆಗೆ ಪ್ರತಿವರ್ಷ ಕಾಡುತ್ತಿದ್ದ ಮ್ಯಾಂಗೋ ಹ್ಯಾಪರ್ ರೋಗ ಈ ಬಾರಿ ಕಾಣಿಸಿಕೊಂಡಿಲ್ಲ. ಇದು ರೈತನಿಗೆ ವರದಾನವಾಗಿದೆ.
ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನ ಕೊನೆಯ ವಾರ ಮತ್ತು ಜನವರಿ ತಿಂಗಳಿನ ಮೊದಲ ವಾರದಲ್ಲಿ ಮಾವಿನ ಗಿಡಗಳು ಹೂವು ಬಿಟ್ಟರೆ, ಏಪ್ರಿಲ್ ಮತ್ತು ಮೇ ತಿಂಗಳಾಂತ್ಯದವರೆಗೂ ಫಸಲು ಮಾರುಕಟ್ಟೆಗೆ ಬರುತ್ತಿವೆ. ಇವರು ಬೆಳೆಸಿದ ಮಾವು ವಿದೇಶಕ್ಕೆ ಅಷ್ಟೇ ಅಲ್ಲದೆ ರಾಜ್ಯದ ಮೈಸೂರು, ಬೆಂಗಳೂರು, ಮಂಗಳೂರು, ಪುಣೆ, ಮುಂಬೈ ಸೇರಿದಂತೆ ನೆರೆಯ ರಾಜ್ಯದ ಪ್ರಮುಖ ಪಟ್ಟಣಗಳಿಗೂ ಹೋಗುವುದು ವಿಶೇಷ.
ಇನ್ನು ಇವರು ಇಡೀ ಮವಿನ ತೋಟವನ್ನ ಒಂದು ವರ್ಷಕ್ಕೆ ಲೀಸ್ಗೆ ಕೊಟ್ಟಿರುವುದರಿಂದ ಮಾಲೀಕರಾದ ಸುಧಾಕರ್ಗೆ ಹಣ್ಣು ಕಟಾವು ಮಾಡುವುದು ಲಾಭನಷ್ಟದ ಸಮಸ್ಯೆಯಿಲ್ಲ. ಜೊತೆಗೆ ಇದನ್ನ ಲೀಸ್ಗೆ ಪಡೆದ ಅತೀಫ್ ಕೂಡ ಉತ್ತಮ ಆದಾಯ ಗಳಿಸುತ್ತಿದ್ದಾನೆ. ಬರಡು ಭೂಮಿಯಲ್ಲಿ ಮಾವಿನ ಕೃಷಿಯಿಂದ ಈ ರೈತರು ವರ್ಷಕ್ಕೆ ಎರಡು ಕೋಟಿಗೂ ಅಧಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ಒಂದೇ ಜಾತಿಯ ಹಣ್ಣಿಗೆ ಒತ್ತೂಕೊಡದೆ ಎಲ್ಲಾ ಜಾತಿಯ ಮಾವು ಬೆಳೆಸಿದ್ದರಿಂದಾಗಿ ಈ ರೈತ ಹೆಚ್ಚಿನ ಲಾಭ ಪಡೆಯುವುದರ ಜೊತೆಗೆ ವಿದೇಶಕ್ಕೂ ಕೂಡ ಹಣ್ಣುಗಳನ್ನ ರಫ್ತು ಮಾಡುತ್ತಿದ್ದು, ಎಲ್ಲಾ ರೈತರಿಗಿಂತ ಭಿನ್ನವಾಗಿ ಕಾಣುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Wed, 15 May 24